ETV Bharat / bharat

ಕೊರೊನಾ ವೈರಸ್​ ತಡೆಗಟ್ಟಬಲ್ಲ ನ್ಯಾನೊಸ್ಪಾಂಜ್ ಆವಿಷ್ಕಾರ!​ - ಜೀವಕೋಶ

ಪ್ರತಿಯೊಂದು ಕೋವಿಡ್​-19 ನ್ಯಾನೊಸ್ಪಾಂಜ್​ ಮಾನವನ ಒಂದು ಕೂದಲೆಳೆಯ ಅಗಲಕ್ಕಿಂತ ಸಾವಿರ ಪಟ್ಟು ಸಣ್ಣದಾಗಿರುತ್ತದೆ. ಶ್ವಾಸಕೋಶದ ಎಪಿಥೆಲಿಯಲ್ ಟೈಪ್-2 ಜೀವಕೋಶಗಳು ಅಥವಾ ಮ್ಯಾಕ್ರೊಫೇಜ್ ಸೆಲ್​ಗಳಿಂದ ಹೊರತೆಗೆಯಲಾದ ಪಾಲಿಮರ್ ಕೋರ್​ ಕೋಟಿಂಗ್ ಮಾಡಲಾದ ಸೆಲ್ ಮೆಂಬ್ರೇನ್​ಗಳನ್ನು ಈ ನ್ಯಾನೊಸ್ಪಾಂಜ್​ಗಳು ಹೊಂದಿರುತ್ತವೆ.

nanosponges-could-intercept-coronavirus
nanosponges-could-intercept-coronavirus
author img

By

Published : Jun 19, 2020, 6:29 PM IST

ಹೈದರಾಬಾದ್; ಡೆಡ್ಲಿ ಕೊರೊನಾ ವೈರಸ್​ಗೆ ಔಷಧಿ, ವ್ಯಾಕ್ಸಿನ್ ಕಂಡು ಹಿಡಿಯುವ ನಿಟ್ಟಿನಲ್ಲಿ ವಿಶ್ವಾದ್ಯಂತ ಹಲವಾರು ಸಂಶೋಧನೆಗಳು ನಡೆದಿವೆ. ಈ ಮಧ್ಯೆ ನ್ಯಾನೊಸ್ಪಾಂಜ್​ಗಳನ್ನು ಬಳಸಿ ಕೊರೊನಾ ವೈರಸ್​ ವಿರುದ್ಧ ಹೋರಾಡುವ ವ್ಯವಸ್ಥೆಯೊಂದನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಮಾನವ ಶ್ವಾಸಕೋಶದ ಜೀವಕೋಶಗಳ ಪೊರೆಯಲ್ಲಿ (human lung cell membranes) ಮತ್ತು ಮಾನವ ಪ್ರತಿರಕ್ಷಣಾ ಕೋಶಗಳ ಪೊರೆಯಲ್ಲಿ (human immune cell membranes) ಸೇರಿಸಲಾದ ನ್ಯಾನೊಪಾರ್ಟಿಕಲ್​ಗಳು ಕೋವಿಡ್​-19 ವೈರಸ್​ ಅನ್ನು ತಮ್ಮೆಡೆಗೆ ಸೆಳೆದು ಅದನ್ನು ತಟಸ್ಥಗೊಳಿಸಬಲ್ಲವು ಹಾಗೂ ಮಾನವ ಶರೀರದ ಜೀವಕೋಶಗಳನ್ನು ಹೊಕ್ಕು ವೈರಸ್​ನ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ನಾಶಪಡಿಸಬಲ್ಲವು ಎಂದು "ನ್ಯಾನೊ ಲೆಟರ್ಸ್"​ ಜರ್ನಲ್​ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ. ಸ್ಯಾನ್ ಡಿಯೆಗೊ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಎಂಜಿನೀಯರ್​ಗಳು ಇಂಥ ನ್ಯಾನೊಸ್ಪಾಂಜ್​ಗಳನ್ನು ಅಭಿವೃದ್ಧಿಪಡಿಸಿದ್ದು, ಬೋಸ್ಟನ್ ಯುನಿವರ್ಸಿಟಿಯ ವಿಜ್ಞಾನಿಗಳು ಇವುಗಳನ್ನು ಬಳಸಿ ಸಂಶೋಧನೆ ಕೈಗೊಂಡಿದ್ದಾರೆ.

