ETV Bharat / bharat

6 ತಿಂಗಳಿಂದ ಇಬ್ಬರು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ: ಏಳು ಜನರ ಬಂಧನ - ಆರು ತಿಂಗಳಿಂದ ಇಬ್ಬರು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ

ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರು ಅಪ್ರಾಪ್ತೆಯರ ಮೇಲೆ ಕಳೆದ ಆರು ತಿಂಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ಎಸಗಿರುವ ಘಟನೆ ನಡೆದಿದೆ.

Minor Girls
Minor Girls
author img

By

Published : Oct 12, 2020, 7:08 PM IST

ನಮಕ್ಕಲ್​​( ತಮಿಳುನಾಡು): ಇಬ್ಬರು ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ 75 ವರ್ಷದ ವೃದ್ಧ ಸೇರಿದಂತೆ ಏಳು ಮಂದಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ನಮಕ್ಕಲ್​​​ನಲ್ಲಿ ಈ ಘಟನೆ ನಡೆದಿದ್ದು, 13 ಹಾಗೂ 7 ವರ್ಷದ ಬಾಲಕಿಯರ ಮೇಲೆ ಕಳೆದ ಆರು ತಿಂಗಳಿಂದ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಭಾನುವಾರು ಇಬ್ಬರು ಬಾಲಕಿಯರು ನಗ್ನರಾಗಿ ಮನೆಯಿಂದ ಹೊರಬಂದ ಬಳಿಕ ಇದು ಬೆಳಕಿಗೆ ಬಂದಿದೆ. ದೃಶ್ಯ ನೋಡಿರುವ ನೆರೆ ಹೊರೆಯವರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಬಾಲಕಿಯರು ಕಳೆದ ಆರು ತಿಂಗಳಿಂದ ತಮ್ಮ ಮೇಲೆ ಒಂದೇ ಪ್ರದೇಶದ ಹತ್ತಾರು ಪುರುಷರು ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಆಧಾರದ ಮೇಲೆ ಜಿಲ್ಲಾ ಮಕ್ಕಳ ಕಲ್ಯಾಣ ಅಧಿಕಾರಿ ದೂರು ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ರಾಶಿಪುರಂನಲ್ಲಿ ಇಬ್ಬರು ಬಾಲಕಿಯರ ತಾಯಿ ಪ್ಯಾಕ್ಟರಿವೊಂದರಲ್ಲಿ ಕೆಲಸ ಮಾಡ್ತಿದ್ದು, ಮಕ್ಕಳಿಬ್ಬರಿಗೂ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದಳು. ಈ ವೇಳೆ ಅವರ ಮೇಲೆ ಅನೇಕರು ದೌರ್ಜನ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 75 ವರ್ಷದ ಮುತ್ತುಸ್ವಾಮಿ, ವರ್ದರಾಜ್​(55), ಷಣ್ಮುಗಂ(45),ಮಣಿಕಂದನ್​(30), ಶಿವಾ(26), ಸೂರ್ಯ(23) ಸೇರಿದಂತೆ 7 ಮಂದಿ ಬಂಧನ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸದ್ಯ ಮಕ್ಕಳ ಆರೈಕೆ ಇಲಾಖೆಯಲ್ಲಿ ಇಡಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.