ETV Bharat / bharat

''ಕಾಶ್ಮೀರದಲ್ಲಿ ಬೇರೆ ರಾಜ್ಯದ ಜನರಿಗೆ ಭೂಮಿ ಕೊಳ್ಳಲು ಅವಕಾಶ ಬೇಡ..'': ಪಂಡಿತರಲ್ಲಿ ಪರ-ವಿರೋಧವೇಕೆ?

ಜಮ್ಮು ಕಾಶ್ಮೀರದಲ್ಲಿ ಭೂಮಿ ಕೊಳ್ಳಲು ಅನುವಾಗುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಕೆಲವರು ಕಾಶ್ಮೀರಿ ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Migrant Kashmiri Pandits
ಪಂಡಿತರಲ್ಲಿ ಪರ-ವಿರೋಧವೇಕೆ?
author img

By

Published : Oct 29, 2020, 6:13 PM IST

ಶ್ರೀನಗರ (ಜಮ್ಮು ಕಾಶ್ಮೀರ): ವಲಸೆ ಬಂದ ಕಾಶ್ಮೀರ ಪಂಡಿತರು ತಮಗೆ ಜಮ್ಮು ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸುವವರೆಗೆ ಯಾವುದೇ ಕಾರಣದಕ್ಕೂ ರಾಜ್ಯದಿಂದ ಹೊರಗಿನ ಜನತೆಗೆ ಇಲ್ಲಿ ಭೂಮಿ ಕೊಳ್ಳಲು ಅವಕಾಶ ನೀಡಬಾರದೆಂದು ಆಗ್ರಹಿಸಿದ್ದಾರೆ.

ವಲಸೆ ಕಾಶ್ಮೀರ ಪಂಡಿತರ ಸಾಮರಸ್ಯ ಮತ್ತು ಪುನರ್ವಸತಿ ವಿಚಾರಕ್ಕೆ ಸಂಬಂಧಿಸಿದ ಸಂಘಟನೆಯೊಂದರ ಅಧ್ಯಕ್ಷ ಸತೀಶ್ ಕುಮಾರ್ ''ಭಾರತ ಸರ್ಕಾರ ಜಮ್ಮು ಕಾಶ್ಮೀರ ಭೂ ಕಾನೂನಿನ ಅಧಿಸೂಚನೆಯನ್ನು ಅಕ್ಟೋಬರ್ 27, 2020ರಲ್ಲಿ ಹೊರಡಿಸಿದ್ದು, ಈ ಅಧಿಸೂಚನೆಯಿಂದಾಗಿ ಕಾಶ್ಮೀರಿ ಪಂಡಿತರು ಮೋಸಹೋದಂತಾಗಿದೆ. ಸುಮಾರು 31 ವರ್ಷಗಳಿಂದ ಪುನರ್ವಸತಿಗಾಗಿ ಇಲ್ಲಿನ ಪಂಡಿತರು ಕಾಯುತ್ತಿದ್ದು, ಈವರೆಗೂ ಸಾದ್ಯವಾಗಿಲ್ಲ. 1989ರಿಂದ ನರಮೇದ ಕಂಡ ಸಮುದಾಯದ ವಿರುದ್ಧ ಈ ರೀತಿ ನಡೆದುಕೊಳ್ಳುವುದ ನ್ಯಾಯವೇ? '' ಎಂದು ಪ್ರಶ್ನಿಸಿದ್ದಾರೆ

ಕೇಂದ್ರ ಹಾಗೂ ರಾಜ್ಯದಲ್ಲಿರುವ ಸರ್ಕಾರಗಳು ಕಣಿವೆ ರಾಜ್ಯದಲ್ಲಿನ ಜನರನ್ನು ರಕ್ಷಿಸಲು ವಿಫಲವಾಗಿದೆ. ಈ ಸರ್ಕಾರಗಳು ನಮ್ಮ ಸಮುದಾಯದ ವಿಚಾರದಲ್ಲಿ ಮೌನ ವಹಿಸಿವೆ. ಸತತ ಕಿರುಕುಳಕ್ಕೆ ಕಾಶ್ಮೀರಿ ಪಂಡಿತರ ಸಮುದಾಯವನ್ನು ನಿರ್ಲಕ್ಷಿಸುತ್ತಿವೆ ಎಂದು ಸತೀಶ್ ಕುಮಾರ್ ಆರೋಪಿಸಿದ್ದಾರೆ.

ಮತ್ತೊಂದೆಡೆ ರೂಟ್ಸ್​ ಇನ್ ಕಾಶ್ಮೀರ್​ (ಆರ್​ಐಕೆ), ಜಮ್ಮು ಕಾಶ್ಮೀರ ವಿಚಾರ ಮಂಚ್ (ಜೆಕೆವಿಎಂ), ಯೂಥ್ ಫಾರ್ ಪನುನ್ ಕಾಶ್ಮೀರ್ (ವೈಪಿಕೆ) ಸಂಘಟನೆಗಳು ಕೇಂದ್ರ ಸರ್ಕಾರದ ಜಮ್ಮು ಕಾಶ್ಮೀರ ಭೂ ಕಾನೂನಿನ ಅಧಿಸೂಚನೆಗೆ ಸ್ವಾಗತ ವ್ಯಕ್ತಪಡಿಸಿವೆ.

ಜೆಕೆವಿಎಂ ಅಧ್ಯಕ್ಷ ದಿಲೀಪ್ ಮಟ್ಟೂ​ ಈ ಕುರಿತು ಅಧಿಕೃತ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಕಾಶ್ಮೀರ ಪಂಡಿತರ ಸಮುದಾಯವು ಹೆಚ್ಚು ಆಕಾಂಕ್ಷೆಗಳನ್ನು ಈ ವಿಚಾರದಲ್ಲಿ ಇಟ್ಟುಕೊಂಡಿದೆ ಎಂದು ಹೇಳಿದ್ದು, ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಯಾವುದೇ ರಾಜಿ ಇಲ್ಲ ಎಂದು ಈ ವೇಳೆ ಸ್ಪಷ್ಟನೆ ನೀಡಿದ್ದಾರೆ. ಇದೇ ರೀತಿ ಹಲವು ಸಂಘಟನೆಗಳ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.