ನ್ಯಾನೊ-ಸ್ಕೇಲ್ ಪಾರ್ಟಿಕಲ್​ಗಳು ರೋಗಕಾರಕಗಳು ಮತ್ತು ಜೀವಾಣುಗಳನ್ನು ಹೀರಿಕೊಳ್ಳುವುದರಿಂದ ಇವನ್ನು "ನ್ಯಾನೊಸ್ಪಾಂಜಸ್" ಎಂದು ಯುಸಿ ಸ್ಯಾನ್​ ಡಿಯೆಗೊ ಸಂಶೋಧಕರು ಹೆಸರಿಸಿದ್ದಾರೆ.

ಪ್ರಯೋಗಾಲಯದಲ್ಲಿ ನಡೆಸಲಾದ ಪ್ರಯೋಗಗಳ ಸಂದರ್ಭದಲ್ಲಿ, ಶ್ವಾಸನಾಳ ಜೀವಕೋಶ ಹಾಗೂ ಪ್ರತಿರಕ್ಷಣಾ ಕೋಶ ಮಾದರಿಯ ನ್ಯಾನೊಸ್ಪಾಂಜ್​ಗಳು ಡೋಸ್​-ಅವಲಂಬಿತವಾಗಿ ಕೋವಿಡ್​-19 ವೈರಸ್​ನ ಸಾಂಕ್ರಾಮಿಕ ಹರಡುವಿಕೆಯ ಸಾಮರ್ಥ್ಯವನ್ನು (viral infectivity) ಶೇ 90 ರಷ್ಟು ಹಾಳು ಮಾಡಿದ್ದವು. ದಾಳಿ ಮಾಡುವ ಶರೀರದ ಜೀವಕೋಶಗಳನ್ನು ಹೊಕ್ಕು ಅವುಗಳಲ್ಲಿ ತಮ್ಮ ಸಂಖ್ಯೆಯನ್ನು ಬೆಳೆಸುವ ವೈರಸ್​ಗಳ ಗುಣವನ್ನು ಸಾಂಕ್ರಾಮಿಕ ಹರಡುವಿಕೆಯ ಸಾಮರ್ಥ್ಯ ಎಂದು ಕರೆಯಲಾಗುತ್ತದೆ.

ವೈರಸ್​ಗಳನ್ನೇ ಗುರಿಯಾಗಿಸಿಕೊಳ್ಳುವ ಬದಲು ಈ ನ್ಯಾನೊ ಸ್ಪಾಂಜ್​ಗಳು, ವೈರಸ್​ ದಾಳಿಗೆ ತುತ್ತಾಗಬಹುದಾದ ಆರೋಗ್ಯವಂತ ಜೀವಕೋಶಗಳನ್ನು ಸಂರಕ್ಷಣೆ ಮಾಡುತ್ತವೆ. "ಸಾಂಕ್ರಾಮಿಕ ರೋಗಗಳಿಗೆ ಔಷಧಿ ಕಂಡು ಹಿಡಿಯಲು, ರೋಗ ಉಂಟುಮಾಡುವ ಜೀವಾಣುವನ್ನು ಆಳವಾಗಿ ಅಧ್ಯಯನ ಮಾಡುವ ಕ್ರಮವನ್ನು ಬಹಳ ಹಿಂದಿನಿಂದಲೂ ಅನುಸರಿಸಲಾಗುತ್ತಿದೆ. ಆದರೆ ನಮ್ಮ ಕಾರ್ಯಶೈಲಿ ಭಿನ್ನವಾಗಿದೆ. ವೈರಸ್​ ದಾಳಿಗೆ ತುತ್ತಾಗಬಹುದಾದ ಜೀವಕೋಶಗಳನ್ನು ಗುರುತಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ನಂತರ ಆ ಜೀವಕೋಶಗಳನ್ನು ಸಂರಕ್ಷಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವತ್ತ ನಾವು ಗಮನಹರಿಸುತ್ತೇವೆ." ಎಂದು ಯುಸಿ ಸ್ಯಾನ್ ಡಿಯೆಗೊ ಜಾಕೋಬ್ಸ್ ಸ್ಕೂಲ್ ಆಫ್ ಎಂಜಿನೀಯರಿಂಗ್​​ನ ನ್ಯಾನೊ ಎಂಜಿನೀಯರಿಂಗ್ ಪ್ರಾಧ್ಯಾಪಕ ಲಿಯಾಂಗಫಾಂಗ್ ಝಾಂಗ್​.

