ETV Bharat / bharat

ಟ್ರ್ಯಾಕ್ಟರ್​ ಪರೇಡ್ ಬಳಿಕ ಮನೆಗಳತ್ತ ರೈತರು: 22 ಅನ್ನದಾತರ ವಿರುದ್ಧ ಎಫ್​ಐಆರ್​

author img

By

Published : Jan 27, 2021, 10:12 AM IST

ಸಂಯುಕ್ತ ಕಿಸಾನ್​ ಮೋರ್ಚಾ ವತಿಯಿಂದ ಟ್ರ್ಯಾಕ್ಟರ್​ ಪರೇಡ್​ ಆಯೋಜಿಸಲಾಗಿತ್ತು. ಈ ವೇಳೆ ಅಹಿತಕರ ಘಟನೆಗಳು ಸಂಭವಿಸಿದ ಪರಿಣಾಮ ದೆಹಲಿ, ಹಿರಯಾಣ, ಪಂಜಾಬ್​​ನಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದ ಪಂಜಾಬ್‌ನ ರೈತರು ವಾಪಸ್​ ಮನೆಗೆ ಮರಳುತ್ತಿದ್ದಾರೆ.

ಟ್ರ್ಯಾಕ್ಟರ್​ ಪರೇಡ್ ಬಳಿಕ ಮನೆಗಳತ್ತಾ ಮರಳುತ್ತಿರುವ ರೈತರು

ನವದೆಹಲಿ: ರಾಷ್ಟ್ರರಾಜಧಾನಿ ಗಡಿಯಲ್ಲಿ ಸಂಯುಕ್ತ ಕಿಸಾನ್​ ಮೋರ್ಚಾದಿಂದ ಟ್ರ್ಯಾಕ್ಟರ್​ ಪರೇಡ್​ ಆಯೋಜಿಸಲಾಗಿತ್ತು. ಈ ವೇಳೆ, ಹಿಂಸಾತ್ಮಕ ಘರ್ಷಣೆಗಳು ನಡೆದ ಪರಿಣಾಮ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಇದೀಗ ಎಲ್ಲ ರೈತರು ತಮ್ಮ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಈ ಹಿನ್ನೆಲೆ ಗೃಹ ಸಚಿವ ಅಮಿತ್​ ಶಾ ಸಭೆ ನಡೆಸಿ,10 ಸಿಆರ್​ಪಿಎಫ್​​ ತುಕಡಿ ನಿಯೋಜಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಿದ್ದರು.

ನಿನ್ನೆ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಮುಖಂಡರು ಈ ಹಿಂಸಾತ್ಮಾಕ ಕೃತ್ಯದಲ್ಲಿ ರೈತರು ಭಾಗಿಯಾಗಿಲ್ಲ ಎಂದಿದ್ದಾರೆ. ಅಲ್ಲದೇ ದೆಹಲಿ, ಹರಿಯಾಣ, ಪಂಜಾಬ್​​ನಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ಓದಿ:ಶಾಂತಿ ನಿರ್ಮಾಣ ನಿಧಿಗೆ ಭಾರತದಿಂದ 150,000 ಡಾಲರ್ ದೇಣಿಗೆ ​ಘೋಷಣೆ

ಈ ಎಲ್ಲ ಕಾರಣಗಳಿಂದ ಪಂಜಾಬ್‌ನ ರೈತರು ವಾಪಸ್​ ಮನೆಗೆ ಮರಳುತ್ತಿದ್ದಾರೆ. ದೆಹಲಿಯ ಹೆದ್ದಾರಿಯಲ್ಲಿ ಲಕ್ಷಾಂತರ ಜನರು ಟ್ರ್ಯಾಕ್ಟರ್​​ಗಳ ಜೊತೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ.

22ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ಎಫ್​ಐಆರ್

ನಿನ್ನೆಯ ಘಟನೆಗೆ ಕಾರಣರಾದ ಪ್ರತಿಭಟನಾಕಾರರ ವಿರುದ್ಧ ದೆಹಲಿ ಪೊಲೀಸರು ಈಗ ಎಫ್​ಐಆರ್​ ದಾಖಲಿಸಿದ್ದಾರೆ. ಸುಮಾರು 22 ಮಂದಿಯ ವಿರುದ್ಧ ಅವರು ಕೇಸ್​ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.