ETV Bharat / bharat

ಲಾಕ್​ಡೌನ್ ನಿಯಮ ಉಲ್ಲಂಘಿಸಿ ಪ್ರತಿಭಟನೆ: ಸಾವಿರಾರು ವಲಸೆ ಕಾರ್ಮಿಕರ ವಿರುದ್ಧ FIR - ಕೊರೊನಾ ವೈರಸ್

ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಲಾಕ್​ಡೌನ್ ಬಳಿಕ ಮತ್ತೆ ಮೇ 3ರವರೆಗೆ ವಿಸ್ತರಣೆ ಮಾಡುವುದಾಗಿ ತಮ್ಮ ಭಾಷಣದಲ್ಲಿ ಘೋಷಿಸಿದರು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ 1,000 ಅಧಿಕ ವಲಸಿಗ ಕಾರ್ಮಿಕರು, 'ತಮ್ಮ ಮೂಲ ಮನೆಗಳಿಗೆ ತೆರಳಲು ಸಾರಿಗೆ ಅವಕಾಶ ಕಲ್ಪಿಸುವಂತೆ ಬೇಡಿಕೆ ಇಟ್ಟರು'.

Migrant workers
ವಲಸೆ ಕಾರ್ಮಿಕರು
author img

By

Published : Apr 14, 2020, 11:30 PM IST

Updated : Apr 15, 2020, 12:00 AM IST

ಮುಂಬೈ: ಕೊರೊನಾ ವೈರಸ್ ಲಾಕ್‌ಡೌನ್ ಮಾನದಂಡಗಳನ್ನು ಧಿಕ್ಕರಿಸಿ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಕನಿಷ್ಠ 1000 ವಲಸೆ ಕಾರ್ಮಿಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಜನರು ಗುಂಪು ಸೇರುವುದು ನಿಷೇಧಿತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ವಲಸಿಗ ಕಾರ್ಮಿಕರುನ್ನು ಬಂಧಿಸಿಲ್ಲ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 143 (ಕಾನೂನುಬಾಹಿರ ಸಭೆ ಸೇರುವುದು), 147 (ಗಲಭೆಗೆ ಶಿಕ್ಷೆ), 149 (ಸಾಮಾನ್ಯ ವಸ್ತುವಿನ ವಿಚಾರಣೆಯಲ್ಲಿ ಮಾಡಿದ ಅಪರಾಧ), 188 (ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) ಮತ್ತು 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ತಡೆಯುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅನ್ವಯ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಲಾಕ್​ಡೌನ್ ಬಳಿಕ ಮತ್ತೆ ಮೇ 3ರವರೆಗೆ ವಿಸ್ತರಣೆ ಮಾಡುವುದಾಗಿ ತಮ್ಮ ಭಾಷಣದಲ್ಲಿ ಘೋಷಿಸಿದರು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ 1,000 ಅಧಿಕ ವಲಸಿಗ ಕಾರ್ಮಿಕರು, 'ತಮ್ಮ ಮೂಲ ಮನೆಗಳಿಗೆ ತೆರಳಲು ಸಾರಿಗೆ ಅವಕಾಶ ಕಲ್ಪಿಸುವಂತೆ ಬೇಡಿಕೆ ಇಟ್ಟರು'.

ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಸಾವಿರಾರು ವಲಸಿಗ ಕಾರ್ಮಿಕರು

ಲಾಕ್​ಡೌನ್​ ಮಾನದಂಡಗಳನ್ನು ಉಲ್ಲಂಘಿಸಿ, ಬಾಂದ್ರಾದಲ್ಲಿ ನಡೆದ ನೆರೆದ ವಲಸಿಗ ಕಾರ್ಮಿಕರನ್ನು ಚದುರಿಸಲು ಪೊಲೀಸರು ಕೆಲ ಹೊತ್ತು ಹರಸಾಹಸ ಪಡಬೇಕಾಯಿತು.

Last Updated : Apr 15, 2020, 12:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.