ETV Bharat / bharat

ಭಾರತದ ಆ ನಾಯಕ ಅದ್ಭುತ : ಪ್ರಧಾನಿ ಕೊಂಡಾಡಿದ ಅಮೆರಿಕಾ ಸ್ಪೀಕರ್ - ಭಾರತೀಯ ನಾಯಕ ಅಧ್ಬುತ, ಮೋದಿಯ ಶ್ಲಾಘನೆ, ಪ್ರಧಾನಿ ನರೇಂದ್ರ ಮೋದಿ, ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ (ಯುಎಸ್‌ಐಎಸ್‌ಪಿಎಫ್), ಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ನ್ಯಾನ್ಸಿ ಪೆಲೋಸಿ, ವಾಶಿಂಗ್ಟನ್ ಡಿಸಿ.

ಭಾರತೀಯ ನಾಯಕ ಅದ್ಬುತ. ತನ್ನ ಮಾತಿನ ಮೂಲಕ ಜನರನ್ನು ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಅವರಿಗಿದೆ ಎಂದು ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ನ್ಯಾನ್ಸಿ ಪೆಲ್ಲೋಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.

ನ್ಯಾನ್ಸಿ ಪೆಲೋಸಿ
author img

By

Published : Jul 12, 2019, 11:24 AM IST

ವಾಷಿಂಗ್ಟನ್ ಡಿಸಿ: ಭಾರತೀಯ ನಾಯಕ "ಅದ್ಭುತ" ಮತ್ತು ಜನರನ್ನು "ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಅವರು ಹೊಂದಿದ್ದಾರೆ ಎಂದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ನ್ಯಾನ್ಸಿ ಪೆಲ್ಲೋಸಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಭಾರತಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಅಧ್ಯಕ್ಷ ಒಬಾಮಾ ಮತ್ತು ಪ್ರಧಾನಿ ಮೋದಿಯವರು ಬ್ಯುಸಿನೆಸ್ ಕಮ್ಯುನಿಟಿಗಳೊಂದಿಗಿನ ಸಭೆಯಲ್ಲಿ ಪಾಲ್ಗೊಂಡ ಬಳಿಕ ನಾವು ಇಬ್ಬರು ನಾಯಕರಿರುವ ಕೋಣೆಗೆ ತೆರಳಿದೆವು. ಅಂದು ಪ್ರಧಾನಿ ಮೋದಿ ಮಾಡಿದ ಭಾಷಣ ನಾನು ಕೇಳಿದ ಅತ್ಯಂತ ಅದ್ಭುತವಾದ ಭಾಷಣಗಳಲ್ಲಿ ಒಂದಾಗಿದೆ "ಎಂದು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ (ಯುಎಸ್‌ಐಎಸ್‌ಪಿಎಫ್)ನ ಎರಡನೆ ಆವೃತ್ತಿಯಲ್ಲಿ ಅಧ್ಯಕ್ಷ ಜಾನ್ ಚೇಂಬರ್ಸ್ ಅವರೊಂದಿಗಿನ ಸಂಭಾಷಣೆಯಲ್ಲಿ ಪೆಲ್ಲೋಸಿ ಮೋದಿ ಅವರನ್ನ ಕೊಂಡಾಡಿದ್ದಾರೆ.

"ಅವರು (ಮೋದಿ) ಅವತ್ತು ಅವರು ಮಾಡಿದ ಭಾಷಣ ತುಂಬಾ ಸ್ಪೂರ್ತಿದಾಯಕವಾಗಿತ್ತು. ಅವರು ಮೌಲ್ಯಗಳ ಬಗ್ಗೆ ಮಾತನಾಡಿದರು. ಅದು ತುಂಬಾ ಅದ್ಭುತ ಮತ್ತು ವಿಭಿನ್ನವಾಗಿತ್ತು. ದೃಷ್ಟಿಕೋನ, ಜ್ಞಾನ ಮತ್ತು ಕಾರ್ಯತಂತ್ರ ನಮ್ಮೆಲ್ಲರಲ್ಲೂ ಇದೆ. ಆದರೆ, ಸಂದೇಶ ನೀಡುವುದು ಅಷ್ಟೇ ಮುಖ್ಯವಾಗಿದೆ ಸಂದೇಶ ನೀಡುವುದರಲ್ಲಿ ಅವರು (ಮೋದಿ) "ಮಾಸ್ಟರ್". ಪ್ರೇಕ್ಷಕರನ್ನು ತನ್ನ ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಅವರಲ್ಲಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕೊಂಡಾಡಿದ್ದಾರೆ

