ಭೋಪಾಲ್, ಮಧ್ಯಪ್ರದೇಶ: ತಬ್ಲಿಘಿ ಜಮಾತ್ನಿಂದ ಬಂದ ಮಾಹಿತಿಯನ್ನು ಬಚ್ಚಿಟ್ಟಿದ್ದ ವಿವಿಧ ರಾಜ್ಯಗಳ 10 ಮಂದಿ ಸೇರಿದಂತೆ 64 ವಿದೇಶಿಗರ ಮೇಲೆ ಭೋಪಾಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇವರಲ್ಲಿ 10 ಮಂದಿ ಸ್ಥಳೀಯರಾಗಿದ್ದು, ಭೋಪಾಲ್ನ ವಿವಿಧೆಡೆಗಳಲ್ಲಿರುವ ಮಸೀದಿಗಳಲ್ಲಿ ತಂಗಿದ್ದವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಧ್ಯಪ್ರದೇಶದ ಎಎಸ್ಪಿ ರಜತ್ ಸಕ್ಲೇಚಾ ಸ್ಪಷ್ಟಪಡಿಸಿದ್ದಾರೆ.
ಇಲ್ಲಿಯವರೆಗೆ ಭೋಪಾಲ್ನ ನಗರದ ವಿವಿಧ ಮಸೀದಿಗಳಲ್ಲಿ ತಂಗಿದ್ದ 74 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಎಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
64 ವಿದೇಶಿಯರು ಮಯನ್ಮಾರ್, ಇಂಡೋನೇಷ್ಯಾ, ಫ್ರಾನ್ಸ್, ಬೆಲ್ಜಿಯಂ, ಕಿರ್ಗಿಸ್ತಾನ್ಗಳಿಗೆ ಸೇರಿದ್ದು, ವಿದೇಶಿಗರ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಅವರ ಮೇಲೆ ಕೇಳಿಬಂದಿದೆ. ಐದು ಠಾಣೆಗಳಲ್ಲಿ ಇವರ ವಿರುದ್ಧ ದೂರು ದಾಖಲಾಗಿದ್ದು,
ಸುಮಾರು 8 ಮಂದಿ ಜಮಾತ್ ಸದಸ್ಯರಾಗಿದ್ದ ವಿದೇಶಿಗರಲ್ಲಿ ಕೊರೊನಾ ದೃಢಪಟ್ಟಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯಿಂದ ಗುಣಮುಖರಾದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಜತ್ ಸಕ್ಲೇಚಾ ಸ್ಪಷ್ಟನೆ ನೀಡಿದ್ದಾರೆ.