ಲಿಯಾಂಗಫಾಂಗ್ ತಮ್ಮ ಪ್ರಯೋಗಾಲಯದಲ್ಲಿ ಬಯೋಮಿಮೆಟಿಕ್ ನ್ಯಾನೊಸ್ಪಾಂಜ್​​ಗಳನ್ನು ದಶಕದ ಹಿಂದೆಯೇ ಅಭಿವೃದ್ಧಿಪಡಿಸಿದ್ದು, ಹಲವಾರು ರೀತಿಯಲ್ಲಿ ಬಳಸಲು ಸಂಶೋಧನೆ ನಡೆಸುತ್ತಿದ್ದಾರೆ. ಕೊರೊನಾ ವೈರಸ್​ ಮಹಾಮಾರಿ ಕಾಣಿಸಿಕೊಂಡ ನಂತರ ತಕ್ಷಣವೇ ನ್ಯಾನೊಸ್ಪಾಂಜ್​ಗಳನ್ನು ಇದರ ತಡೆಗಟ್ಟುವಿಕೆಗಾಗಿ ಪ್ರಯೋಗಿಸಬಹುದು ಎಂಬ ವಿಚಾರ ಲಿಯಾಂಗಫಾಂಗ್ ಅವರಿಗೆ ಹೊಳೆದಿತ್ತು.

ಪ್ರತಿಯೊಂದು ಕೋವಿಡ್​-19 ನ್ಯಾನೊಸ್ಪಾಂಜ್​ ಮಾನವನ ಒಂದು ಕೂದಲೆಳೆಯ ಅಗಲಕ್ಕಿಂತ ಸಾವಿರ ಪಟ್ಟು ಸಣ್ಣದಾಗಿರುತ್ತದೆ. ಶ್ವಾಸಕೋಶದ ಎಪಿಥೆಲಿಯಲ್ ಟೈಪ್-2 ಜೀವಕೋಶಗಳು ಅಥವಾ ಮ್ಯಾಕ್ರೊಫೇಜ್ ಸೆಲ್​ಗಳಿಂದ ಹೊರತೆಗೆಯಲಾದ ಪಾಲಿಮರ್ ಕೋರ್​ ಕೋಟಿಂಗ್ ಮಾಡಲಾದ ಸೆಲ್ ಮೆಂಬ್ರೇನ್​ಗಳನ್ನು ಈ ನ್ಯಾನೊಸ್ಪಾಂಜ್​ಗಳು ಹೊಂದಿರುತ್ತವೆ.

ಕೊರೊನಾ ವೈರಸ್​ ವಿರುದ್ಧ ಪ್ರಯೋಗಿಸಲು ವಿಭಿನ್ನ ಸಾಮರ್ಥ್ಯದ ನ್ಯಾನೊಸ್ಪಾಂಜ್​ಗಳನ್ನು ಸಂಶೋಧಕರು ತಯಾರಿಸಿದ್ದಾರೆ. ನ್ಯಾನೊಸ್ಪಾಂಜ್​ಗಳು ಕೋವಿಡ್​-19 ವೈರಸ್​ನ ಪ್ರಭಾವವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಸ್ವತಂತ್ರವಾಗಿ ಅಧ್ಯಯನ ಮಾಡುವಂತೆ ಬೋಸ್ಟನ್ ಯುನಿವರ್ಸಿಟಿಯ ನ್ಯಾಷನಲ್ ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್ ಲ್ಯಾಬೊರೇಟರಿಗೆ (National Emerging Infectious Diseases Laboratories -NEIDL) ಆಹ್ವಾನ ನೀಡಲಾಗಿತ್ತು.

ಉನ್ನತ ಮಟ್ಟದ ಜೈವಿಕ ಸುರಕ್ಷತಾ ಪ್ರಮಾಣೀಕರಿಸಿದ BSL-4 ಪ್ರಯೋಗಾಲಯವನ್ನು ಎನ್​ಇಐಡಿಎಲ್​ ಹೊಂದಿದೆ. ಬೋಸ್ಟನ್ ವಿವಿಯ ಸಹಪ್ರಾಧ್ಯಾಪಕ ಅಂಥೋನಿ ಗ್ರಿಫಿತ್ಸ್ ಇಲ್ಲಿ ನ್ಯಾನೊಸ್ಪಾಂಜ್​ಗಳ ಕುರಿತು ಅಧ್ಯಯನ ನಡೆಸಿದ್ದಾರೆ.

ಈ ನ್ಯಾನೊಸ್ಪಾಂಜ್​ಗಳು ಯಾವುದೇ ರೀತಿಯ ಕೊರೊನಾ ವೈರಸ್​ ಅಥವಾ ಬೇರಾವುದೇ ರೀತಿಯ ಶ್ವಾಸಕೋಶದ ವೈರಸ್​ಗಳು ಸೇರಿದಂತೆ ಭವಿಷ್ಯದಲ್ಲಿ ಎರಗಬಹುದಾದ ಹೊಸ ಶ್ವಾಸಕೋಶದ ವೈರಸ್​ಗಳ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲವು ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.