ETV Bharat / bharat

ವಿಶೇಷ ಅಂಕಣ: ಬೇಕಿವೆ ಹೊಸ ರಾಜಕೀಯ ಮತ್ತು ಆರ್ಥಿಕ ಮಾದರಿಗಳು..! - ಕೊರೊನಾ ವೈರಸ್‌

ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆಗೆ ನಿಸರ್ಗವೇ ಒಂದು ಅದ್ಭುತ ಉದಾಹರಣೆ. ಪ್ರಸಕ್ತ ಸಂಕಷ್ಟದಿಂದ ಉದ್ಭವವಾಗುತ್ತಿರುವ ಅಂತಿಮ ಸತ್ಯವೆಂದರೆ ಇದೇ ಅನಿಸುತ್ತದೆ. ಈ ಬೃಹತ್‌ ಜಗತ್ತಿನಲ್ಲಿ ಕಂಡು ಬರುವ ವಿವಿಧತೆಯಲ್ಲಿ ಏಕತೆಯನ್ನು ಗೌರವಿಸುವುದನ್ನು ಮನುಕುಲ ಕಲಿಯಬೇಕು.

ಹೊಸ ರಾಜಕೀಯ ಮತ್ತು ಆರ್ಥಿಕ ಮಾದರಿಗಳು
New Political and Economic Models
author img

By

Published : May 20, 2020, 2:28 PM IST

ಹೈದರಾಬಾದ್: ಕೊರೊನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಘೋಷಣೆಯಾಗಿರುವ ದಿಗ್ಬಂಧನಕ್ಕೆ ಒಂದೂವರೆ ತಿಂಗಳುಗಳಾಗಿದ್ದು, ಎಲ್ಲರೂ ಮನೆಯೊಳಗೇ ಇರುವಂತಾಗಿದೆ. ಆದರೆ, ನಿಸರ್ಗ ಮಾತ್ರ ಚೈತನ್ಯದಿಂದ ನಳನಳಿಸುತ್ತಿದ್ದು ಅದಕ್ಕೆ ಹೊಸ ಜೀವ ಬಂದಿರುವುದನ್ನು ಬಹುತೇಕರು ಗಮನಿಸಿದ್ದಾರೆ. ಗಾಳಿ ಈಗ ತಾಜಾ ಆಗಿದೆ, ಮರಗಳ ಹಸಿರು ಹೆಚ್ಚಿದೆ ಹಾಗೂ ನದಿಗಳು ಎಂದಿಗಿಂತ ಹೆಚ್ಚು ಶುದ್ಧವಾಗಿ ಹರಿಯತೊಡಗಿವೆ. ಇದುವರೆಗಿನ ಪರಿಸರದ ಅವನತಿಗೆ ಮನುಷ್ಯನ ಹಸ್ತಕ್ಷೇಪವೇ ಕಾರಣ ಎಂಬುದಕ್ಕೆ ಈ ಬೆಳವಣಿಗೆ ನೇರ ಸಾಕ್ಷ್ಯವನ್ನು ಒದಗಿಸಿದಂತಾಗಿದೆ.

