ಪಾಟ್ನಾ (ಬಿಹಾರ) : ಪಾಟ್ನಾದ ದಿದರ್‌ಗಂಜ್ ಪ್ರದೇಶದ ಪೆಟ್ರೋಲ್ ಪಂಪ್ ಎದುರಿನ ಸ್ಕ್ರ್ಯಾಪ್ ಗೋದಾಮಿನಲ್ಲಿ ಇಂದು ಬೆಳಗ್ಗೆ ಆಕಸ್ಮಿಕ ಅಗ್ನಿ ಅವಘಡ ಜರುಗಿದ್ದು, ಅಧಿಕ ಪ್ರಮಾಣದ ಹಾನಿ ಸಂಭವಿಸಿದೆ.
ಭಾರಿ ಪ್ರಮಾಣದಲ್ಲಿ ಬೆಂಕಿ ಹರಡಿದ ಪರಿಣಾಮ ಗೋದಾಮಿನ ಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಗೋದಾಮು ಜನನಿಬಿಡ ಪ್ರದೇಶದಲ್ಲಿರುವುದರಿಂದ ಜನರಲ್ಲಿ ಭೀತಿ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಸ್ಥಳದಲ್ಲಿಯೇ ಪೊಲೀಸರು ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಗೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಕೆಲವು ದಿನಗಳ ಹಿಂದಷ್ಟೇ ಅದೇ ಪ್ರದೇಶದ ಸ್ಕ್ರ್ಯಾಪ್ ಗೋದಾಮಿನಲ್ಲಿ ಬೆಂಕಿ ಅವಘಡ ಜರುಗಿತ್ತು, ಆಗ ಬೆಂಕಿಯನ್ನು ನಂದಿಸಲು ಸುಮಾರು ಆರು ಗಂಟೆ ಸಮಯ ಹಿಡಿದಿತ್ತು.