ETV Bharat / bharat

ಮಹಾತ್ಮಾ ಗಾಂಧೀಜಿ ಹಾಗೂ ಮಹಿಳಾಭಿವೃದ್ಧಿ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರು ಭಾಗಿಯಾಗಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಇವರಿಗೆಲ್ಲ ಗಾಂಧೀಜಿಯವರೇ ಸ್ಫೂರ್ತಿಯಾಗಿದ್ದರು. ಇದರಿಂದ ಮಹಿಳೆಯರು ಸಮಾಜದಲ್ಲಿ ಸಕ್ರಿಯರಾಗಿ, ಎಲ್ಲರ ಗೌರವಕ್ಕೆ ಪಾತ್ರರಾರದರು. ಮಹಿಳೆಯರು ಚಳವಳಿಗಳಲ್ಲಿ ಭಾಗಿಯಾದಲ್ಲಿ ಅದು ಯಶಸ್ವಿಯಾಗಲು ಸಾಧ್ಯ ಎಂದು ಬಾಪು ನಂಬಿದ್ದರು. ಕೇವಲ ಆಂದೋಲನದಲ್ಲಿ ಮಾತ್ರವಲ್ಲದೇ, ಮಹಿಳೆಯರನ್ನು ಮಂತ್ರಿಗಳು ಹಾಗೂ ಗವರ್ನರ್​​​​ಗಳನ್ನಾಗಿಯೂ ನೇಮಿಸಲಾಗುತ್ತಿತ್ತು.

gandhi
author img

By

Published : Aug 25, 2019, 5:00 AM IST

"ಮಹಿಳೆಯರನ್ನು ಸಾಮಾಜಿಕ ಹಾಗೂ ರಾಜಕೀಯ ಆಂದೋಲನಗಳಲ್ಲಿ ಭಾಗಿಯಾಗುವಂತೆ ಮಹಾತ್ಮ ಗಾಂಧೀಜಿಯವರು ಅವಕಾಶ ನೀಡಿದ್ದರು. ಇದು ಮಹಿಳೆಯರ ಉನ್ನತಿಗಾಗಿ ಗಾಂಧೀಜಿಯವರ ಮಹತ್ತರ ಕೊಡುಗೆಯಾಗಿದೆ" ಎಂದು ರಾಮಚಂದ್ರ ಗುಹಾ ಹೇಳುತ್ತಾರೆ.

ಹೌದು. ಅಡುಗೆ ಕೋಣೆಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರನ್ನು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದ್ದೇ ಗಾಂಧೀಜಿ.

"ಇಂದು ಜಗತ್ತಿನಾದ್ಯಂತ ಪುರುಷರೇ ರಾಜಕಾರಣವನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ 'ಮಹಿಳೆ' ಎಂಬ ಅಸ್ತ್ರದ ಮೂಲಕ ಆಂಗ್ಲರ ವಿರುದ್ಧ ಗಾಂಧೀಜಿ ಹೋರಾಡಿದ್ದರು." ಎಂದು ರುಚಿರಾ ಗುಪ್ತಾ ಹೇಳುತ್ತಾರೆ.

ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದ ಪ್ರೇರೇಪಕರೇ ಅವರ ತಾಯಿ ಪುತಲಿಬಾಯಿ ಹಾಗೂ ಪತ್ನಿ ಕಸ್ತೂರ ಬಾಯಿ. ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಅಹಿಂಸಾ ಸತ್ಯಾಗ್ರಹದ ಕಾರ್ಯಕರ್ತರಾಗಿ ಹಲವಾರು ಮಹಿಳೆಯರನ್ನು ಗಾಂಧೀಜಿಯವರು ನೇಮಿಸಿದ್ದರು. ಕೇವಲ ಅರ್ಜಿ ಸಲ್ಲಿಸಲು ಸೀಮಿತವಾಗಿದ್ದ ಕಾಂಗ್ರೆಸ್​ ಸಂಘಟನೆಯನ್ನು ಅವರು ಜನಾಂದೋಲನದ ವೇದಿಕೆಯಾಗಿ ರೂಪಿಸಿದ್ದರು. ಆ ಆಂದೋಲನಗಳಲ್ಲಿ ಮಹಿಳೆಯರು ಕೂಡಾ ಭಾಗಿಯಾಗುವಂತೆ ಮಾಡಿದ್ದರು.