ಇದರ ನೇರ ಸಂದೇಶ ಏನೆಂದರೆ, ಮನುಷ್ಯ ಪ್ರಕೃತಿಯ ಮಾಲೀಕನಲ್ಲ. ಆತ ಅದನ್ನು ಯಾವತ್ತೂ ಗೆಲ್ಲಲು ಆಗಿಲ್ಲ ಅಥವಾ ಗೆಲ್ಲುವ ಪ್ರಯತ್ನವನ್ನೂ ಆತ ಮಾಡಬಾರದು. ಇನ್ನು, ವಾಸ್ತವದ ಅಂಶವೆಂದರೆ, ಮನುಷ್ಯನ ಅಸ್ತಿತ್ವ ನಿಂತಿರುವುದೇ ಪರಿಸರದ ಮೇಲೆ. ಬದುಕಿಗೆ ಬೇಕಾದ ಎಲ್ಲವನ್ನೂ ಪ್ರಕೃತಿ ಒದಗಿಸುತ್ತಿರುವುದರಿಂದ, ಮನುಷ್ಯನ ಜೀವನವಷ್ಟೇ ಅಲ್ಲ, ಮರಣವೂ ಅದರ ಕೈಯಲ್ಲಿಯೇ ಇದೆ. ಜೀವಂತ ಹಾಗೂ ನಿರ್ಜೀವ ವಸ್ತುಗಳ ಈ ಸಂಕೀರ್ಣ ಬಲೆಯಲ್ಲಿ ಮನುಷ್ಯ ಒಂದು ಸಣ್ಣ ಭಾಗವಷ್ಟೇ. ಹಲವಾರು ಪರಸ್ಪರ ಪ್ರಕ್ರಿಯೆಗಳು ನಡೆಯುತ್ತಿದ್ದು, ಇವುಗಳಿಂದಾಗಿ ಮಾನವ ಜೀವನವನ್ನು ಬೆಂಬಲಿಸಲು ಅವಶ್ಯಕವಾದ ಸಮತೋಲನ ಕಾಯುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆಗೆ ನಿಸರ್ಗವೇ ಒಂದು ಅದ್ಭುತ ಉದಾಹರಣೆ. ಪ್ರಸಕ್ತ ಸಂಕಷ್ಟದಿಂದ ಉದ್ಭವವಾಗುತ್ತಿರುವ ಅಂತಿಮ ಸತ್ಯವೆಂದರೆ ಇದೇ ಅನಿಸುತ್ತದೆ. ಈ ಬೃಹತ್‌ ಜಗತ್ತಿನಲ್ಲಿ ಕಂಡು ಬರುವ ವಿವಿಧತೆಯಲ್ಲಿ ಏಕತೆಯನ್ನು ಗೌರವಿಸುವುದನ್ನು ಮನುಕುಲ ಕಲಿಯಬೇಕು. ಈ ಸೂಕ್ಷ್ಮ ಸಮನ್ವಯತೆಯನ್ನು ಕಲಕದ ರೀತಿ ಪ್ರಕೃತಿ ಮತ್ತು ಅದರ ಸಮಸ್ತ ಜೀವಿಗಳ ಜೊತೆ ಮನುಷ್ಯನ ಜೀವನಶೈಲಿಯು ಸಮ್ಮಿಳಿತವಾಗಿರಬೇಕು. ಯಾವುದೇ ಚಟುವಟಿಕೆ ಮನುಷ್ಯನ ಅವಶ್ಯಕತೆಗಳನ್ನು ಈಡೇರಿಸುವುದರ ಆಚೆ ಇದ್ದಲ್ಲಿ, ಸಮುದಾಯದ ದೊಡ್ಡ ಪ್ರಮಾಣದ ಹಾಗೂ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ಅವಶ್ಯಕತೆಗಳನ್ನು ಈಡೇರಿಸಲು ನೈಸರ್ಗಿಕ ವ್ಯವಸ್ಥೆಯನ್ನು ಏರುಪೇರು ಮಾಡುವ ಮೂಲಕ ಪ್ರಯತ್ನಿಸುವ ಹಾಗಿದ್ದರೆ, ಅದು ಪ್ರಕೃತಿಗಷ್ಟೇ ಅಲ್ಲ ಮನುಷ್ಯರಿಗೂ ಸಮಸ್ಯೆ ಉಂಟು ಮಾಡಲಿದೆ.

ತೀರಾ ಇತ್ತೀಚಿನವರೆಗೆ ಸಾಮಾನ್ಯವಾಗಿದ್ದ, ಐಹಿಕ ವಸ್ತುಗಳನ್ನು ಹೊಂದಬೇಕೆನ್ನುವ ಬದುಕಿನ ತೀವ್ರಗತಿ ಈಗ ಇದ್ದಕ್ಕಿದ್ದಂತೆ ದಿಢೀರ್ ನಿಲುಗಡೆಗೆ ಬಂದುಬಿಟ್ಟಿದೆ. ಸದಾ ವಿಮಾನಗಳ ಮೂಲಕವೇ ಪ್ರಯಾಣ ಮಾಡುತ್ತಿದ್ದವರು ಹಾಗೂ ರೈಲಿನಲ್ಲಿ ಹೋದರೆ ತಡವಾಗುತ್ತದೆ ಎನ್ನುತ್ತಿದ್ದವರು ಈಗ ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ. ಹಣ ಮುಖ್ಯವಾಗಿದ್ದರೂ, ನೀವು ಬಯಸಿದ್ದನ್ನು ಮಾರುಕಟ್ಟೆಯಿಂದ ಖರೀದಿಸಲು ನಿಮಗೆ ಸಾಧ್ಯವಾಗದೇ ಹೋದಾಗ ಅದರಿಂದ ಯಾವ ಉಪಯೋಗವೂ ಇಲ್ಲ. ಅಲ್ಲದೇ, ಬದುಕಲು ಅಷ್ಟೊಂದು ಹಣ ಅಥವಾ ಸಂಪನ್ಮೂಲಗಳು ನಿಜಕ್ಕೂ ನಮಗೆ ಬೇಕಿಲ್ಲ ಎಂಬುದು ಎಲ್ಲರಿಗೂ ಈಗ ನಿಧಾನವಾಗಿ ಮನದಟ್ಟಾಗುತ್ತಿದೆ.

