ನವದೆಹಲಿ: ಇಂದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯವರಿಗೆ 39ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ವೆಸ್ಟ್ಇಂಡೀಸ್ನ ಆಲ್ರೌಂಡರ್ ಡ್ವೇನ್ ಬ್ರಾವೋ ಧೋನಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.
ಡ್ವೇನ್ ಬ್ರಾವೋ ರಚಿಸಿದ ಹಾಡೊಂದನ್ನು ಡೆಡಿಕೇಟ್ ಮಾಡಿ ಗೌರವ ಸಲ್ಲಿಸಿದ್ದಾರೆ. ಈ ಹಾಡಿನಲ್ಲಿ ಮಾಹಿಯ ಸಾಧನೆ ಬಗ್ಗೆ ಗುಣಗಾನ ಮಾಡಿದ್ದು, "ಹೆಲಿಕಾಪ್ಟರ್ 7" ಎಂದು ಶೀರ್ಷಿಕೆ ನೀಡಲಾಗಿದೆ. ಇನ್ನು‘'ಎಂಎಸ್ ಧೋನಿ, ನಂಬರ್ ಸೆವೆನ್, ಎಂಎಸ್ ಧೋನಿ, ನಂಬರ್ ಸೆವೆನ್, ಆಲ್ ಆಫ್ ರಾಂಚಿ ಶೌಟಿಂಗ್ ಧೋನಿ, ಆಲ್ ಆಫ್ ಇಂಡಿಯಾ ಶೌಟಿಂಗ್ ಮಾಹಿ, ಆಲ್ ಆಫ್ ಚೆನ್ನೈ ಶೌಟಿಂಗ್ ತಾಲಾ, ಎಂಎಸ್ ಈಸ್ ಅ ವರ್ಲ್ಡ್ ಬೀಟರ್‘‘ ಎಂಬ ಸಾಹಿತ್ಯ ಹೊಂದಿದೆ.
- " class="align-text-top noRightClick twitterSection" data="">
2005ರಲ್ಲಿ ಪಾಕಿಸ್ತಾನದ ವಿರುದ್ಧ ಧೋನಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ತನ್ನ ಮೊದಲ ಶತಕ ಬಾರಿಸಿದ್ದರು. ಇನ್ನು ಇಂತಹ ನಿರ್ಣಾಯಕ ಪಂದ್ಯದಲ್ಲಿ ಧೋನಿಗೆ ಅವಕಾಶ ಕೊಟ್ಟ ಸೌರವ್ ಗಂಗೂಲಿ ಅವರಿಗೆ ಬ್ರಾವೋ ಧನ್ಯವಾದ ಸಲ್ಲಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಧೋನಿ ಮತ್ತು ಬ್ರಾವೋ ಆಟವಾಡಿದ್ದಾರೆ.