ಧೋಲ್‌ಪುರ (ರಾಜಸ್ಥಾನ): ರಾಜಸ್ಥಾನದ ಧೋಲ್‌ಪುರ ಬಳಿ ಲಾಕ್‌ಡೌನ್ ಜಾರಿಗೊಳಿಸಲು ಯತ್ನಿಸುತ್ತಿದ್ದ ಪೊಲೀಸರ ತಂಡದ ಮೇಲೆ ಜನ ಹಲ್ಲೆ ಮಾಡಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ತಂಬಾಕು ಅಂಗಡಿ ತೆರೆದಿದೆ ಎಂಬ ಸುಳಿವು ಸಿಕ್ಕ ಪೊಲೀಸರು ಪರಿಶೀಲಿಸಲು ಬಂದಾಗ ಈ ದಾಳಿ ನಡೆದಿದೆ.
12ಕ್ಕೂ ಹೆಚ್ಚು ಜನರು ತಂಬಾಕು ಅಂಗಡಿಯಲ್ಲಿ ಕುಳಿತಿದ್ದರು. ಲಾಕ್ ಡೌನ್ ಕಾರಣ ಮನೆಗೆ ಹೋಗಬೇಕೆಂದು ಹೇಳಿದಾಗ, ಪೊಲೀಸರ ಮೇಲೆಯೇ ಜನ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಉಳಿದವರು ತಮ್ಮ ಜೀವ ರಕ್ಷಣೆಗಾಗಿ ಸ್ಥಳದಿಂದ ಓಡಿ ಹೋಗಿದ್ದಾರೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದರು.
ಆದರೆ ಪೊಲೀಸರು ಸ್ಥಳ ತಲುಪುವಾಗ ಆರೋಪಿಗಳು ಪರಾರಿಯಾಗಿದ್ದರು. ಈಗಾಗಲೇ ನಾಲ್ಕು ಜನರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತದೆ.