ಕೊಲ್ಕತ್ತಾ (ಪಶ್ಚಿಮ ಬಂಗಾಳ): ಇಲ್ಲಿನ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಆತಂಕಕ್ಕೆ ಒಳಗಾಗಿದ್ದ ಹೆಪಟೈಟಿಸಿ-ಬಿ (ಕಾಮಾಲೆ ರೋಗ) ರೋಗಿ ರಕ್ಷಿಸಲು 150 ಕಿ.ಮೀ. ಪ್ರಯಾಣಿಸಿದ ಯುವತಿಯೊಬ್ಬರು ಮನೆ ಬಾಗಿಲಿಗೆ ಔಷಧ ತಲುಪಿಸಿ ರೋಗಿಯ ಜೀವ ಉಳಿಸಿದ್ದಾರೆ.
ರೋಗಿ ಪೂರ್ಣಿಮಾ ಮತ್ತು ಅವರ ಕುಟುಂಬ ಚಂದ್ರಕೋನ ಗ್ರಾಮದಲ್ಲಿ ವಾಸವಿದ್ದಾರೆ. ಲಾಕ್ಡೌನ್ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಖರೀದಿಸಿದ ಔಷಧಗಳು ಕೆಲವು ದಿನಗಳ ಹಿಂದೆ ಖಾಲಿಯಾಗಿದ್ದವು. ಹೀಗಾಗಿ ರೋಗಿಗೆ ಔಷಧಗಳ ಅವಶ್ಯಕತೆ ಹೆಚ್ಚಾಗಿತ್ತು.
ರೋಗಿಯ ಪರಿಸ್ಥಿತಿ ತುಂಬಾ ಗಂಭೀರವಾದ ಬಳಿಕ ಔಷಧ ಖರೀಧಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಿದೆವು. ಅವೆಲ್ಲಾ ವ್ಯರ್ಥವಾದವು. ಬಳಿಕ ನನ್ನ ಸ್ನೇಹಿತನ ಸಹಾಯದಿಂದ ಪಶ್ಚಿಮ ಬಂಗಾಳ ಹ್ಯಾಮ್ ರೇಡಿಯೋ ಕ್ಲಬ್ ಸಂಪರ್ಕಿಸಿದೆ. ಪರಿಸ್ಥಿತಿ ಹೀಗಾಗಿದೆ. ಸಹಾಯ ಮಾಡಲು ಸಾಧ್ಯವೇ ಎಂದು ಕೇಳಿಕೊಳ್ಳಲಾಯಿತು ಎಂದು ರೋಗಿಯ (ಪೂರ್ಣಿಮಾ) ಸಂಬಂಧಿ ಮತ್ತು ನೆರೆಹೊರೆಯವರಾದ ಸೌಮಿತ್ರ ಮೌರ್ ಹೇಳಿದರು.
ಫಾರ್ಮಸಿ ವಿದ್ಯಾರ್ಥಿನಿಯೂ ಆದ ಸೌಮಿತ್ರ, ಡಿಸ್ಪ್ರೊಕ್ಸಿಲ್ ಫ್ಯೂಮರೇಟ್ ಔಷಧ ಅಗತ್ಯಗಳ ಕುರಿತು ಕ್ಲಬ್ನ ಸ್ಥಾಪಕ ಕಾರ್ಯದರ್ಶಿ ಅಂಬರೀಶ್ ನಾಗ್ ಬಿಸ್ವಾನ್ಗೆ ತಿಳಿಸಿದಾಗ ಅವರು, ಔಷಧ ತಲುಪಿಸುವ ಭರವಸೆ ನೀಡಿದರು.
ಹೆಪಟೈಟಿಸ್-ಬಿಯಿಂದ ಬಳಲುತ್ತಿರುವ ರೋಗಿಗೆ ನಿರ್ದಿಷ್ಟ ಔಷಧದ ಅವಶ್ಯಕತೆ ಕುರಿತು ನಮಗೆ ಸೋಮವಾರ ತಿಳಿದು ಬಂತು. ಹೀಗಾಗಿ ಆ ಔಷಧಕ್ಕಾಗಿ ವ್ಯಾಪಕವಾಗಿ ಹುಡುಕಿದೆವು. ಆಗ ಪರಗಣ ಜಿಲ್ಲೆಯ ಸೋನಾರ್‌ಪುರ್ ಲಿವರ್ ಫೌಂಡೇಶನ್‌ನಲ್ಲಿ ಲಭ್ಯವಿದೆ ಎಂಬ ಮಾಹಿತಿ ಲಭ್ಯವಾಯಿತು. ಕೂಡಲೇ ಔಷಧ ಸಂಗ್ರಹಿಸಿ, ಮಂಗಳವಾರ ಸಂಜೆ ರೋಗಿಯ ಮನೆಗೇ ತಲುಪಿಸಲಾಯಿತು ಎಂದು ಪಶ್ಚಿಮ ಬಂಗಾಳ ರೇಡಿಯೋ ಕ್ಲಬ್ನ ಸ್ಥಾಪಕ ಕಾರ್ಯದರ್ಶಿ ಅಂಬರೀಶ್ ನಾಗ್ ಬಿಸ್ವಾನ್ ಹೇಳಿದರು.
ಲಾಕ್ಡೌನ್ ನಡುವೆಯೂ ನಮ್ಮ ಸದಸ್ಯೆ ಸೌಪರ್ಣ ಸೇನ್, ಮಂಗಳವಾರ ಬೆಳಗ್ಗೆ ಲಿವರ್ ಫೌಂಡೇಷನ್ನಿಂದ ಔಷಧ ಸಂಗ್ರಹಿಸಿ, ಪೂರ್ಣಿಮಾ ಮೌರ್ ಅವರ ಮನೆಗೆ ತಲುಪಿಸಲು ಚಂದ್ರಕೋನ ಗ್ರಾಮಕ್ಕೆ ತೆರಳಿ ಔಷದ ತಲುಪಿಸಿದರು ಎಂದು ಅವರು ಹೇಳಿದರು.