ನವದೆಹಲಿ: ಮಾರ್ಚ್ ತಿಂಗಳ ಜಿಎಸ್ಟಿ ಸಂಗ್ರಹದ ಅಂತ್ಯಕ್ಕೆ ಇನ್ನೂ ಒಂಬತ್ತು ದಿನ ಬಾಕಿ ಇರುವಾಗಲೇ ತಿಂಗಳ ತೆರಿಗೆ ಕಲೆಕ್ಷನ್ ಮೊತ್ತ ₹ 1 ಲಕ್ಷ ಕೋಟಿ ದಾಟಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ (ಫೆಬ್ರವರಿ) ₹ 10.70 ಲಕ್ಷ ಕೋಟಿ ಸಂಗ್ರಹವಾಗಿದೆ.
ಉದ್ದೇಶಿತ ಒಟ್ಟು ವಾರ್ಷಿಕ ಜಿಎಸ್ಟಿ ಸಂಗ್ರಹವನ್ನು ₹ 13.71 ಲಕ್ಷ ಕೋಟಿಯಷ್ಟು ಕೇಂದ್ರ ಸರ್ಕಾರ ಇರಿಸಿಕೊಂಡಿತ್ತು. ಅದನ್ನು ಪರಿಷ್ಕರಿಸಿ ₹ 11.47 ಲಕ್ಷ ಕೋಟಿಗೆ ಸೀಮಿತ ಪಡಿಸಿಕೊಂಡಿದೆ. 2019-20ರ ಆರ್ಥಿಕ ವರ್ಷದಲ್ಲಿ ಮತ್ತೆ ₹ 13.71 ಲಕ್ಷ ಕೋಟಿ ಸಂಗ್ರಹದ ಗುರಿ ಹೊಂದಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಎಸ್ಟಿ ಸಂಗ್ರಹ ಮೂರು ಬಾರಿ ಮಾತ್ರವೇ ಲಕ್ಷ ಕೋಟಿ ರೂ. ಶೇಖರಣೆ ಆಗಿದೆ. ಈ ಮೂಲಕ ಕೇಂದ್ರ ಸರ್ಕಾರ ತುಸು ನಿಟ್ಟುಸಿರು ಬಿಟ್ಟಿದೆ.