ETV Bharat / bharat

ಆಂತರಿಕ ವಿರೋಧದ ಮಧ್ಯೆ ಸೀಟಿಗೆ ಅಂಟಿಕೊಂಡು ಕುಳಿತ ನೇಪಾಳ ಪ್ರಧಾನಿ..! - ಸ್ಥಾಯಿ ಸಮಿತಿ ಸಭೆ

ನೇಪಾಳದ ಪ್ರಧಾನಿ ಒಲಿ ಅವರ ನಡವಳಿಕೆ ಕುರಿತಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತವು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನಿಮ್ಮ ಈ ನಿರ್ಣಯವನ್ನು “ಒಪ್ಪಲಾಗದು” ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಇದಾದ ಬಳಿಕ ಭಾನುವಾರ ಪ್ರತಿಕ್ರಿಯಿಸಿರುವ ಒಲಿ, ಭಾರತವು ತನ್ನನ್ನು ಪ್ರಧಾನಿ ಹುದ್ದೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದೆ ಎಂದು ವೃಥಾ ಆರೋಪ ಮಾಡಿದ್ದಾರೆ.

stickier wicket
ನೇಪಾಳ ಪ್ರಧಾನಿ
author img

By

Published : Jul 2, 2020, 6:17 PM IST

Updated : Jul 2, 2020, 6:58 PM IST

ನವದೆಹಲಿ: ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಸ್ಥಾಯಿ ಸಮಿತಿಯ ಮತ್ತಷ್ಟು ಸದಸ್ಯರು ಬುಧವಾರ ತಮ್ಮ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿರುವುದರಿಂದ ಹಿಮಾಲಯನ್ ದೇಶದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮುಂದಿನ ದಿನಗಳಲ್ಲಿ ತಮ್ಮ ಸರ್ವೋನ್ನತ ಹುದ್ದೆಗೆ ಹೆಚ್ಚಿನ ಸವಾಲುಗಳನ್ನು ಎದುರಿಸುವುದು ಸ್ಪಷ್ಟವಾಗಿದೆ.

ಕಠ್ಮಂಡುವಿನಲ್ಲಿ ನಡೆಯುತ್ತಿರುವ ಸ್ಥಾಯಿ ಸಮಿತಿ ಸಭೆಯಲ್ಲಿ ಬುಧವಾರ ಕೇವಲ ಐದು ಸದಸ್ಯರು ಮಾತನಾಡಿದ್ದರೂ, ಅವರೆಲ್ಲರೂ ಪ್ರಧಾನಮಂತ್ರಿಯಾಗಿ ಒಲಿಯ ಮುಂದುವರಿಕೆ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕಮ್ಯುನಿಸ್ಟ್‌ ಪಕ್ಷದ ಪ್ರಮುಖ ಮೂವರು ನಾಯಕರಾದ ಪೇಶಾಲ್ ಖತಿವಾಡಾ, ಮಾಟ್ರಿಕಾ ಯಾದವ್ ಮತ್ತು ಲೀಲಮಣಿ ಪೋಖ್ರೆಲ್ ಅವರು ಪ್ರಧಾನ ಮಂತ್ರಿ ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇತರ ಇಬ್ಬರು ನಾಯಕರಾದ - ನಂದಾ ಕುಮಾರ್ ಪ್ರಸೈನ್ ಮತ್ತು ಯೋಗೇಶ್ ಭಟ್ಟರೈ ಅವರು ಪ್ರಧಾನಿ ತಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ಪ್ರಧಾನಮಂತ್ರಿ ಒಲಿ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯನ್ನು ಕಮ್ಯುನಿಸ್ಟ್‌ ಪಕ್ಷದ ಸದಸ್ಯರ ಟೀಕೆಗಳ ನಂತರ ಸ್ಥಗಿತಗೊಳಿಸಲಾಗಿದೆ. ಮತ್ತೆ ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದುವರಿಯಲಿದೆ.

