ನವದೆಹಲಿ: ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷ ಪ್ರಮುಖ ಪಾತ್ರಧಾರಿ ಅಲ್ಲವೆಂದು ಹೇಳುವ ಮೂಲಕ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿರುವ ಅವರು, ದುಡ್ಡು ಪಡೆದಂತ ಕೆಲ ಮಾಧ್ಯಮಗಳು ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಸತ್ಯವನ್ನು ತಿರುಚಿವೆ' ಎಂದು ದೂರಿದ್ದಾರೆ.
-
Watch this video to see how paid media distorts the truth to serve their masters and distract attention from REAL issues. pic.twitter.com/i0pHwnbtvk
— Rahul Gandhi (@RahulGandhi) May 26, 2020 " class="align-text-top noRightClick twitterSection" data="
">Watch this video to see how paid media distorts the truth to serve their masters and distract attention from REAL issues. pic.twitter.com/i0pHwnbtvk
— Rahul Gandhi (@RahulGandhi) May 26, 2020Watch this video to see how paid media distorts the truth to serve their masters and distract attention from REAL issues. pic.twitter.com/i0pHwnbtvk
— Rahul Gandhi (@RahulGandhi) May 26, 2020
ನಾವು ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಬೆಂಬಲಿಸುತ್ತಿದ್ದೇವೆ. ಆದರೆ, ನಾವು ಮಹಾರಾಷ್ಟ್ರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರಲ್ಲ. ನಾವು ಪಂಜಾಬ್ ರಾಜಸ್ಥಾನ, ಪುದುಚೇರಿ, ಛತ್ತೀಸ್‌ಗಢದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರು. ಆದ್ದರಿಂದ, ಸರ್ಕಾರವನ್ನು ನಡೆಸುವುದು ಮತ್ತು ಸರ್ಕಾರವನ್ನು ಬೆಂಬಲಿಸುವುದರ ನಡುವೆ ವ್ಯತ್ಯಾಸವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಕಾಂಗ್ರೆಸ್, ಮಹಾರಾಷ್ಟ್ರ ಸರ್ಕಾರವನ್ನು ಬೆಂಬಲಿಸುತ್ತಿದೆ. ಆದರೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ನಮ್ಮ ಪಾತ್ರ ಇಲ್ಲ ಎಂದಿದ್ದರು.