ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಲಾಕ್‌ಡೌನ್ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದು ಈ ಕುರಿತು ಪ್ರತಿಕ್ರಿಯಿಸಿ ಟ್ಟೀಟ್ ಮಾಡಿರುವ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಸೋನಿಯಾ ಗಾಂಧಿ ಅವರಿಗೆ ಅರೋಗ್ಯ ಕಾಳಜಿ ವಹಿಸುವಂತೆ ಕೇಳಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಅವರು ವಿಡಿಯೋ ಸಂದೇಶದಲ್ಲಿ, ''ದೇಶದಲ್ಲಿ ಕೊಲಾಹಲ ಹುಟ್ಟಿಸಿರುವ ಕೋವಿಡ್-19 ನಾಶಕ್ಕೆ ಅಧಿಕಾರ ಇದ್ದರೂ, ಇಲ್ಲದಿದ್ದರೂ ಜನರೊಂದಿಗೆ ಸದಾ ಇರುವುದಾಗಿ ಮತ್ತು ಪಕ್ಷವು ಜನರಿಗೆ ಸಹಾಯಕವಾಗಿರುತ್ತದೆ'' ಎಂದು ಹೇಳಿದ್ದಾರೆ.
ಅಲ್ಲದೆ ''ಇದು ಏಕಾಂಗಿಯಾಗಿ ಹೋರಾಟ ಮಾಡುವ ಸಮಯವಲ್ಲ, ಇಲ್ಲಿ ಎಲ್ಲರ ಸಹಕಾರ ಅವಶ್ಯಕ. ಲಾಕ್‌ಡೌನ್ ಪ್ರಕಾರ ಸುರಕ್ಷಿತವಾಗಿ ಮನೆಯಲ್ಲಿರುವ ಮೂಲಕ ನಿಯಮ ಪಾಲನೆ ಮಾಡಿ'' ಎಂದು ಕೇಳಿಕೊಂಡಿದ್ದಾರೆ.
-
Thank you Sonia Ji, Take care of your health.
— Jagat Prakash Nadda (@JPNadda) April 14, 2020 " class="align-text-top noRightClick twitterSection" data="
">Thank you Sonia Ji, Take care of your health.
— Jagat Prakash Nadda (@JPNadda) April 14, 2020Thank you Sonia Ji, Take care of your health.
— Jagat Prakash Nadda (@JPNadda) April 14, 2020
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೆ ಪಿ ನಡ್ಡಾ ಧನ್ಯವಾದಗಳು ಸೋನಿಯಾ ಜೀ, ನಿಮ್ಮ ಆರೋಗ್ಯ ಕಾಪಾಡಿಕೋಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ರಾಜಕೀಯ ವಲಯದಲ್ಲಿ ಸೋನಿಯಾ ಗಾಂಧಿ, ಪ್ರಧಾನ ಮಂತ್ರಿಗಳ ಭಾಷಣಕ್ಕೂ ಮುಂಚೆ ವಿಡಿಯೋ ಬಿಡುಗಡೆ ಮಾಡಬಾರದಿತ್ತು ಎಂಬ ಮಾತು ಕೇಳಿ ಬಂದಿದೆ.