ETV Bharat / bharat

ಸಂಸತ್​ ಅಧಿವೇಶನಕ್ಕೆ ಬಂದ ಅನಂತ್​ ಕುಮಾರ್ ಹೆಗಡೆ ಸೇರಿ 17 ಸಂಸದರಿಗೆ ಕೊರೊನಾ ದೃಢ

ಇಂದಿನಿಂದ ಆರಂಭವಾಗಿರುವ ಸಂಸತ್​ ಮುಂಗಾರು ಅಧಿವೇಶನಕ್ಕೆ ಆಗಮಿಸಿರುವ 17 ಸಂಸದರ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ.

Monsoon Session
ಸಂಸತ್​ ಮುಂಗಾರು ಅಧಿವೇಶನ
author img

By

Published : Sep 14, 2020, 5:26 PM IST

ನವದೆಹಲಿ: ಬಿಜೆಪಿ ಸಂಸದ ಅನಂತ್​ ಕುಮಾರ್​ ಹೆಗಡೆ ಸೇರಿ ಸಂಸತ್​ ಮುಂಗಾರು ಅಧಿವೇಶನಕ್ಕೆ ಆಗಮಿಸಿರುವ 17 ಸಂಸದರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಕೊರೊನಾ ಮಾನದಂಡಗಳೊಂದಿಗೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಒಟ್ಟು 359 ಸದಸ್ಯರು ಭಾಗಿಯಾಗಿದ್ದರು. ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ಬಿಜೆಪಿ ಸಂಸದರಾದ ಮೀನಾಕ್ಷಿ ಲೇಖಿ, ಪರ್ವೇಶ್ ಸಾಹಿಬ್ ಸಿಂಗ್, ಅನಂತ್​ ಕುಮಾರ್​ ಹೆಗಡೆ ಹಾಗೂ ವೈಎಸ್​ಆರ್​ ಕಾಂಗ್ರೆಸ್ ಸಂಸದರಾದ ರೆಡ್ಡಪ್ಪ, ಗೊಡ್ಡೇಟಿ ಮಾಧವಿ ಸೇರಿ ಒಟ್ಟು 17 ಸಂಸದರ ವರದಿ ಪಾಸಿಟಿವ್​ ಬಂದಿದೆ.

ಇನ್ನು ಸೋಂಕು ಭೀತಿ ಹಿನ್ನೆಲೆ ಮುಂಜಾಗ್ರತಾ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಇದೇ ಮೊದಲ ಬಾರಿಗೆ 'ಹಾಜರಾತಿ ನೋಂದಣಿ' ಆ್ಯಪ್ ಮೂಲಕ ಸಂಸದರ ಹಾಜರಾತಿಯನ್ನು ದಾಖಲಿಸಿಕೊಳ್ಳಲಾಗಿದೆ. ಲೋಕಸಭಾ ಕಲಾಪವನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.