ETV Bharat / bharat

ಭೀಮಾ ಕೋರೆಗಾಂವ್ ಪ್ರಕರಣ: ಏ.4ರಂದು ಜೆಐಸಿ ಮುಂದೆ ಶರದ್ ಪವಾರ್ ಹಾಜರು - ಜೆಐಸಿ ಮುಂದೆ ಏ.4ರಂದು ಶರದ್ ಪವಾರ್ ಹಾಜರ್​

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಏಪ್ರಿಲ್ 4 ರಂದು ಭೀಮಾ ಕೋರೆಗಾಂವ್ ನ್ಯಾಯಾಂಗ ವಿಚಾರಣಾ ಆಯೋಗದ (ಜೆಐಸಿ) ಮುಂದೆ ಸಾಕ್ಷಿಯಾಗಿ ಹಾಜರಾಗಲಿದ್ದಾರೆ.

Bhima Koregaon case
ಭೀಮಾ ಕೋರೆಗಾಂವ್ ಪ್ರಕರಣ: ಜೆಐಸಿ ಮುಂದೆ ಏ.4ರಂದು ಶರದ್ ಪವಾರ್ ಹಾಜರ್​
author img

By

Published : Mar 18, 2020, 5:29 PM IST

ಮುಂಬೈ/ಮಹಾರಾಷ್ಟ್ರ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಭೀಮಾ ಕೋರೆಗಾಂವ್ ನ್ಯಾಯಾಂಗ ವಿಚಾರಣಾ ಆಯೋಗದ (ಜೆಐಸಿ) ಮುಂದೆ ಏಪ್ರಿಲ್ 4 ರಂದು ಸಾಕ್ಷಿಯಾಗಿ ಹಾಜರಾಗಲಿದ್ದಾರೆ.

ಆಯೋಗವು ಶರದ್ ಪವಾರ್ ಅವರೊಂದಿಗೆ, ಆಗಿನ ಪುಣೆ ಕಲೆಕ್ಟರ್​ ಸೌರಭ್ ರಾವ್ ಅವರನ್ನು ಏಪ್ರಿಲ್ 3 ಮತ್ತು 4 ರಂದು, ನಂತರ ಪುಣೆ ಎಸಿಪಿ ರವೀಂದ್ರ ಸೆಂಗಾಂವ್ಕರ್ ಅವರನ್ನು ಏಪ್ರಿಲ್ 1 ಮತ್ತು 3 ರಂದು, ಹಾಗೂ ಎಸ್ಪಿ ಮೊಹಮ್ಮದ್ ಸುವೆಜ್ ಹಕ್ ಮತ್ತು ಡಿಎಸ್ಪಿ ಸಂದೀಪ್ ಪಹಲೆ ಅವರನ್ನು ಮಾರ್ಚ್ 30 ಮತ್ತು 31 ರಂದು ಕರೆಸುವುದಾಗಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಜನವರಿ 1, 2018 ರಂದು, ಭೀಮಾ-ಕೋರೆಗಾಂವ್ ಯುದ್ಧದ 200 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ ಒಬ್ಬರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಪೊಲೀಸರು 162 ಜನರ ವಿರುದ್ಧ 58 ಪ್ರಕರಣಗಳನ್ನು ದಾಖಲಿಸಿದ್ದರು. ಅಲ್ಲದೇ ಹಿಂಸಾಚಾರಕ್ಕೆ ಕಾರಣಗಳನ್ನು ಕಂಡುಹಿಡಿಯಲು 2018 ರ ಫೆಬ್ರವರಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಜೆಐಸಿಯನ್ನು ರಚಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.