ನವದೆಹಲಿ: ವಿದೇಶದಲ್ಲಿರುವ ಭಾರತೀಯರ ಸಂಪರ್ಕ ಸಾಧಿಸುತ್ತಲೇ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಸುಷ್ಮಾ ಸ್ವರಾಜ್ರ ಹಾದಿಯಲ್ಲೇ ನೂತನ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಾಗುತ್ತಿದ್ದಾರೆ.
ಟ್ವಿಟ್ಟರ್ ಮೂಲಕ ತಮ್ಮನ್ನು ಸಂಪರ್ಕಿಸಿ, ಸಹಾಯ ಬಯಸುತ್ತಿದ್ದ ಭಾರತೀಯರಿಗೆ ಸುಷ್ಮಾ ಕೂಡಲೇ ಸ್ಪಂದಿಸಿ ನೆರವು ನೀಡುತ್ತಿದ್ದರು. ನೂತನ ಸಚಿವ ಜೈಶಂಕರ್ ಕೂಡ ತಮಗೆ ಬಂದ ಟ್ವೀಟ್ಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ, ನೆರವಿನ ಭರವಸೆ ನೀಡುತ್ತಿದ್ದಾರೆ.
-
Appreciate the prompt action on this Suhel @IndEmbRiyadh. Pl keep me apprised https://t.co/yGFyJDf1uJ
— Dr. S. Jaishankar (@DrSJaishankar) June 1, 2019 " class="align-text-top noRightClick twitterSection" data="
">Appreciate the prompt action on this Suhel @IndEmbRiyadh. Pl keep me apprised https://t.co/yGFyJDf1uJ
— Dr. S. Jaishankar (@DrSJaishankar) June 1, 2019Appreciate the prompt action on this Suhel @IndEmbRiyadh. Pl keep me apprised https://t.co/yGFyJDf1uJ
— Dr. S. Jaishankar (@DrSJaishankar) June 1, 2019
ರಿಂಕಿ ಎಂಬುವರು ಸಚಿವರಿಗೆ ಟ್ವೀಟ್ ಮಾಡಿ, ಅಮೆರಿಕಾದಲ್ಲಿರುವ ನನ್ನ 2 ವರ್ಷದ ಮಗಳು ಕಳೆದ ಆರು ತಿಂಗಳಿನಿಂದ ಸಂಕಷ್ಟಕ್ಕೀಡಾಗಿದ್ದಾಳೆ. ಆದರೆ ನಾನು ಭಾರತದಲ್ಲಿದ್ದೇನೆ. ದಯಮಾಡಿ ನನಗೆ ಸಹಾಯ ಮಾಡಿ ಎಂದು ಗೋಗರೆದಿದ್ದಾರೆ. ಅದಕ್ಕೆ ಜೈಶಂಕರ್ ಅವರು, ಅಮೆರಿಕದ ನಮ್ಮ ರಾಯಭಾರಿ ಕಚೇರಿಗೆ ಈ ಬಗ್ಗೆ ದಾಖಲೆ ಕಳುಹಿಸಿ ಎಂದು ಟ್ವಿಟ್ಟರ್ ವಿಳಾಸ ಕಳುಹಿಸಿದ್ದಾರೆ.
-
Our Ambassador @harshvshringla is on the job. Please share with him all the details @IndianEmbassyUS https://t.co/a55jI6XHiY
— Dr. S. Jaishankar (@DrSJaishankar) June 1, 2019 " class="align-text-top noRightClick twitterSection" data="
">Our Ambassador @harshvshringla is on the job. Please share with him all the details @IndianEmbassyUS https://t.co/a55jI6XHiY
— Dr. S. Jaishankar (@DrSJaishankar) June 1, 2019Our Ambassador @harshvshringla is on the job. Please share with him all the details @IndianEmbassyUS https://t.co/a55jI6XHiY
— Dr. S. Jaishankar (@DrSJaishankar) June 1, 2019
ಅಫಿಮ್ ಎಂಬಾಕೆ, ತನ್ನ ಪತಿ ಕೋರ್ಟ್ ಸಮನ್ಸ್ಗೂ ಪ್ರತಿಕ್ರಿಯೆ ನೀಡದೇ ಕುವೈತ್ನಲ್ಲಿ ನೆಲೆಸಿದ್ದಾರೆ. ಇತ್ತ ಅವರ ಪೋಷಕರು ಸಹ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಆತನನ್ನು ಭಾರತಕ್ಕೆ ವಾಪಾಸ್ ಕರೆಸಿಕೊಳ್ಳಲು ಸಹಾಯ ಮಾಡಿ ಎಂದು ಅಲವತ್ತುಕೊಂಡಿದ್ದಾರೆ. ಇದಕ್ಕೆ ಸಚಿವರು, ಕುವೈತ್ನಲ್ಲಿರುವ ನಮ್ಮ ರಾಯಭಾರಿ ಈಗಾಗಲೇ ಈ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿರಿ ಎಂದು ಟ್ವಿಟ್ಟರ್ ವಿಳಾಸ ನೀಡಿದ್ದಾರೆ.
-
Our Embassy in Kuwait is already working on it. Please be in touch with them @indembkwt https://t.co/w9BRPXTTZr
— Dr. S. Jaishankar (@DrSJaishankar) June 2, 2019 " class="align-text-top noRightClick twitterSection" data="
">Our Embassy in Kuwait is already working on it. Please be in touch with them @indembkwt https://t.co/w9BRPXTTZr
— Dr. S. Jaishankar (@DrSJaishankar) June 2, 2019Our Embassy in Kuwait is already working on it. Please be in touch with them @indembkwt https://t.co/w9BRPXTTZr
— Dr. S. Jaishankar (@DrSJaishankar) June 2, 2019
ಹೀಗೆ ಹಲವರ ಸಮಸ್ಯೆಗೆ ಸಚಿವರು ಪ್ರತಿಕ್ರಿಯೆ ನೀಡಿ,ಸಹಾಯ ಹಸ್ತ ಚಾಚುತ್ತಿದ್ದಾರೆ. ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಜೈಶಂಕರ್ ಹೇಳಿಕೆ ನೀಡಿದ್ದರು. ಇದೀಗ ಅವರ ಮಾದರಿಯಲ್ಲಿಯೇ ಕೆಲಸ ಮುಂದುವರೆಸಿದ್ದಾರೆ.