ETV Bharat / bharat

ಲಾಕ್​ಡೌನ್​​ನಲ್ಲಿ ಸಿಕ್ಕಿಹಾಕಿಕೊಂಡ ಹೆಂಡ್ತಿ... ಮನನೊಂದು ಆತ್ಮಹತ್ಯೆಗೆ ಶರಣಾದ ಗಂಡ! - ಲಾಕ್​ಡೌನ್​​ನಲ್ಲಿ ಸಿಕ್ಕಿಹಾಕಿಕೊಂಡ ಹೆಂಡ್ತಿ

ಲಾಕ್​ಡೌನ್​ ಸೃಷ್ಠಿ ಮಾಡಿರುವ ಅವಾಂತರಕ್ಕೆ ಎಲ್ಲರೂ ನಲುಗಿ ಹೋಗಿದ್ದಾರೆ. ಇದರ ಮಧ್ಯೆ ತವರು ಮನೆಗೆ ಹೋದ ಹೆಂಡತಿ ಲಾಕ್​ಡೌನ್​ ಹೇರಿದ ಕಾರಣ ಗಂಡನ ಮನೆಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Man commits suicide as he missed wife in lockdown

author img

By

Published : Apr 9, 2020, 12:53 PM IST

ಗೊಂಡಾ(ಯುಪಿ): ಕೊರೊನಾ ವೈರಸ್​​ನಿಂದ ಹೊರಬರಲು ದೇಶಾದ್ಯಂತ ಲಾಕ್​ಡೌನ್​ ನಿಷೇಧ ಹೇರಲಾಗಿದ್ದು, ಇದರಿಂದ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಇದೇ ವಿಚಾರದಲ್ಲಿ ಗಂಡನ ಮನೆಯಿಂದ ತವರು ಮನೆಗೆ ಹೋಗಿ ಸಿಲುಕಿಕೊಂಡಿದ್ದ ಹೆಂಡ್ತಿ ಮರಳಿ ಬರಲಿಲ್ಲ ಎಂಬ ಕಾರಣದಿಂದ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರಪ್ರದೇಶದ ಗೊಂಡಾದಲ್ಲಿ ಈ ಘಟನೆ ನಡೆದಿದೆ.

32 ವರ್ಷದ ರಾಕೇಶ್​ ಸೋನಿ ಮನೆಯಲ್ಲಿನ ಪ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಪೊಲೀಸ್ ಇನ್ಸ್​ಪೆಕ್ಟರ್​ ಮಾಹಿತಿ ನೀಡಿದ್ದಾರೆ. ಸೋನಿ ಹೆಂಡತಿ ಕಳೆದ ಕೆಲ ದಿನಗಳ ಹಿಂದೆ ತವರು ಮನೆಗೆ ಹೋಗಿದ್ದು, ದೇಶದಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ್ದರಿಂದ ವಾಪಸ್ ಬರಲು ಆಗಿಲ್ಲ. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದ್ದು, ಪ್ರಕರಣ ದಾಖಲಾಗಿದೆ.

ಉತ್ತರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಕೋವಿಡ್​-19 ಕೇಸ್​ ಕಂಡು ಬರುತ್ತಿದ್ದು, ಈಗಾಗಲೇ 300ರ ಗಡಿ ದಾಟಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಹೊರಗಡೆ ಬರುವ ಪ್ರತಿಯೊಬ್ಬರು ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯ ಎಂದು ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.