ಇತ್ತೀಚಿನ ದಿನಗಳಲ್ಲಿ ಚೀನಾ ಪರವಾಗಿ ನೇಪಾಳದ ಪ್ರಧಾನಿ ಒಲಿಯ ನಡವಳಿಕೆಗಳು, ಭಾರತ-ನೇಪಾಳ ಸಂಬಂಧಗಳಿಗೆ ಭಾರಿ ಒತ್ತಡವನ್ನುಂಟು ಮಾಡಿದೆ. ಕಳೆದ ತಿಂಗಳು ಪ್ರಧಾನಿ ಒಲಿ, ಸಂಸತ್ತಿನ ಮೂಲಕ ಭಾರತದ ಭೂಪ್ರದೇಶದ ವ್ಯಾಪ್ತಿಗೆ ಬರುವ ಕಲಾಪಣಿ, ಲಿಪುಲೆಖ್ ಮತ್ತು ಲಿಂಪಿಯಾಧುರಾ ಸೇರಿದಂತೆ ಕೆಲ ಭೂಪ್ರದೇಶಗಳು ನೇಪಾಳಕ್ಕೆ ಸೇರುತ್ತವೆ ಎಂಬುವಂತೆ ದೇಶದ ಹೊಸ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿದರು. ಕೈಲಾಸ ಮಾನಸರೋವರಕ್ಕೆ ಹೋಗುವ ಯಾತ್ರಾರ್ಥಿಗಳಿಗಾಗಿ ನಿರ್ಮಿಸಲಾಗಿರುವ ಲಿಪು ಲೇಖ್‌ವರೆಗಿನ ರಸ್ತೆಯನ್ನು ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮೇ ತಿಂಗಳಲ್ಲಿ ಉದ್ಘಾಟಿಸಿದ ನಂತರ ನೇಪಾಳದ ಕಡೆಯಿಂದ ಈ ಬೆಳವಣಿಗೆ ನಡೆದಿದೆ.

ನೇಪಾಳದ ಪ್ರಧಾನಿ ಒಲಿ ಅವರ ನಡವಳಿಕೆ ಕುರಿತಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತವು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನಿಮ್ಮ ಈ ನಿರ್ಣಯವನ್ನು “ಒಪ್ಪಲಾಗದು” ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಇದಾದ ಬಳಿಕ ಭಾನುವಾರ ಪ್ರತಿಕ್ರಿಯಿಸಿರುವ ಓಲಿ, ಭಾರತವು ತನ್ನನ್ನು ಪ್ರಧಾನಿ ಹುದ್ದೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದೆ ಎಂದು ವೃಥಾ ಆರೋಪ ಮಾಡಿದ್ದಾರೆ.

"ದೆಹಲಿಯ ಚಟುವಟಿಕೆ, ನೇಪಾಳದ ರಾಜಕೀಯದ ಒಂದು ನಿರ್ದಿಷ್ಟ ವಿಭಾಗ ಮತ್ತು ಅವರ ಸಹಯೋಗವು ಗಡಿ ವಿವಾದದ ಬಗ್ಗೆ ನನ್ನ ನಿಲುವಿನಿಂದಾಗಿ ನನ್ನನ್ನು ಕೆಳಗಿಳಿಸುವ ಉದ್ದೇಶವನ್ನು ಹೊಂದಿದೆ" ಎಂದು ಒಲಿ ಭಾನುವಾರ ಕಠ್ಮಂಡುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. "ನನ್ನನ್ನು ಹೊರಹಾಕುವಲ್ಲಿ ಅವರು ಯಶಸ್ವಿಯಾಗುತ್ತಾರೆಂದು ಯಾರೂ ಭಾವಿಸಬಾರದು." ಎಂದು ಒಲಿ ಇದೇ ವೇಳೆ ತಿಳಿಸಿದ್ದಾರೆ. ವೀಕ್ಷಕರ ಪ್ರಕಾರ, ಒಲಿ ಅವರ ಕ್ರಮಗಳು ಅವರು ತಮ್ಮ ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸದ ಕಾರಣ ಎನ್‌ಸಿಪಿಯೊಳಗಿನ ವಿರೋಧದಿಂದ ಉಂಟಾಗುತ್ತದೆ. ಕೊರೊನಾ ವೈರಸ್‌ ಪರಿಸ್ಥಿತಿ ನಿಭಾಯಿಸುವಲ್ಲಿ ಆದ ವೈಫಲ್ಯವನ್ನು ಮರೆಮಾಚುವ ದೃಷ್ಟಿಯಿಂದ ವಿಷಯಾಂತರ ಮಾಡಲು ಒಲಿ ಗಡಿ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ.

