ETV Bharat / bharat

ಬೋರ್​ವೆಲ್​ನಲ್ಲಿ ಬಿದ್ದ ಐದು ವರ್ಷದ ಮಗು... ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯ - ಉತ್ತರ ಪ್ರದೇಶ ಇತ್ತೀಚಿನ ಘಟನೆ

ಮಧ್ಯಪ್ರದೇಶದ ನಿವಾಡಾ ಪ್ರದೇಶದಲ್ಲಿ ಐದು ವರ್ಷದ ಮಗುವೊಂದು ಬೋರ್​ವೆಲ್​ನಲ್ಲಿ ಬಿದ್ದಿದ್ದು, ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Five year old falls in borewell
Five year old falls in borewell
author img

By

Published : Nov 4, 2020, 4:53 PM IST

Updated : Nov 4, 2020, 5:30 PM IST

ನಿವಾಡಾ(ಮಧ್ಯಪ್ರದೇಶ): ಇಲ್ಲಿನ ನಿವಾಡಾ ಪ್ರದೇಶದಲ್ಲಿ ಐದು ವರ್ಷದ ಮಗುವೊಂದು ತೆರೆದ ಬೋರ್​ವೆಲ್​ನಲ್ಲಿ ಬಿದ್ದಿದ್ದು, ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಧ್ಯಪ್ರದೇಶದ ನಿವಾಡಾದಲ್ಲಿ ಈ ಘಟನೆ ನಡೆದಿದ್ದು, ಮಗು ಏಕಾಏಕಿಯಾಗಿ 200 ಅಡಿ ಆಳದ ಬೋರ್​ವೆಲ್​ನಲ್ಲಿ ಬಿದ್ದಿದೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

  • Army, along with local administration is engaged in a rescue operation to save innocent Prahlad, who fell in a borewell in Setpura village. I'm confident that soon he'll be taken out safely. God bless the child with long life. Let's all pray for him: MP CM Shivraj Singh Chouhan https://t.co/hiX9O0rRAK pic.twitter.com/dnxXTxcLDf

    — ANI (@ANI) November 4, 2020 " class="align-text-top noRightClick twitterSection" data=" ">

ಬೋರ್​ವೆಲ್​​ ಕಳೆದ ಕೆಲ ದಿನಗಳಿಂದ ಓಪನ್ ಆಗಿತ್ತು ಎಂದು ತಿಳಿದು ಬಂದಿದ್ದು, ಆಟವಾಡಲು ತೆರಳಿದ್ದ ಮಗು ಅದರಲ್ಲಿ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮಗುವಿನ ಧ್ವನಿ ಕೇಳಿಸುತ್ತಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಪ್ರತಿಕ್ರಿಯೆ ನೀಡಿದ್ದು, ಸೇನೆ ಹಾಗೂ ಸ್ಥಳೀಯ ಆಡಳಿತ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಬಾಲಕನನ್ನ ಸುರಕ್ಷಿತವಾಗಿ ರಕ್ಷಿಸುವ ಎಲ್ಲ ಕಾರ್ಯ ಕೈಗೊಳ್ಳಲಾಗಿದೆ ಎಂದಿದ್ದಾರೆ. ಆತನ ಸುರಕ್ಷತೆಗಾಗಿ ನಿವೆಲ್ಲರೂ ಪ್ರಾರ್ಥನೆ ಮಾಡಿ ಎಂದಿದ್ದಾರೆ.

Last Updated : Nov 4, 2020, 5:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.