gandhi
ಚಳವಳಿಯಲ್ಲಿ ಗಾಂಧೀಜಿಯೊಂದಿಗೆ ಮಹಿಳೆಯರು

ಸಾರ್ವಜನಿಕ ಜೀವನಕ್ಕೆ ಮಹಿಳೆಯರು ಪದಾರ್ಪಣೆ ಮಾಡುವುದರಿಂದ ಎರಡು ಮಹತ್ತರ ಬದಲಾವಣೆಗಳಾದವು. ಮೊದಲನೇಯದಾಗಿ, ಮಹಿಳೆಯರು ಸಮಾಜದಲ್ಲಿ ಸಕ್ರಿಯರಾದರು. ಎರಡನೇಯದಾಗಿ, ಮಹಿಳಾ ಕಾರ್ಯಕರ್ತರೊಂದಿಗೆ ಕೆಲಸ ಮಾಡುವುದರಿಂದ ಪುರುಷರ ಆಲೋಚನಾ ಪ್ರಕ್ರಿಯೆಯಲ್ಲೂ ಗಮನಾರ್ಹ ಬದಲಾವಣೆ ಕಂಡುಬಂತು. ಇದರಿಂದ ಅವರು ಮಹಿಳೆಯರನ್ನು ಸಮಾನವಾಗಿ ಗೌರವಿಸಲು ಪ್ರಾರಂಭಿಸಿದರು.

ದಕ್ಷಿಣ ಆಫ್ರಿಕಾದ ಆಶ್ರಮದಲ್ಲಿ ಮಹಿಳೆಯರನ್ನು ಆಂದೋಲನಗಳಲ್ಲಿ ಭಾಗಿಯಾಗುವಂತೆ ಬಾಪು ಪ್ರೇರೇಪಿಸಿದರು. ಗಣಿ ಕಾರ್ಮಿಕರ ಮುಷ್ಕರದಲ್ಲಿ ಮಹಿಳೆಯರು ಭಾಗಿಯಾದರು. ಭಾರತದ ಚಂಪಾರಣ್​ನಲ್ಲಿ ನಡೆದ ರೈತರ ಆಂದೋಲನದಲ್ಲಿ 25 ಸ್ವಯಂಸೇವಕರ ಪೈಕಿ 12 ಮಹಿಳೆಯರಿದ್ದದ್ದು ಗಮನಾರ್ಹವಾಗಿತ್ತು. ಮಹಿಳೆಯರ ಭಾಗವಹಿಸುವಿಕೆ ಉಪ್ಪಿನ ಸತ್ಯಾಗ್ರಹ, ದಲಿತ ವಿಮೋಚನೆ ಹಾಗೂ ಕ್ವಿಟ್​ ಇಂಡಿಯಾ ಆಂದೋಲನದಲ್ಲಿಯೂ ಮುಂದುವರಿಯಿತು.

