ನವದೆಹಲಿ: ಕೊರೊನಾ ತಡಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ವೇಳೆ ಎಂದಿಗಿಂತ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿವೆ.
ಕಳೆದ ಹತ್ತು ತಿಂಗಳಿನಿಂದ 4 ಲಕ್ಷ ದೂರುಗಳನ್ನು ಆಯೋಗವು ನಿರ್ವಹಿಸುತ್ತಿದೆ ಎಂದು ಸುಪ್ರೀಂ ಚೈಲ್ಡ್ ರೈಟ್ ಬಾಡಿ ನ್ಯಾಷನಲ್ ಕಮಿಷನ್ ಫಾರ್ ಚೈಲ್ಡ್ ರೈಟ್ಸ್ (ಎನ್‌ಸಿಪಿಸಿಆರ್) ಹೇಳಿಕೊಂಡಿದೆ. ಲಾಕ್‌ಡೌನ್ ಸಮಯದಲ್ಲಿ, ಎನ್‌ಸಿಪಿಸಿಆರ್ ದೇಶಾದ್ಯಂತ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಮಾಡಿದ್ದು, ಇದನ್ನು ಪರಿಹರಿಸುವಲ್ಲಿ ಸಮಗ್ರವಾಗಿ ಕೆಲಸ ಮಾಡುತ್ತಿದೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನುಂಗೊ, ಮಕ್ಕಳ ಕಳ್ಳಸಾಗಣೆ, ಕಾಣೆಯಾದ ಮಕ್ಕಳು, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಿಂದ ಆಯೋಗವು ಸಾಕಷ್ಟು ದೂರುಗಳನ್ನು ಸ್ವೀಕರಿಸುತ್ತಿದೆ. ಲಾಕ್‌ಡೌನ್ ಮುಗಿದ ನಂತರವೇ ಅಂತಿಮ ಅಂಕಿ- ಅಂಶಗಳನ್ನು ಬಹಿರಂಗಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ, ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಿಂದ ನಮಗೆ ಮತ್ತೊಂದು ದೂರು ಬಂದಿದೆ. ಅಲ್ಲಿ ನವಜಾತ ಶಿಶುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲಾಗಿದೆ. ಏಕೆಂದರೆ ಮಗುವಿನ ತಾಯಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ನಾನು ತಕ್ಷಣ ಅಲ್ಲಿನ ಡಿಎಂ ಜೊತೆ ಮಾತನಾಡಿದೆ. ತಾಯಿ ಮತ್ತು ಮಗುವಿಗೆ ಸರಿಯಾದ ಚಿಕಿತ್ಸೆ ಸಿಗುವುದು ಖಚಿತವಾಯಿತು. ಮತ್ತೊಂದೆಡೆ ಮಕ್ಕಳನ್ನು ವೈದ್ಯರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟಕ್ಕೆ ಬಳಸಿಕೊಳ್ಳಲಾಗಿದೆ. ಮೊರಾದಾಬಾದ್ನಲ್ಲಿ ನಡೆದ ಈ ಘಟನೆಯ ಬಗ್ಗೆ ಎನ್‌ಸಿಪಿಸಿಆರ್‌ಗೆ ದೂರು ಬಂದಿದೆ. ಸೆಕ್ಷನ್ 83 (2) ರ ಅಡಿಯಲ್ಲಿ ಮಕ್ಕಳನ್ನು ಬಳಸಿದ ಜನರ ವಿರುದ್ಧ ಪ್ರಕರಣ ದಾಖಲಿಸುವಂತೆ ಮೊರಾದಾಬಾದ್ ಪೊಲೀಸರಿಗೆ ಶಿಫಾರಸು ಮಾಡಿದ್ದೇವೆ ಎಂದು ಹೇಳಿದರು.