ಜೈಸಲ್ಮೇರ್(ರಾಜಸ್ಥಾನ): ಇಲ್ಲಿನ ಲಾಂಗ್ವಾಲ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಲು ಮುಂದಾಗಿದ್ದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸದ್ಯ ಆತನನ್ನು ವಿಚಾರಣೆ ನಡೆಸಿದ ಭದ್ರತಾ ಅಧಿಕಾರಿಗಳು, ಬಂಧಿತ ವ್ಯಕ್ತಿ ತನ್ನ ಹೆಸರು ನಂದು ಎಂದು ಹೇಳಿದ್ದಾನೆ. ಈತ ಮಾನಸಿಕ ಅಸ್ವಸ್ಥನಾಗಿರುವ ಹಿನ್ನೆಲೆ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.
ಆತನ ಹಿನ್ನೆಲೆ ಕಂಡು ಹಿಡಿಯಲು ಭಧ್ರತಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಇಲ್ಲಿಗೆ ಏಕೆ ಬಂದ, ಈತನ ಮೂಲ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.