ETV Bharat / bharat

Photo: ಬಾಹ್ಯಾಕಾಶದಿಂದ ಹಿಮಾಲಯ ಪರ್ವತ ಶ್ರೇಣಿ ಸೆರೆ ಹಿಡಿದ ನಾಸಾ - ಬಾಹ್ಯಾಕಾಶದಿಂದ ಹಿಮಾಲಯ ಪರ್ವತ ಶ್ರೇಣಿ ಸೆರೆ ಹಿಡಿದ ನಾಸಾ

ಬಾಹ್ಯಾಕಾಶದಿಂದ ಸೆರೆ ಹಿಡಿದಿರುವ ಹಿಮಾಲಯ ಪರ್ವತ ಶ್ರೇಣಿಯ ಫೋಟೊ ಒಂದನ್ನು ನಾಸಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

NASA's Stunning Pic of Himalayas
ಹಿಮಾಲಯ ಪರ್ವತ ಶ್ರೇಣಿ ಸೆರೆ ಹಿಡಿದ ನಾಸಾ
author img

By

Published : Dec 17, 2020, 5:41 PM IST

ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಕಾಶದಿಂದ ನೋಡುವಾಗ ಹಿಮದಿಂದ ಆವೃತವಾದ ಹಿಮಾಲಯನ್ ಶಿಖರಗಳ ಅದ್ಭುತ ನೋಟದ ಫೋಟೋವನ್ನು ಹಂಚಿಕೊಂಡಿದೆ.

ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ, ವಿಶ್ವದ ಅತಿ ಎತ್ತರದ ಹಿಮಾಲಯ ಪರ್ವತ ಶ್ರೇಣಿ ಹಿಮದಿಂದ ಆವರಿಸಿದ್ದನ್ನು ಕಾಣಬಹುದು. ಜೊತೆಗೆ, ಫೋಟೋದಲ್ಲಿ ಎರಡು ಕಡೆ ಬೆಳಕು ಕಾಣುತ್ತಿದ್ದು, ಅದು ಭಾರತ, ಪಾಕಿಸ್ತಾನದ ಎರಡು ನಗರಗಳು ಎಂದು ಹೇಳಲಾಗಿದೆ. ನಾಸಾ ಪ್ರಕಾರ, ಈ ಫೋಟೋವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ದ ಸಿಬ್ಬಂದಿಯೊಬ್ಬರು ಸೆರೆಹಿಡಿದಿದ್ದಾರೆ.

ಫೋಟೋದ ಬಲಭಾಗದಲ್ಲಿ ಅಥವಾ ಹಿಮಾಲಯದ ದಕ್ಷಿಣಕ್ಕೆ ಉತ್ತರ ಭಾರತ ಮತ್ತು ಪಾಕಿಸ್ತಾನದ ಫಲವತ್ತಾದ ಕೃಷಿ ಪ್ರದೇಶ ಕಾಣಬಹುದಾಗಿದೆ. ಇನ್ನು ಫೋಟೋದಲ್ಲಿ ಕಾಣುತ್ತಿರುವುದು ಒಂದು ದೆಹಲಿ ನಗರವಾದರೆ, ಇನ್ನೊಂದು ಪಾಕಿಸ್ತಾನದ ಲಾಹೋರ್​ ನಗರ ಎಂದು ನಾಸಾ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.