ತನ್ನನ್ನು ತಾನು ಮಹಾತ್ಮ ಗಾಂಧಿಯ "ಆರಾಧಕಿ " ಎಂದು ಹೇಳಿಕೊಳ್ಳುತ್ತಾ , "ನಾನು ಶಾಲೆಯಲ್ಲಿ ಟೋಪಿ ಧರಿಸುತ್ತಿದ್ದೆ ಆಗ ಸನ್ಯಾಸಿನಿಯೊಬ್ಬರು ನೀನು ಯಾರಾಗಬೇಕೆಂದು ಯೋಚಿಸುತ್ತಿಯಾ? ಮಹಾತ್ಮ ಗಾಂಧಿ ಆಗಲು ಬಯಸುತ್ತಿಯೇ? ಎಂದು ಕೇಳಿದರು. ಆಗ ನನಗೆ ಮಹಾತ್ಮ ಗಾಂಧಿ ಬಗ್ಗೆ ಏನು ತಿಳಿದಿರಲಿಲ್ಲ. ಎಂದ ಅವರು, "ನಾನು ಗ್ರಂಥಾಲಯಕ್ಕೆ ಹೋದೆ. ಅಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಸಾಕಷ್ಟು ಪುಸ್ತಕಗಳು ಇದ್ದವು. ಮಹಾತ್ಮ ಗಾಂಧಿಯವರ ಎಲ್ಲಾ ಪುಸ್ತಕಗಳನ್ನು ತರಗತಿಗೆ ತೆಗೆದುಕೊಂಡು ಬಂದು ಹೆಚ್ಚು ಹೆಚ್ಚು ಒದಲು ಶುರು ಮಾಡಿದೆ. ಓದುತ್ತಾ ಓದುತ್ತಾ ನಾನು ಸಂಪೂರ್ಣವಾಗಿ ಮಹಾತ್ಮ ಗಾಂಧೀಜಿಯವರ ಆರಾಧಕಳಾದೆ ಎಂದು ಹೇಳಿದರು.

ನಾಗರಿಕ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು 1950 ರ ದಶಕದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ಮಹಾತ್ಮ ಗಾಂಧಿಯವರ ಬಗ್ಗೆ ಅಧ್ಯಯನ ಮಾಡಿದರು, ಮತ್ತು ಅಹಿಂಸೆ ಮತ್ತು 'ಸತ್ಯಾಗ್ರಹ'ದ ಬಗ್ಗೆ ತಿಳಿದುಕೊಂಡರು. ಅದು ನಮಗೆ "ಇನ್ ಸ್ಟಿಸ್ಟೆನ್ಸ್ ಆಫ್ ಟ್ರುತ್" ಎಂದು ಅವರು ಒತ್ತಿ ಹೇಳಿದರು.

ಮಹಾತ್ಮ ಗಾಂಧಿಯವರ 150 ನೇ ವಾರ್ಷಿಕೋತ್ಸವ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರ 90 ನೇ ವಾರ್ಷಿಕೋತ್ಸವವು ನಮ್ಮ ಮಧ್ಯೆ ಬಲವಾದ ಸಂಪರ್ಕವನ್ನು ಏರ್ಪಡಿಸಿದೆ ಎಂದ ಪೆಲ್ಲೋಸಿ , 'ಸತ್ಯಾಗ್ರಹ' ಎಂಬುವುದು ಭಾರತ ಅಮೆರಿಕಾಗೆ ನೀಡಿದ ಆಧ್ಯಾತ್ಮಿಕ ಉಡುಗೊರೆಯಾಗಿದೆ ಎಂದು ಬಣ್ಣನೆ ಮಾಡಿದರು.

ನಮ್ಮ ದೇಶವು (ಅಮೆರಿಕ) ಭಾರತೀಯ ವಲಸಿಗರ ಆರ್ಶಿವಾದವನ್ನು ಹೊಂದಿದೆ. ಈ ಉತ್ತಮ ಭಾಂಧವ್ಯವನ್ನು ಹೇಗೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂಬುವುದರ ಬಗ್ಗೆ ನಾವು ಯೋಚಿಸಬೇಕಿದೆ. ಭಾರತದ ಆದ್ಯತೆಗಳನ್ನು ನಾವು ಗೌರವಿಸಬೇಕು. ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಭಾರತವನ್ನು ಒಂದು ಭಾಗವಾಗಿ ಗುರುತಿಸುವ ಅವಶ್ಯಕತೆಯಿದೆ" ಎಂದು ಪೆಲ್ಲೋಸಿ ಹೇಳಿದರು.

ರೋಗಗಳ ನಿರ್ಮೂಲನೆ, ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸುವಲ್ಲಿ ನಾವೆಲ್ಲರೂ ಪಾತ್ರವಹಿಸಬೇಕಾಗಿದೆ. ಆರ್ಥಿಕ ಅಭಿವೃದ್ದಿಗೆ ಅಮೆರಿಕ ಮತ್ತು ಭಾರತಕ್ಕೆ ಉತ್ತಮ ಮಾರುಕಟ್ಟೆಗಳ ಅಗತ್ಯವಿದೆ ಎಂದು ಹೇಳುತ್ತಾ ಉಭಯ ದೇಶಗಳ ನಡುವೆ ನಿರಂತರ ಸಹಕಾರಕ್ಕಾಗಿ ಅವರು ಕರೆ ನೀಡಿದರು. ಮತ್ತು ಚೀನಾದೊಂದಿಗಿನ ಅಮೆರಿಕ ಸಂಬಂಧ "ತುಂಬಾ ಕಷ್ಟಕರವಾದದು ಎಂದು ಬಣ್ಣಿಸಿದರು.

Intro:Body:

1 moh_jul_11_2019_security-41562851140077-0_1107email_1562851151_641.jpg   

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.