ಕೊರೊನಾ ವೈರಸ್‌ನ ಭೀತಿ ನಿಜಕ್ಕೂ ದೊಡ್ಡ ಸಮಾನತೆಯ ಹರಿಕಾರ ಎನಿಸಿದೆ. ಏಕೆಂದರೆ, ಪ್ರತಿಯೊಬ್ಬ ಮನುಷ್ಯನನ್ನೂ ಅದು ಸಮಾನವಾಗಿ ಇಟ್ಟಿದೆ. ಮನುಷ್ಯರ ನಡುವೆ ಅದು ಯಾವ ಭೇದವನ್ನೂ ಎಣಿಸುವುದಿಲ್ಲ. ಒಬ್ಬ ಬಡವನಲ್ಲಿ ಮೂಡಿಸಬಹುದಾದ ಅಸಹಾಯಕತೆಯನ್ನೇ ಶ್ರೀಮಂತ ಮತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿಯೂ ಅದು ಮೂಡಿಸಿದೆ. ಅಲ್ಲದೇ ಅದರಲ್ಲಿ ಒಂದು ಸಂದೇಶವೂ ಇದೆ. ಮನುಷ್ಯ ನಿರ್ಮಿತ ಎಲ್ಲಾ ಗುರುತಿನ ವಿಭಾಗಗಳು, ಮುಖ್ಯವಾಗಿ ‍ಶ್ರೇಣೀಕೃತ ಹಂತಗಳು ಯಾವ ಅರ್ಥವನ್ನೂ ಹೊಂದಿಲ್ಲ ಎಂಬುದೇ ಆ ಸಂದೇಶ. ಅವುಗಳಿಗೆ ಸಂಬಂಧಿಸಿದ ಸಂಘರ್ಷಗಳು ಮತ್ತು ದಿಗ್ವಿಜಯಗಳಿಗೆ ಯಾವುದೇ ಮೌಲ್ಯವಿಲ್ಲ.

ಒಬ್ಬ ಮನುಷ್ಯ ಇನ್ನೊಬ್ಬನ ಮೇಲೆ ಗೆಲುವು ಸಾಧಿಸಬಲ್ಲನಾದರೂ, ಮಾರಕ ವೈರಸ್‌ ಎದುರು ಇಬ್ಬರೂ ಶರಣಾಗಲೇಬೇಕು. ಹೀಗಾಗಿ ಮಾನವರೆಲ್ಲ ಸಮಾನರು ಹಾಗೂ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ ಎಂಬುವು ನಿಸರ್ಗದತ್ತ ತತ್ವಗಳೆಂಬುದನ್ನು ಅದು ಸಾಬೀತುಪಡಿಸಿದೆ. ಬದುಕುವ ಹಕ್ಕು ಎಲ್ಲರಿಗೂ ಇದೆ ಎಂಬುದು ಹಿಂದೆಂದಿಗಿಂತಲೂ ಈಗ ಸ್ಪಷ್ಟವಾಗಿದೆ ಮತ್ತು ಒಪ್ಪಿತವಾಗಿದೆ. ಪಾಲ್ಗೊಳ್ಳುವಿಕೆಯ ಸಮಾನ ಹಕ್ಕುಗಳನ್ನು ಎಲ್ಲರಿಗೂ ನೀಡುವ ಪ್ರಜಾಪ್ರಭುತ್ವ ವ್ಯವಸ್ಥೆಯೊಂದೇ ನಾವು ಕೆಲಸ ಮಾಡಬಹುದಾದ ಕ್ಷೇತ್ರ ಎಂಬುದು ಈಗ ಸಾಬೀತಾಗಿದೆ.

