ETV Bharat / bharat

ಅಪರಿಚಿತ ವ್ಯಕ್ತಿಯಿಂದ ಭಾರತೀಯ ರೈತ ಸಂಘದ ರಾಷ್ಟ್ರೀಯ ವಕ್ತಾರನಿಗೆ ಜೀವ ಬೆದರಿಕೆ - ಅಪರಿಚಿತ ವ್ಯಕ್ತಿಯಿಂದ ಭಾರತೀಯ ರೈತ ಸಂಘದ ರಾಷ್ಟ್ರೀಯ ವಕ್ತಾರರಿಗೆ ಜೀವ ಬೆದರಿಕೆ

ಅಪರಿಚಿತ ವ್ಯಕ್ತಿಯಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಭಾರತೀಯ ರೈತ ಸಂಘದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈಟ್ ದೂರು ನೀಡಿದ್ದಾರೆ.

National spokesperson of Bharatiya Kisan Union Rakesh Tikait get threat call
ರೈತ ಸಂಘದ ರಾಷ್ಟ್ರೀಯ ವಕ್ತಾರರಿಗೆ ಜೀವ ಬೆದರಿಕೆ
author img

By

Published : Dec 26, 2020, 9:24 PM IST

ಗಾಜಿಯಾಬಾದ್ (ಉತ್ತರ ಪ್ರದೇಶ): ಭಾರತೀಯ ರೈತ ಸಂಘದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈಟ್​​ಗೆ ಅಪರಿಚಿತ ಸಂಖ್ಯೆಯಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಕೌಶಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರೆ ಮಾಡಿದ ವ್ಯಕ್ತಿ ಎಷ್ಟು ಶಸ್ತ್ರಾಸ್ತ್ರಗಳು ಬೇಕು ಎಂದು ಕೇಳಿದ್ದಾನೆ ಎಂದು ರಾಕೇಶ್ ಟಿಕೈಟ್ ಹೇಳಿದ್ದಾರೆ. ನಾನು ಮರು ಪ್ರಶ್ನೆ ಮಾಡಿದ ನಂತರ, ನಿಮ್ಮನ್ನು ಕೊಲ್ಲಲು ಎಷ್ಟು ಶಸ್ತ್ರಾಸ್ತ್ರಗಳನ್ನು ತರಬೇಕು ಎಂದು ಆರೋಪಿ ಪ್ರಶ್ನಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಓದಿ ರೈತರ ಪ್ರತಿಭಟನೆಗೆ ಬೆಂಬಲ: ಎನ್​ಡಿಎ ಮೈತ್ರಿ ತೊರೆದ ಆರ್​ಎಲ್​ಪಿ

ಕಳೆದ 32 ದಿನಗಳಿಂದ ರಾಕೇಶ್ ಟಿಕೈಟ್ ಅವರ ನೇತೃತ್ವದಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ದೂರವಾಣಿ ಸಂಖ್ಯೆಯನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.