ETV Bharat / bharat

ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಕಾಮಾಂಧರು!! - ರಾಜಸ್ಥಾನದ ಬಾಲಕಿಯ ಅಪಹರಣ ಪ್ರಕರಣ

ಬರ್ಮರ್ ಜಿಲ್ಲಾಧಿಕಾರಿ ವಿಶ್ರಮ್ ಮೀನಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಶರ್ಮಾ ಆಸ್ಪತ್ರೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅ.4ರಿಂದ ಇತ್ತೀಚೆಗೆ ಇಲ್ಲಿನ ಜಲೋನ್​ ಜಿಲ್ಲೆ ಸೇರಿ ಎರಡು ಘಟನೆ ನಡೆದಿವೆ..

Minor girl allegedly gangraped in Rajasthan's Barmer
ಸಾಂದರ್ಭಿಕ ಚಿತ್ರ
author img

By

Published : Oct 7, 2020, 4:47 PM IST

ಬರ್ಮೆರ್​ (ರಾಜಸ್ಥಾನ) : ರಾಜಸ್ಥಾನದ ಬರ್ಮೆರ್​​​ನಲ್ಲಿ ಅಪ್ರಾಪ್ತ ಬಾಲಕಿ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಶಿವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಮುಕರು ಈ ಕೃತ್ಯ ಎಸಗಿದ್ದಾರೆ.

ಯಾರೂ ಇಲ್ಲದ ಸಮಯ ನೋಡಿ ಮನೆಯಲ್ಲಿ ಒಂಟಿಯಾಗಿದ್ದ 15 ವರ್ಷದ ಬಾಲಕಿಯನ್ನು ಅಪಹರಿಸಿದ ಇಬ್ಬರು ಕಾಮಾಂಧರು, ಬೈಕ್​ ಮೂಲಕ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಇಬ್ಬರು ಈ ಕೃತ್ಯವನ್ನು ತಮ್ಮ ಫೋನ್​ಗಳಲ್ಲಿ ಚಿತ್ರೀಕರಿಸಿದ್ದಾರೆ.

ಕೃತ್ಯದ ಬಳಿಕ ಸಂತ್ರಸ್ತೆಯನ್ನು ಬಿಟ್ಟು ಕಾಮುಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ನೋಡಿದ ಕುಟುಂಬದ ಸದಸ್ಯರು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ.

ಬರ್ಮರ್ ಜಿಲ್ಲಾಧಿಕಾರಿ ವಿಶ್ರಮ್ ಮೀನಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಶರ್ಮಾ ಆಸ್ಪತ್ರೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅ.4ರಿಂದ ಇತ್ತೀಚೆಗೆ ಇಲ್ಲಿನ ಜಲೋನ್​ ಜಿಲ್ಲೆ ಸೇರಿ ಎರಡು ಘಟನೆ ನಡೆದಿವೆ.

ಇದೀಗ ಮತ್ತೊಂದು ಮಾನಗೇಡಿ ಪ್ರಕರಣ ವರದಿಯಾಗಿರುವುದು ಕಂಡು ಬಂದಿದೆ. ಹಥ್ರಾಸ್​ ಘಟನೆಯ ನಂತರ ಕಾಮುಕರ ಪೈಶಾಚಿಕ ಕೃತ್ಯ ನಡೆಯುತ್ತಲೇ ಇದ್ದು, ದೇಶಾದ್ಯಂತ ಆಕ್ರೋಶ ಸಹ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.