ಮಂಗಳವಾರ ನಡೆದ ಸ್ಥಾಯಿ ಸಮಿತಿಯ ಸಭೆಯಲ್ಲಿ ಎನ್‌ಸಿಪಿ ಸಹ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಪುಷ್ಪಾ ಕಮಲ್ ದಹಲ್ “ಪ್ರಚಂಡ” ಮತ್ತು ಹಿರಿಯ ನಾಯಕರಾದ ಮಾಧವ್ ಕುಮಾರ್ ನೇಪಾಳ್, ಝಲಾ ನಾಥ್ ಖನಾಲ್, ಬಾಂದೇವ್ ಗೌತಮ್ ಮತ್ತು ನಾರಾಯಣ್ ಕಾಜಿ ಶ್ರೇಷ್ಠಾ ಮತ್ತು ಇತರ 11 ಸದಸ್ಯರು‌ ಸೇರಿ ಪ್ರಧಾನಿ ಸ್ಥಾನಕ್ಕೆ ಒಲಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಬುಧವಾರದ ಸ್ಥಾಯಿ ಸಮಿತಿ ಸಭೆಯ ನಂತರ, ಕಠ್ಮಂಡು ಮೂಲದ ರಾಜಕೀಯ ಅರ್ಥಶಾಸ್ತ್ರಜ್ಞ ಹರಿ ರೋಕಾ ಈಟಿವಿ ಭಾರತ್‌ಗ ಜೊತೆ ಮಾತನಾಡಿದ್ದು, ಓಲಿ ತಮ್ಮ ಪಕ್ಷದೊಳಗೆ ಬಹುಮತ ಕಳೆದುಕೊಂಡಿದ್ದಾರೆ. ಪಕ್ಷದ 45 ಸದಸ್ಯರ ಸಮಿತಿಯಲ್ಲಿ ಕೇವಲ 15 ಮಂದಿ ಮಾತ್ರ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. "ಪಕ್ಷದ ಒಳಗೆ ಅವರನ್ನು ಪ್ರಚೋದಿಸುವುದು ಮುಂದುವರಿಸಿದರೆ, ಕಮ್ಯುನಿಸ್ಟ್ ಪಕ್ಷವನ್ನು ವಿಭಜಿಸುವುದಾಗಿ ಪ್ರಧಾನಿ ಹೇಳುತ್ತಿದ್ದಾರೆ" ಎಂದು ಪತ್ರಕರ್ತರಿಗೆ ರೋಕಾ, ನೇಪಾಳದ ರಾಜಧಾನಿಯಿಂದ ದೂರವಾಣಿ ಮೂಲಕ ತಿಳಿಸಿದ್ದಾರೆ.

ಪ್ರಧಾನಿ ಹುದ್ದೆಯಲ್ಲಿ ಮುಂದುವರಿಕೆಗೆ ವಿರೋಧಗಳ ಬೆಳವಣಿಗೆಗಳ ಮಧ್ಯೆ, ಪ್ರಧಾನಿ ಒಲಿ ಈಗ ಸಂಸತ್ತಿನಲ್ಲಿ ವಿಶ್ವಾಸ ಮತವನ್ನ ಬಯಸುತ್ತಿದ್ದಾರೆ. ಯಾಕೆಂದರೆ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದು ಸ್ಥಾಯಿ ಸಮಿತಿಯಲ್ಲ, ಸಂಸತ್ತು ಎಂಬುದು ಅವರ ಭಾವನೆಯಾಗಿದೆ ಎಂದು ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಪ್ರಧಾನಿ ಒಲಿ ಅವರು ತಾವು ನಿರ್ವಹಿಸುತ್ತಿರುವ ಪ್ರಧಾನಿ ಅಥವಾ ಎನ್‌ಸಿಪಿಯ ಸಹ ಅಧ್ಯಕ್ಷ ಎರಡು ಹುದ್ದೆಗಳಲ್ಲಿ ಒಂದನ್ನು ಬಿಡುವಂತೆ ಪಕ್ಷದಲ್ಲಿ ಬೇಡಿಕೆಗಳಿವೆ.

