ಮುಂಬೈ : ಅತಿಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡಿರುವ ಮಹಾರಾಷ್ಟ್ರಕ್ಕೆ ನಿಸರ್ಗ ಚಂಡಮಾರುತ ಅಪ್ಪಳಿಸಿದೆ. ಹಲವೆಡೆ ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. 120 ಕಿ. ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ರಾಯ್ಗಡ ಜಿಲ್ಲೆಯಲ್ಲಿ ಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಅನೇಕ ಮರಗಳು ಧರೆಗುರುಳಿವೆ. ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ನಿಸರ್ಗ ಚಂಡಮಾರುತ ಅಪ್ಪಳಿಸಿದ ಪರಿಣಾಮ ಸುಮಾರು ಒಂದು ಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಮಹಾನಿರ್ದೇಶಕ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.
ಚಂಡಮಾರುತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ 21 ಮತ್ತು ಗುಜರಾತ್‌ನಲ್ಲಿ 16 ಹೀಗೆ ಒಟ್ಟು 43 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ದಮನ್ ಮತ್ತು ದಿಯು ಎರಡೂ ರಾಜ್ಯಗಳಿಂದ ತಲಾ 40,000 ಜನರನ್ನ ಸ್ಥಳಾಂತರಿಸಲಾಗಿದೆ. ಈವರೆಗೆ ಸುಮಾರು ಒಂದು ಲಕ್ಷ ಜನರು ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಕರಾವಳಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜನರ ಸುರಕ್ಷತೆ ಬಗ್ಗೆ ಹೆಚ್ಚು ಜಾಗ್ರತೆ ವಹಿಸಲಾಗುತ್ತಿದೆ. ಮನೆಯಿಂದ ಹೊರ ಬಾರದಂತೆ ಜನರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಪೊಲೀಸ್ ಉಪ ಆಯುಕ್ತ ಪ್ರಣಯ್ ಆಶೋಕ್ ಹೇಳಿದ್ದಾರೆ.
-
#WATCH Tin roof atop a building in #Raigad blown away due to strong winds as #CycloneNisarga lands along #Maharashtra coast (Source: NDRF) pic.twitter.com/INlim5VG1c
— ANI (@ANI) June 3, 2020 " class="align-text-top noRightClick twitterSection" data="
">#WATCH Tin roof atop a building in #Raigad blown away due to strong winds as #CycloneNisarga lands along #Maharashtra coast (Source: NDRF) pic.twitter.com/INlim5VG1c
— ANI (@ANI) June 3, 2020#WATCH Tin roof atop a building in #Raigad blown away due to strong winds as #CycloneNisarga lands along #Maharashtra coast (Source: NDRF) pic.twitter.com/INlim5VG1c
— ANI (@ANI) June 3, 2020
ರಾಯ್ಗಡ್ನಲ್ಲಿ ಭಾರೀ ಗಾಳಿ ಬೀಸುತ್ತಿರುವ ಪರಿಣಾಮ ಮನೆಯ ಮೇಲ್ಛಾವಣಿಗಳು ಹಾರಿ ಹೋದ ದೃಶ್ಯ ಕಂಡು ಬಂದಿದೆ.