ಮನುಷ್ಯರೆಲ್ಲರೂ ಸಮಾನರು. ಅಂದರೆ, ಈ ಭೂಮಿ ಮತ್ತದರ ಅಗಣಿತ ನೈಸರ್ಗಿಕ ಸಂಪನ್ಮೂಲಗಳನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು ಮತ್ತು ಸಮಾನ ರೀತಿಯಲ್ಲಿ ಅವು ಹಂಚಿಕೆಯಾಗಬೇಕು ಎಂದರ್ಥ. ಯಾರಿಗೇ ಆಗಲಿ, ವಿಶೇಷವಾಗಿ ಖಾಸಗಿ ಸಂಸ್ಥೆಗಳಿಗೆ, ತಮ್ಮ ಲಾಭವನ್ನು ಗರಿಷ್ಠಗೊಳಿಸಿಕೊಳ್ಳುವ ಉದ್ದೇಶದಿಂದ ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ. ಈ ಮಾದರಿಯ ಅಭಿವೃದ್ಧಿಯಿಂದ ಸಾಧಿಸಲಾಗುತ್ತಿದ್ದ ಪ್ರಗತಿ ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೊರೊನಾ ವೈರಸ್‌ ಭೀತಿಯಂತಹ ಸವಾಲಿನ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮುಂದುವರಿಯದು ಕೂಡಾ. ಒಟ್ಟು ಆಂತರಿಕ ಬೆಳವಣಿಗೆ ದರಗಳ ಕುರಿತು ಈಗ ಯಾರೂ ಲಕ್ಷಿಸರು. ಎಲ್ಲರಿಗೂ ಈಗ ತಮ್ಮ ಜೀವ ಉಳಿಸಿಕೊಳ್ಳುವುದೊಂದೇ ಚಿಂತೆ.

ದಿಗ್ಬಂಧನದ ಅವಧಿಯಲ್ಲಿ, ಮೂಲ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವ ಮೂಲಕ ಬದುಕುವುದನ್ನು ಮನುಷ್ಯ ಕಲಿತಿದ್ದಾನೆ. ಇದುವರೆಗೆ ಇದ್ದ ಬಳಕೆದಾರ ಪ್ರಧಾನ ಮಾದರಿಯು ಈಗ ಅವಶ್ಯಕತೆ ಈಡೇರಿಕೆ ಆಧರಿತ ಸಾರ್ಥಕತೆ ಮಾದರಿಗೆ ದಾರಿ ಮಾಡಿಕೊಟ್ಟಿದೆ. ಗರಿಷ್ಠ ಲಾಭ ಗಳಿಕೆಯ ಸ್ಥಾನವನ್ನು ಬದುಕಲು ಇಷ್ಟಿದ್ದರೆ ಸಾಕು ಎಂಬುದು ಆವರಿಸಿದೆ. ಈಗ ಮನುಷ್ಯನಿಗೆ ದಾರಿ ತೋರಬಲ್ಲ ಶಕ್ತಿ ಸಹಕಾರವೇ ಹೊರತು ಸ್ಪರ್ಧೆಯಲ್ಲ. ತಮ್ಮ ಸಹ ಮನುಷ್ಯರಿಗೆ ನೆಮ್ಮದಿ ತಂದುಕೊಡಲು ಜನರು ಮುಂದಾಗಿರದಿದ್ದರೆ, ಈ ದಿಗ್ಬಂಧನ ಅವಧಿಯು ಇನ್ನಷ್ಟು ಕಷ್ಟನಷ್ಟಗಳನ್ನು ಕಾಣಬೇಕಾಗುತ್ತಿತ್ತು. ಆದ್ದರಿಂದ ಎಲ್ಲಾ ನೀತಿ ರೂಪಿಸುವಲ್ಲಿ ಸಹಾನುಭೂತಿ ಮುಖ್ಯವಾಗಬೇಕೇ ಹೊರತು ರಾಜಕೀಯ ಅಥವಾ ಆರ್ಥಿಕತೆ ಅಲ್ಲ.

