ಶಿಲ್ಲಾಂಗ್ (ಮೇಘಾಲಯ): ನಾಲ್ಕು ದಶಕಗಳಷ್ಟು ಹಳೆಯದಾದ ಕಾರ್ಖಾನೆಗಳ ನಿಯಮಗಳಿಗೆ ತಿದ್ದುಪಡಿ ತರಲು ಮೇಘಾಲಯ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದರಡಿ ರಾಜ್ಯದ ಕಾರ್ಖಾನೆಗಳ ಮಹಿಳಾ ಕಾರ್ಮಿಕರು ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನ ಪಡೆಯಲಿದ್ದಾರೆ.
ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ಸ್ ಹಾಗೂ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕಿಟ್ಗಳನ್ನು ಕಡ್ಡಾಯವಾಗಿ ಒದಗಿಸುವಂತೆ ಮೇಘಾಲಯ ಸರ್ಕಾರ ಎಲ್ಲಾ ಕಾರ್ಖಾನೆಗಳಿಗೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ 1980ರ ಮೇಘಾಲಯ ಕಾರ್ಖಾನೆಗಳ ನಿಯಮಗಳ ಕಾಯ್ದೆಯ 25 ಮತ್ತು 78 (ಸಿ) ನೀತಿಗಳನ್ನು ತಿದ್ದುಪಡಿ ಮಾಡಿ, ಈ ಆದೇಶ ನೀಡಲಾಗಿದೆ.