1919ರಲ್ಲಿ ಗಾಂಧೀಜಿಯ ನಾಯಕತ್ವದಲ್ಲಿ ನಡೆದ ಅಹಮದಾಬಾದ್ ಟೆಕ್ಸ್​ಟೈಲ್​ ಉದ್ಯಮದ ಕೆಲಸಗಾರರ ಮುಷ್ಕರ ಹಾಗೂ 1921ರಲ್ಲಿ ಅನಸೂಯ ಸಾರಾಭಾಯಿ ನೇತೃತ್ವದಲ್ಲಿ ನಡೆದ ಕಾನೂನು ಅಸಹಕಾರ ಚಳವಳಿಯಲ್ಲಿ ಮಹಿಳೆಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶೇ. 50ರಷ್ಟು ಇರುವ ಮಹಿಳೆಯರು ಚಳವಳಿಗಳಲ್ಲಿ ಭಾಗಿಯಾದಲ್ಲಿ ಅದು ಯಶಸ್ವಿಯಾಗಲು ಸಾಧ್ಯ ಎಂದು ಬಾಪು ನಂಬಿದ್ದರು. ಅಬಲೆಯರು ಸಬಲೆಯರಾಗಬೇಕು, ಚರಕದ ಮೂಲಕ ನೇಯ್ಗೆ ಮಾಡುವ ಕಾರ್ಯದಲ್ಲಿ ಮಹಿಳೆಯರು ತೊಡಗಿಕೊಂಡರೆ ಅವರು ಆರ್ಥಿಕವಾಗಿಯೂ ಸಮರ್ಥರಾಗಲು ಸಾಧ್ಯ ಎಂದು ಬಾಪೂಜಿ ಹೇಳುತ್ತಿದ್ದರು.

1952ರಲ್ಲಿ ಸರೋಜಿನಿ ನಾಯ್ಡು ಅವರನ್ನು ಕಾಂಗ್ರೆಸ್​ನ ಮೊದಲ ಅಧ್ಯಕ್ಷೆಯನ್ನಾಗಿಸುವಲ್ಲಿಯೂ ಗಾಂಧೀಜಿ ಬಹುಮುಖ್ಯ ಪಾತ್ರ ವಹಿಸಿದ್ದರು.

gandhi
ಗಾಂಧೀಜಿ ಹಾಗೂ ಸರೋಜಿನಿ ನಾಯ್ಡು

ಗಾಂಧೀಜಿಯವರ ಹೇಳಿಕೆಯ ಮೇರೆಗೆ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕೋರಿ, ನಿರ್ಣಯವೊಂದನ್ನು ಅಂಗೀಕರಿಸಲಾಯಿತು. ಸ್ವಾತಂತ್ರ್ಯ ಹಾಗೂ ಸಾಮಾಜಿಕ ಆಂದೋಲನಗಳಿಗೂ ಗಾಂಧೀಜಿ ಸಮಾನ ಪ್ರಾಮುಖ್ಯತೆ ನೀಡುತ್ತಾ 1933ರಲ್ಲಿ ಹರಿಜನ ಅಭಿವೃದ್ಧಿ ಯಾತ್ರೆ ಪ್ರಾರಂಭಿಸಿದರು. ಅಸ್ಪೃಶ್ಯರೆಂದು ಪರಿಗಣಿಸಲ್ಪಡುತ್ತಿದ್ದ ದಲಿತರಿಗೆ ಸಮಾನ ಹಕ್ಕುಗಳನ್ನು ನೀಡುವುದು ಈ ಯಾತ್ರೆಯ ಉದ್ದೇಶವಾಗಿತ್ತು.

ಹಲವಾರು ಮಹಿಳೆಯರು ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧಿತರಾಗಿದ್ದರು. 37 ಸ್ವಯಂಸೇವಕರೊಂದಿಗೆ ಕಸ್ತೂರ ಬಾ ಗಾಂಧಿ ಸಾಬರಮತಿಯಿಂದ ಹೊರಟು, ಕಾನೂನು ಉಲ್ಲಂಘಿಸಿ ಉಪ್ಪು ತಯಾರಿಸಿದರು. ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ ಸೇರಿದಂತೆ ಹಲವು ಮಹಿಳೆಯರು ಮುಖ್ಯ ಪಾತ್ರ ವಹಿಸಿದರು. ಖಿಲಾಫತ್​ ಅಸಹಕಾರ ಚಳವಳಿಯಲ್ಲಿ ಮುಸ್ಲಿಂ ಮಹಿಳೆಯರು ಭಾಗವಹಿಸಿದರು. 1942ರಲ್ಲಿ ಗಾಂಧೀಜಿ ಕ್ವಿಟ್​ ಇಂಡಿಯಾ ಆಂದೋಲನಕ್ಕೆ ಕರೆ ಕೊಟ್ಟರು. ಆ ಸಂದರ್ಭದಲ್ಲೂ ಮಹಿಳೆಯರು ಹಿಮ್ಮೆಟ್ಟಲಿಲ್ಲ. ಅರುಣ ಅಸಫ್​ ಅಲಿ ಹಾಗೂ ಉಷಾ ಮೆಹ್ತಾ ಈ ಅಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಿದರು.