ಸಾಂಸ್ಕೃತಿಕ, ಜನಾಂಗೀಯ, ಧಾರ್ಮಿಕ, ರಾಷ್ಟ್ರೀಯತೆಗಳ ವಿವಿಧ ಗುರುತುಗಳ ನಡುವಿನ ದ್ವೇಷ ಮತ್ತು ಸಂಘರ್ಷದ ರಾಜಕೀಯಕ್ಕೆ ಈಗ ಯಾವ ಬೆಲೆಯೂ ಇಲ್ಲ. ಅವುಗಳನ್ನು ತಿರಸ್ಕರಿಸಿ ಮೈತ್ರಿ ಮತ್ತು ಒಗ್ಗಟ್ಟನ್ನು ಮನುಕುಲ ಹೊಂದಬೇಕಿದೆ. ಸೇನಾ ದೃಷ್ಟಿಯಿಂದ ಜಗತ್ತಿನ ಅತಿ ಪ್ರಬಲ ದೇಶವೆನಿಸಿರುವ ಅಮೆರಿಕವು ಕೊರೊನಾ ವೈರಸ್‌ನಿಂದಾಗಿ ಅಧಿಕ ಪ್ರಮಾಣದ ಸಾವುಗಳನ್ನು ಕಂಡಿದೆ. ಯಾವುದೇ ಯುದ್ಧದಲ್ಲಿ ಈ ಪರಿಯ ಸಾವುಗಳನ್ನು ಕನಸಿನಲ್ಲಿಯೂ ಕಾಣದಿದ್ದ ದೇಶ ಈ ವೈರಸ್‌ ಎದುರು ಅಸಹಾಯಕವಾಗಿದೆ. ತನ್ನದೇ ನಾಗರಿಕರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ದೇಶವು ರಕ್ಷಣಾ ಕ್ಷೇತ್ರಕ್ಕೆ ಅಷ್ಟೊಂದು ಹಣ ವೆಚ್ಚ ಮಾಡುವುದರಿಂದ ಇರುವ ಪ್ರಯೋಜನವಾದರೂ ಏನು? ಅತ್ಯಂತ ಪ್ರಬಲವಾಗಿರುವ ಅಣ್ವಸ್ತ್ರ, ರಸಾಯನಿಕ ಅಸ್ತ್ರ ಅಥವಾ ಜೈವಿಕ ಅಸ್ತ್ರಗಳು ಈ ವೈರಸ್‌ ಎದುರು ಜನರನ್ನು ಕಾಪಾಡುವಲ್ಲಿ ನಿರುಪಯೋಗಿ ಎನಿಸಿಬಿಟ್ಟಿವೆ.

ಯುದ್ಧ ಸಿದ್ಧತೆ ಬಿಡಿ, ಪರಸ್ಪರರೊಂದಿಗೆ ಜೊತೆಯಾಗಿ ಕೆಲಸ ಮಾಡಲು ಮುಂದಾಗುವುದೊಂದೇ ಮನುಕುಲವನ್ನು ಉಳಿಸಬಲ್ಲುದು ಎಂಬುದು ಈಗ ಸ್ಪಷ್ಟವಾಗಿದೆ. ಹೀಗಾಗಿ ಎಲ್ಲಾ ರೀತಿಯ ದ್ವೇಷ ಮತ್ತು ಪ್ರತಿಸ್ಪರ್ಧಿತನವನ್ನು ಬಿಡಬೇಕು, ಸಾಧ್ಯವಾದರೆ ವಿಶ್ವ ಸಂಸ್ಥೆಯ ಮೂಲಕ, ಯುದ್ಧ ಮಾಡದಿರುವ ಒಪ್ಪಂದಗಳಿಗೆ ಸಾಮೂಹಿಕವಾಗಿ ಸಹಿ ಹಾಕಬೇಕು ಹಾಗೂ ಪೇರಿಸಿಟ್ಟುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಮತ್ತು ಸೈನ್ಯವನ್ನು ಕಳಚಿ ಹಾಕಬೇಕು.

ದೇಶಗಳ ನಡುವೆ ಮನ್ನಣೆಗಾಗಿ ನಡೆಯುತ್ತಿರುವ ಸ್ಪರ್ಧೆ ಕ್ಷೀಣಿಸುತ್ತಿದ್ದು, ರಾಷ್ಟ್ರೀಯತೆಯ ಜಾಗದಲ್ಲಿ ಈಗ ಅಂತಾರಾಷ್ಟ್ರೀಯತೆ ಬರಬೇಕಿದೆ. ವಿಶ್ವ ಸಂಸ್ಥೆಯು ಒಂದು ಪ್ರಮುಖ ಸಂಸ್ಥೆಯಾಗಬೇಕಿದ್ದು, ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯ ಮೂಲಕ ಜಾಗತಿಕ ಆಡಳಿತವನ್ನು ದೇಶಗಳ ನಡುವೆ ನಡೆಸಬೇಕು. ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಭದ್ರತಾ ಸಮಿತಿ ಮತ್ತು ವಿಟೊ (ಪರಮಾಧಿಕಾರ) ಚಲಾವಣೆಗೆ ಯಾವುದೇ ಸ್ಥಾನ ಇರುವುದಿಲ್ಲ. ಪ್ರತಿಯೊಂದು ದೇಶ ಹಾಗೂ ಸಮುದಾಯಗಳು ಯಾವುದೇ ಒಂದು ದೇಶದೊಂದಿಗೆ ಗುರುತಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ ಅಥವಾ ಜನರು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ವಾಸಿಸುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ, ಪ್ರತಿಯೊಂದು ದೇಶಕ್ಕೂ ವಿಶ್ವ ಸಂಸ್ಥೆಯಲ್ಲಿ ಸಮಾನ ಮತ ಹಕ್ಕನ್ನು ನೀಡಬೇಕು.