ರೋಕಾ ಪ್ರಕಾರ, ಒಲಿ ಪ್ರಧಾನ ಮಂತ್ರಿ ಸ್ಥಾನವನ್ನು ಕಳೆದುಕೊಂಡರೆ, ಎಲ್ಲಾ ರೀತಿಯಲ್ಲೂ ಪ್ರಧಾನಿ ಮತ್ತು ಎನ್‌ಸಿಪಿ ಅಧ್ಯಕ್ಷ ಹುದ್ದೆಗಳನ್ನು ದಹಲ್ ಮತ್ತು ನೇಪಾಳದ ಇನ್ನೊಬ್ಬ ಮಾಜಿ ಪ್ರಧಾನಿ ಮಾಧವ್ ಕುಮಾರ್ ಅವರು ಹಂಚಿಕೊಳ್ಳಲಿದ್ದಾರೆ. ಒಲಿ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಏಕೀಕೃತ ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಮತ್ತು ದಹಲ್ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಮಾವೋವಾದಿ ಕೇಂದ್ರ) ಎರಡೂ ಎಡಪಂಥೀಯ ಪಕ್ಷಗಳ ಏಕೀಕರಣದ ನಂತರ ಎನ್‌ಸಿಪಿ 2018 ರಲ್ಲಿ ಅಧಿಕಾರಕ್ಕೆ ಬಂದಿತ್ತು.

