ಇಂದೋರ್: ಮಧ್ಯಪ್ರದೇಶದ ಧಾರ್ ಜಿಲ್ಲೆಯ ತಾನಾ ಗ್ರಾಮದಲ್ಲಿ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಇಲ್ಲಿಯವರೆಗೆ ನಡೆದ ವೈಫಲ್ಯದ ನೈಜತೆ ಬಯಲಾಗಿದೆ. ಅನೇಕ ಜನರು ತಮ್ಮ ಸ್ವ್ಯಾಬ್ ಅಥವಾ ರಕ್ತದ ಮಾದರಿಗಳನ್ನು ನೀಡದಿದ್ದರೂ ಸಹ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಕೆಲ ಹಳ್ಳಿಯಿಂದ ಕೇವಲ ನಾಲ್ಕು ಮಾದರಿಗಳನ್ನು ಸಂಗ್ರಹಿಸಿ, ಬಳಿಕ ಇತರ 15 ಜನರ ಹೆಸರು ಮತ್ತು ವಿವರಗಳನ್ನು ಅವರ ಮಾದರಿಗಳನ್ನು ತೆಗೆದುಕೊಂಡಿರಲಿಲ್ಲ. ಬಳಿಕ 15 ಜನರ ಸ್ವಾಬ್ ಟೆಸ್ಟ್ ಎಂದು ಹೇಳಿ ಕೇವಲ ನೀರಿನಲ್ಲಿ ಅದ್ದಿದ ಕಿಟ್ ಮತ್ತು ಖಾಲಿ ಕಿಟ್ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅದರಲ್ಲಿ ಕೆಲವರಿಗೆ ಕೊರೊನಾ ಪಾಸಿಟಿವ್ ಎಂದು ಬಂದಿದೆ. ಮುಖ್ಯವಾಗಿ ಹೇಳುವುದಾದರೆ 15 ಜನರಲ್ಲಿ ಕೆಲವರು ಆ ಹಳ್ಳಿಯಲ್ಲೇ ಇರಲಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಸುಳ್ಳು ಮಾದರಿಯನ್ನು ಹಳ್ಳಿಯ ಜನರಿಗೆ ತಿಳಿಸದೆ ಪ್ರಯೋಗಾಯಲಕ್ಕೆ ಕಳುಹಿಸಿದ ಕಾರಣ ಬ್ಲಾಕ್ ಕಮ್ಯುನಿಟಿ ಮೊಬಿಲೈಸರ್ (ಬಿಸಿಎಂ) ಬಚನ್ ಮುಜಲ್ಡಾನನ್ನು ಸೇವೆಯಿಂದ ವಜಾ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಚ್ಚಿನ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.