gandhi
ಮಹಾತ್ಮ ಗಾಂಧೀಜಿ ಮತ್ತು ಕಸ್ತೂರ ಬಾ ಗಾಂಧಿ

ಕೇವಲ ಆಂದೋಲನದಲ್ಲಿ ಮಾತ್ರವಲ್ಲದೇ, ಮಹಿಳೆಯರನ್ನು ಮಂತ್ರಿಗಳು ಹಾಗೂ ಗವರ್ನರ್​ಗಳನ್ನಾಗಿ ನೇಮಿಸಲಾಗುತ್ತಿತ್ತು. "ಅಸ್ಪೃಶ್ಯತೆ ಹಾಗೂ ಮಹಿಳಾ ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳು ಭಾರತದ ಸಮಾಜವನ್ನು ಬಾಧಿಸುತ್ತಿವೆ. ಪುರುಷ ವಿದ್ಯಾವಂತನಾದರೆ ಆತ ಮಾತ್ರ ವಿದ್ಯೆ ಪಡೆಯುತ್ತಾನೆ. ಆದರೆ, ಮಹಿಳೆಯೊಬ್ಬಳು ವಿದ್ಯಾವಂತೆಯಾದರೆ ಇಡೀ ಕುಟುಂಬ ಹಾಗೂ ಸಮಾಜವೇ ವಿದ್ಯೆ ಪಡೆಯುತ್ತದೆ." ಎಂದು ಬಾಪುಜಿ ಹೇಳುತ್ತಿದ್ದರು.

ಸ್ವಾತಂತ್ರ್ಯ ಚಳವಳಿಗಳು ಲಿಂಗ, ಜಾತಿ ಹಾಗೂ ಧರ್ಮಗಳ ನಡುವಿನ ವ್ಯತ್ಯಾಸವನ್ನು ಒಡೆದುಹಾಕಿದ್ದವು. ಸುತ್ತಮುತ್ತಲಿನ ಜನರ ಮಾತನ್ನೂ ಕೇಳದೆ, ಗಾಂಧೀಜಿಯವರು ಆಭಾ ಗಾಂಧಿಯವರನ್ನು ಧಾರ್ಮಿಕ ಗಲಭೆ ಪೀಡಿತ ಹಳ್ಳಿಯಾದ ನೌ ಕಾಲಿಗೆ ತಮ್ಮ ಪ್ರತಿನಿಧಿಯಾಗಿ ಕಳುಹಿಸಿದ್ದರು. ರಷ್ಯಾ ಹಾಗೂ ಚೀನಾ ಕ್ರಾಂತಿಯಲ್ಲಿ ಭಾಗಿಯಾದ ಮಹಿಳೆಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರು ಭಾಗಿಯಾಗಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಇವರಿಗೆಲ್ಲ ಗಾಂಧೀಜಿಯವರೇ ಸ್ಫೂರ್ತಿಯಾಗಿದ್ದರು. ಗಾಂಧೀಜಿಯ ಸಂಬಂಧಿಕರಾಗಿದ್ದ ಮನು ಗಾಂಧಿ 'ಬಾಪುಜಿ ಈಸ್​ ಮೈ ಮದರ್​' ಎಂಬ ಪುಸ್ತಕ ಬರೆದಿದ್ದಾರೆ. ಇದರಿಂದ ರಾಷ್ಟ್ರೀಯ ಚಳವಳಿಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಮಹಾತ್ಮಾ ಗಾಂಧೀಜಿಯೇ ಸ್ಫೂರ್ತಿ ಎಂದು ತಿಳಿದುಬರುತ್ತದೆ.