ವಿಶ್ವ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಾದ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್‌, ವಿಶ್ವ ವಾಣಿಜ್ಯ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ನಿಧಿ ಮುಂತಾದವುಗಳಿಗೆ ಸಾಕಷ್ಟು ಅನುದಾನ ಒದಗಿಸುವ ಮೂಲಕ ನೈಸರ್ಗಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಅವುಗಳನ್ನು ಸನ್ನದ್ಧವಾಗಿಸಬೇಕು. ಸರಕಾರಗಳು ಸಾಮಾಜಿಕ ಕಲ್ಯಾಣ ಕೆಲಸಗಳ ಮೇಲೆ ವೆಚ್ಚವನ್ನು ಹೆಚ್ಚಿಸಬೇಕಾದ ನಿರೀಕ್ಷೆಯಿರುವ ಪ್ರಸಕ್ತ ಸಾಂಕ್ರಾಮಿಕ ಸಂಕಷ್ಟದ ಸಮಯದಲ್ಲಿ, ವಿಶ್ವ ಬ್ಯಾಂಕ್‌ ಮತ್ತು ವಿಶ್ವ ಹಣಕಾಸು ಸಂಸ್ಥೆ ಅಥವಾ ವಿಶ್ವ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳು ಈ ಕೆಲಸದಲ್ಲಿ ಏಕೆ ಹಿಂದುಳಿದಿವೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಸಾರಾಂಶ ರೂಪದಲ್ಲಿ ಹೇಳುವುದಾದರೆ, ಗರಿಷ್ಠ ಲಾಭ ಹೊಂದುವ ದೃಷ್ಟಿ ಇಲ್ಲದ, ಆದರೆ ಎಲ್ಲಾ ಮನುಷ್ಯರ ಮೂಲ ಅವಶ್ಯಕತೆಗಳನ್ನು ಈಡೇರಿಸುವ ಉದ್ದೇಶವನ್ನು ಆಧರಿಸಿರುವ ಹೊಸ ಆರ್ಥಿಕತೆಯ ಮಾದರಿಯೊಂದನ್ನು ನಾವು ಅಭಿವೃದ್ಧಿಪಡಿಸಬೇಕಿದೆ. ಅದೇ ರೀತಿ, ಸ್ಪರ್ಧೆ ಅಥವಾ ಏಕವ್ಯಕ್ತಿ ನಾಯಕತ್ವವನ್ನು ಆಧರಿಸಿರದ, ಆದರೆ ಸಹಬಾಳ್ವೆ ಮತ್ತು ಜೊತೆಯಾಗಿ ಕೆಲಸ ಮಾಡುವುದನ್ನು ಆಧರಿಸಿರುವ ಹೊಸ ರಾಜಕೀಯ ಆಡಳಿತದ ಮಾದರಿಯೊಂದು ಈಗ ಹೊಮ್ಮಬೇಕಿದೆ. ಇಂತಹದೊಂದು ನಿರ್ಣಾಯಕ ಪರಿವರ್ತನೆಯ ಮೇಲೆ ಮನುಕುಲದ ಅಳಿವು ಮತ್ತು ಉಳಿವು ನಿಂತಿದೆ.

- ಐ.ಡಿ. ಖಜೂರಿಯಾ ಮತ್ತು ಸಂದೀಪ್‌ ಪಾಂಡೆ

ಐ.ಡಿ. ಖಜೂರಿಯಾ ಅವರು ಇಂಟರ್‌ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ಲಾಟ್‌ಫಾರ್ಮ್‌ ಹಾಗೂ ಸಂದೀಪ್ ಪಾಂಡೆ ‌ಅವರು ಸೋಷಲಿಸ್ಟ್‌ ಪಕ್ಷ (ಭಾರತ) ಜೊತೆ ಇದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.