ಅಹಮದಾಬಾದ್ : ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 15 ಕೆಜಿ ಮಾದಕ ವಸ್ತುವನ್ನು ಎನ್ಸಿಬಿ ಅಧಿಕಾರಿಗಳು ಗುಜಾರಾತ್ನ ಅರಾವಳ್ಳಿ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದಾರೆ.
ತಮಗೆ ಸಿಕ್ಕ ಮಾಹಿತಿಯ ಮೇರೆಗೆ ರಾಜಸ್ಥಾನದಿಂದ ಬರುವ ವಾಹನಗಳನ್ನು ಅರಾವಳ್ಳಿ ಜಿಲ್ಲೆಯ ಮೊಡಾಸಾ ಪ್ರದೇಶದಲ್ಲಿ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಈ ವೇಳೆ ದೆಹಲಿ ನೋಂದಣಿ ಸಂಖ್ಯೆ ಇರುವ ವ್ಯಾಗನಾರ್ ಕಾರನ್ನು ಪೊಲೀಸರು ತಡೆದಿದ್ದಾರೆ.
ಈ ವೇಳೆ ಕಾರಿನಲ್ಲಿ ಬೃಹತ್ ಪ್ರಮಾಣದ ಚರಸ್ ಕಂಡು ಬಂದಿದೆ. ಚರಸ್ ಸಾಗಿಸುತ್ತಿದ್ದ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ಸುಮಾರು 1.5 ಕೋಟಿ ರೂ. ಮೌಲ್ಯದ 16 ಕೆಜಿ ಚರಸ್‌ನ ಎನ್ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಆರೋಪಿಯು ಕಾಶ್ಮೀರ ಮೂಲದ ನಿವಾಸಿ ಎಂದು ತಿಳಿದು ಬಂದಿದೆ.