ಹೈದರಾಬಾದ್ : ಪ್ರತಿ ವರ್ಷ ಜುಲೈ 1ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯರ ನಿಸ್ವಾರ್ಥ ಸೇವೆಗಳನ್ನು ಗುರುತಿಸಿ ಗೌರವಿಸಲು ಹಾಗೂ ಜನರಿಗೆ ಸೇವೆ ಸಲ್ಲಿಸುವ ವೈದ್ಯಕೀಯ ವೃತ್ತಿಪರರಿಗೆ ಕೃತಜ್ಞತೆ ವ್ಯಕ್ತಪಡಿಸುವ ಉದ್ದೇಶವನ್ನು ವೈದ್ಯರ ದಿನ ಹೊಂದಿದೆ.
ವೈದ್ಯರು ಮತ್ತು ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವನ್ನು ಗೌರವಿಸಲು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. 1991ರಲ್ಲಿ ಭಾರತದಲ್ಲಿ ವೈದ್ಯರ ದಿನವನ್ನು ಪ್ರತಿ ವರ್ಷ ಜುಲೈ 1ರಂದು ಆಚರಿಸುವುದಾಗಿ ಭಾರತ ಸರ್ಕಾರ ನಿರ್ಧರಿಸಿತು. ವೈದ್ಯರ ದಿನವನ್ನು ಪ್ರಪಂಚದಾದ್ಯಂತ ವಿವಿಧ ದಿನ ಆಚರಿಸಲಾಗುತ್ತದೆ. ಅಮೆರಿಕಾದಲ್ಲಿ ಮಾರ್ಚ್ 30ರಂದು, ಕ್ಯೂಬಾದಲ್ಲಿ ಡಿಸೆಂಬರ್ 3ರಂದು ಮತ್ತು ಇರಾನ್ನಲ್ಲಿ ಅಗಸ್ಟ್ 23ರಂದು ಆಚರಿಸಲಾಗುತ್ತದೆ.
ಡಾ.ಬಿಧನ್ ಚಂದ್ರ ರಾಯ್ : ಡಾ.ಬಿ ಸಿ ರಾಯ್ 1ನೇ ಜುಲೈ 1882 ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದರು. ಅವರು 1911ರಲ್ಲಿ ಭಾರತದಲ್ಲಿ ವೈದ್ಯರಾಗಿ ವೈದ್ಯಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಅವರು ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕ್ಯಾಂಪ್ಬೆಲ್ ವೈದ್ಯಕೀಯ ಶಾಲೆ ಮತ್ತು ಕಾರ್ಮೈಕಲ್ ವೈದ್ಯಕೀಯ ಕಾಲೇಜಿನಲ್ಲಿಯೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಅವರು ಪ್ರಸಿದ್ಧ ವೈದ್ಯ, ಹೆಸರಾಂತ ಶಿಕ್ಷಣ ತಜ್ಞ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕಾನೂನು ಅಸಹಕಾರ ಚಳವಳಿಯ ಸಂದರ್ಭದಲ್ಲಿ ಅವರು ಮಹಾತ್ಮ ಗಾಂಧಿಯೊಂದಿಗೆ ಸೇರಿದ್ದರು. ಬಳಿಕ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ಡಾ. ರಾಯ್ ಅವರಿಗೆ ಫೆಬ್ರವರಿ 4, 1961ರಂದು ಶ್ರೇಷ್ಠ ಭಾರತೀಯ ನಾಗರಿಕ ಪ್ರಶಸ್ತಿ "ಭಾರತ್ ರತ್ನ" ನೀಡಿ ಗೌರವಿಸಲಾಯಿತು.
2010ರಿಂದ 2018ರವರೆಗೆ ನೋಂದಾಯಿತ ರಾಜ್ಯ ವೈದ್ಯಕೀಯ ಮಂಡಳಿಗಳು/ಭಾರತೀಯ ವೈದ್ಯಕೀಯ ಮಂಡಳಿಯಿಂದ (ಸಂಬಂಧಪಟ್ಟ ವರ್ಷದ ಡಿಸೆಂಬರ್ 31ರವರೆಗೆ) ಮಾನ್ಯತೆ ಪಡೆದ ವೈದ್ಯಕೀಯ ಅರ್ಹತೆಗಳನ್ನು ಹೊಂದಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವೈದ್ಯರ ಸಂಖ್ಯೆ (ಐಎಂಸಿ ಕಾಯ್ದೆಯಡಿ) ಹೀಗಿದೆ:
2017ರಲ್ಲಿ ಭಾರತದ ಒಟ್ಟು 1.33 ಬಿಲಿಯನ್ ಜನಸಂಖ್ಯೆಯನ್ನು 1.8 ಮಿಲಿಯನ್ ನೋಂದಾಯಿತ ವೈದ್ಯಕೀಯ ಪದವೀಧರರು ಪೂರೈಸುತ್ತಿದ್ದಾರೆ. ಆದ್ದರಿಂದ 2017ರ ಹೊತ್ತಿಗೆ 1,000 ಭಾರತೀಯ ನಾಗರಿಕರಿಗೆ 1.34 ವೈದ್ಯರಿದ್ದಾರೆ. ಭಾರತವು ವಿಶ್ವ ಆರೋಗ್ಯ ಸಂಸ್ಥೆಯ ಕನಿಷ್ಠ 1:1000 ವೈದ್ಯ-ಜನಸಂಖ್ಯೆಯ ಅನುಪಾತವನ್ನು ಪೂರೈಸಿದೆ.
1.1.2018ರಂತೆ ಭಾರತದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆಯುಷ್ ನೋಂದಾಯಿತ ವೈದ್ಯರ ಸಂಖ್ಯೆ ಹೀಗಿದೆ:
ಕೋವಿಡ್ -19 ಪಿಡುಗು : ನಾವು ಮನೆಯಲ್ಲಿ ಸುರಕ್ಷಿತಾಗಿದ್ದರೂ, ಮಾರಣಾಂತಿಕ ವೈರಸ್ ಸೋಂಕಿಗೆ ಒಳಗಾದ ಜನರ ಪ್ರಾಣ ಉಳಿಸಲು ವೈದ್ಯರು ನಿರಂತರವಾಗಿ ಹೋರಾಡುತ್ತಿದ್ದಾರೆ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರು ಸೇರುತ್ತಿದ್ದಾರೆ. ಈ ಸಮಯದಲ್ಲಿ ವೈದ್ಯರು ಮಾಡುವ ಪ್ರಯತ್ನಗಳನ್ನು ನಾವು ಪ್ರಶಂಸಿಸಲೇಬೇಕು. ಕೋವಿಡ್-19 ಸಾಂಕ್ರಾಮಿಕ ರೋಗ ಹರಡಲು ಪ್ರಾರಂಭವಾದಾಗಿನಿಂದ ವಿಶ್ವದಾದ್ಯಂತ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ತಜ್ಞರು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ತಡೆರಹಿತವಾಗಿ ಕೆಲಸ ಮಾಡುತ್ತಾ ವೈರಸ್ ಸೋಂಕಿತ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ವೈದ್ಯರಿಗೂ ಬಾಧಿಸಿದ ಕೊರೊನಾ ಸೋಂಕು :
ಭಾರತದಲ್ಲಿ ಅನೇಕ ವೈದ್ಯರು ಕರ್ತವ್ಯಲ್ಲಿದ್ದಾಗಲೇ ಕೋವಿಡ್-19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕೇಂದ್ರದ ವರದಿಯ ಪ್ರಕಾರ, ಮೇ 2020ರವರೆಗೆ 548 ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ.