ETV Bharat / bharat

ಸೆ.​​ 14ರಿಂದ ಅಕ್ಟೋಬರ್​​ 1ರವರೆಗೆ ಸಂಸತ್​​​ ಅಧಿವೇಶನ... ದಿನಕ್ಕೆ 4 ಗಂಟೆ, ಯಾವುದೇ ರಜೆ ಇಲ್ಲ! - ಕೇಂದ್ರ ಸರ್ಕಾರ

ಕೊರೊನಾ ವೈರಸ್​​ ಹಾವಳಿ ಮಧ್ಯೆ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಗೊಳ್ಳಲು ಮುಹೂರ್ತ ಫಿಕ್ಸ್​​ ಆಗಿದ್ದು, ಅದಕ್ಕಾಗಿ ಕೆಲವೊಂದು ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Monsoon Session
Monsoon Session
author img

By

Published : Aug 25, 2020, 7:42 PM IST

Updated : Aug 25, 2020, 9:29 PM IST

ನವದೆಹಲಿ: ದೇಶಾದ್ಯಂತ ಕೊರೊನಾ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಎಲ್ಲ ಕೆಲಸ-ಕಾರ್ಯ ಈ ಹಿಂದಿನಂತೆ ಆರಂಭಗೊಳ್ಳಲು ಶುರುವಾಗಿವೆ. ಇದೀಗ ಕೇಂದ್ರ ಮಳೆಗಾಲದ ಅಧಿವೇಶನ ನಡೆಸಲು ಮುಹೂರ್ತ ಫಿಕ್ಸ್​ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾ ವೈರಸ್​, ಲಾಕ್​ಡೌನ್​ ಬಳಿಕ ಆರಂಭಗೊಳ್ಳುವ ಮೊದಲ ಅಧಿವೇಶನ ಇದಾಗಲಿದ್ದು, ಸೆಪ್ಟೆಂಬರ್​ 14ರಿಂದ ಅಕ್ಟೋಬರ್​ 1ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶನಿವಾರ ಮತ್ತು ಭಾನುವಾರ ರಜೆ ತೆಗೆದುಕೊಳ್ಳದೇ ಅಧಿವೇಶನ ನಡೆಸಲು ನಿರ್ಧರಿಸಲಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದಿನಕ್ಕೆ 4 ಗಂಟೆಗಳ ಕಾಲ ನಡೆಸಲು ನಿರ್ಧರಿಸಲಾಗಿದೆ.

ಅಧಿವೇಶನದ ಸಮಯದಲ್ಲಿ ಸಚಿವರು, ಸಂಸದರು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡದಂತೆ ಸೂಚನೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದರ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದ್ದು, ಅಧಿವೇಶನ ನಡೆಯುವ ಸ್ಥಳದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಧಾನ ಮಂತ್ರಿ, ಕೇಂದ್ರ ಸಚಿವರು ಹಾಗೂ ಪ್ರತಿಪಕ್ಷದ ನಾಯಕರಿಗೆ ಕುರ್ಚಿ ಮೀಸಲಿಡಲಾಗಿದ್ದು, ಇದರ ಜತೆಗೆ ಡಾ. ಮನಮೋಹನ್​ ಸಿಂಗ್​ ಹಾಗೂ ಹೆಚ್​ಡಿ ದೇವೇಗೌಡ ಅವರಿಗೆ ಖುರ್ಚಿ ಮೀಸಲಿಡಲಾಗಿದೆ.

ಕೇವಲ 7 ವರದಿಗಾರರಿಗೆ ಅವಕಾಶ

ಅಧಿವೇಶನದ ವರದಿ ಮಾಡಲು ಕೇವಲ 7 ವರದಿಗಾರರಿಗೆ ಮಾತ್ರ ಅವಕಾಶ ನೀಡಲಾಗಿದ್ದು,ಪ್ರಮುಖವಾಗಿ ಪಿಟಿಐ, ಯುಎನ್​​ಐ, ದೂರದರ್ಶನ ಸೇರಿದಂತೆ ಪ್ರಮುಖ ಸುದ್ದಿವಾಹಿನಿಗಳು ಸೇರಿಕೊಳ್ಳಲಿವೆ.

Last Updated : Aug 25, 2020, 9:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.