ನೆರೆಹೊರೆಯ ಪ್ರಾದೇಶಿಕ ಅಧ್ಯಯನ ಉಪಕ್ರಮದ ನವದೆಹಲಿ ಮೂಲದ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಹಿರಿಯ ಅಧಿಕಾರಿ ಕೆ. ಯೋಮ್ ಅವರ ಪ್ರಕಾರ, ನೇಪಾಳದ ಆಡಳಿತಾರೂಢ ಎನ್‌ಸಿಪಿಯ ಎರಡು ಗುಂಪುಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟವಿದೆ. ಒಂದು ಗುಂಪು ದಹಾಲ್ ಅವರನ್ನು ಬೆಂಬಲಿಸುತ್ತದೆ. "ಮಹಾಮಾರಿ ಕೋವಿಡ್ -19 ಬಿಕ್ಕಟ್ಟನ್ನು ಓಲಿ ನಿಭಾಯಿಸುವಲ್ಲಿ ಕಂಡ ವೈಫಲ್ಯದ ಕಾರಣ ಎರಡು ಗುಂಪುಗಳ ನಡುವೆ ಮನಸ್ತಾಪ ಮತ್ತಷ್ಟು ತಾರಕಕ್ಕೇರಿದೆ" ಎಂದು ಯೋಮ್, ಈಟಿವಿ ಭಾರತ್‌ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಭಾರತದ ವಿರುದ್ಧ ನೇಪಾಳದ ಪ್ರಧಾನಿ ಒಲಿ ಬಹಿರಂಗ ಆಕ್ರಮಣಕಾರಿ ವರ್ತನೆಗೆ ಮತ್ತೊಂದು ಕಾರಣವೆಂದರೆ ನೇಪಾಳದ ರಾಜಕೀಯದಲ್ಲಿ ಚೀನಾದ ನಿರಂತರ ಮೂಗು ತೂರಿಸುವಿಕೆ ಎಂದು ಅವರು ಹೇಳುತ್ತಾರೆ. "ನೇಪಾಳ ಈ ಹಿಂದೆ ಭಾರತದ ವಿರುದ್ಧ ಚೀನಾ ಕಾರ್ಡ್ ಅನ್ನು ಬಳಸಿದೆ. ಆದರೆ, ಅದನ್ನು ನೇಪಾಳ ಮರೆಮಾಚಿದೆ" ಎಂದು ಯೋಮೆ ಹೇಳಿದ್ದಾರೆ. "ಆದರೆ ಬದಲಾದ ಸಂಗತಿಯೆಂದರೆ, ಕಳೆದ ಎರಡು ವರ್ಷಗಳಿಂದ ಬೀಜಿಂಗ್, ಬಹಿರಂಗವಾಗಿ ಗೇಮ್‌ ಆಡಲು ಸಿದ್ಧವಿರುವುದಾಗಿ ಹೇಳಲು ಆರಂಭಿಸಿದೆ. ಇದರ ಮುಂದುವರೆದ ಭಾಗವೇ ಭಾರತ ಮತ್ತು ನೇಪಾಳದ ಭೌಗೋಳಿಕ ರಾಜಕೀಯ ಚಟುವಾಟಿಕೆಗಳಲ್ಲಿ ಆಗಿರುವ ಬದಲಾವಣೆ” ಈ ಮಧ್ಯೆ, ನೇಪಾಳದಲ್ಲಿ ಜಲವಿದ್ಯುತ್ ಯೋಜನೆಗಳನ್ನು ಚೀನಾ ಆರಂಭಿಸಿದೆ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪೆಟ್ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್‌ಐ) ಅಡಿಯಲ್ಲಿ ಕಾಠ್ಮಂಡುವಿನಿಂದ ಟಿಬೆಟ್‌ನ ಕೆರುಂಗ್‌ವರೆಗಿನ ರೈಲು ಮಾರ್ಗ‌ ಕಾಮಗಾರಿಯಲ್ಲಿ ಹೂಡಿಕೆ ಮಾಡಲು ಚೀನಾ ಪ್ರಾರಂಭಿಸಿದೆ.

ಮತ್ತೊಂದೆಡೆ, 2015 ರಲ್ಲಿ ಆರ್ಥಿಕ ದಿಗ್ಬಂಧನದ ನಂತರ ಹಿಮಾಲಯ ರಾಷ್ಟ್ರ (ನೇಪಾಳ) ದಲ್ಲಿ ಭಾರತ ವಿರೋಧಿ ಭಾವನೆಗಳು ಹೆಚ್ಚಾಗಿದ್ದು, ಯಾಕೆಂದರೆ ಆರ್ಥಿಕ ದಿಗ್ಬಂದನವು ನವದೆಹಲಿಯಿಂದ ಬೆಂಬಲಿತವಾಗಿದೆ ಎಂಬುದು ಅವರು ಆರೋಪವಾಗಿದೆ. ಜನರ ಮನಸ್ಸಿನಲ್ಲಿದ್ದ ಭಾರತ ವಿರೋಧಿ ಮನೋಭಾವನೆಯನ್ನೇ ಬಂಡವಾಲ ಮಾಡಿಕೊಂಡು ಒಲಿ ಸರ್ಕಾರವು ಅಧಿಕಾರಕ್ಕೆ ಏರಿತ್ತು. ಭಾರತವು ನೇಪಾಳದ ಅತಿದೊಡ್ಡ ಅಭಿವೃದ್ಧಿ ನೆರವು ಪಾಲುದಾರ ರಾಷ್ಟ್ರವಾಗಿದ್ದರೂ, ಉಭಯ ದೇಶಗಳು ಶತಮಾನಗಳಷ್ಟು ಹಳೆಯದಾದ ಜನರ ನಡುವಿನ ಸಂಬಂಧ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಹೊರತಾಗಿಯೂ ಈ ವಿರೋಧ ಮುಂದುವರೆದಿದೆ..

Last Updated : Jul 2, 2020, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.