Intro:Body:

ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದ ಪ್ರೇರೇಪಕರೇ ಅವರ ತಾಯಿ ಪುತ್ತಳೀಬಾಯಿ ಹಾಗೂ ಪತ್ನಿ ಕಸ್ತೂರ್​ ಬಾಯಿ. ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಅಹಿಂಸಾ ಸತ್ಯಾಗ್ರಹದ ಕಾರ್ಯಕರ್ತರಾಗಿ ಹಲವಾರು ಮಹಿಳೆಯರನ್ನು ಗಾಂಧೀಜಿಯವರು ನೇಮಿಸಿದ್ದರು. ಕೇವಲ ಅರ್ಜಿ ಸಲ್ಲಿಸಲು ಸೀಮಿತವಾಗಿದ್ದ ಕಾಂಗ್ರೆಸ್​ ಸಂಘಟನೆಯನ್ನು ಅವರು ಜನಾಂದೋಲನದ ವೇದಿಕೆಯಾಗಿ ರೂಪಿಸಿದ್ದರು. ಆ ಆಂದೋಲನಗಳಲ್ಲಿ ಮಹಿಳೆಯರು ಕೂಡಾ ಭಾಗಿಯಾಗುವಂತೆ ಮಾಡಿದ್ದರು.

ಸಾರ್ವಜನಿಕ ಜೀವನಕ್ಕೆ ಮಹಿಳೆಯರು ಪದಾರ್ಪಣೆ ಮಾಡುವುದರಿಂದ ಎರಡು ಮಹತ್ತರ ಬದಲಾವಣೆಗಳಾದವು. ಮೊದಲನೆಯದಾಗಿ, ಮಹಿಳೆಯರು ಸಮಾಜದಲ್ಲಿ ಸಕ್ರಿಯರಾದರು. ಎರಡನೆಯದಾಗಿ, ಮಹಿಳಾ ಕಾರ್ಯಕರ್ತರೊಂದಿಗೆ ಕೆಲಸ ಮಾಡುವುದರಿಂದ ಪುರುಷರ ಆಲೋಚನಾ ಪ್ರಕ್ರಿಯೆಯಲ್ಲೂ ಗಮನಾರ್ಹ ಬದಲಾವಣೆ ಕಂಡುಬಂತು. ಇದರಿಂದ ಅವರು ಮಹಿಳೆಯರನ್ನು ಸಮಾನವಾಗಿ ಗೌರವಿಸಲು ಪ್ರಾರಂಭಿಸಿದರು.

ದಕ್ಷಿಣ ಆಫ್ರಿಕಾದ ಆಶ್ರಮದಲ್ಲಿ ಮಹಿಳೆಯರನ್ನು ಆಂದೋಲನಗಳಲ್ಲಿ ಭಾಗಿಯಾಗುವಂತೆ ಬಾಪು ಪ್ರೇರೇಪಿಸಿದರು. ಗಣಿ ಕಾರ್ಮಿಕರ ಮುಷ್ಕರದಲ್ಲಿ ಮಹಿಳೆಯರು ಭಾಗಿಯಾದರು. ಭಾರತದ ಚಂಪಾರಣ್​ನಲ್ಲಿ ನಡೆದ ರೈತರ ಆಂದೋಲನದಲ್ಲಿ 25 ಸ್ವಯಂಸೇವಕರ ಪೈಕಿ 12 ಮಹಿಳೆಯರಿದ್ದದ್ದು ಗಮನಾರ್ಹವಾಗಿತ್ತು. ಮಹಿಳೆಯರ ಭಾಗವಹಿಸುವಿಕೆ ಉಪ್ಪಿನ ಸತ್ಯಾಗ್ರಹ, ದಲಿತ ವಿಮೋಚನೆ ಹಾಗೂ ಕ್ವಿಟ್​ ಇಂಡಿಯಾ ಆಂದೋಲನದಲ್ಲಿಯೂ ಮುಂದುವರಿಯಿತು.

1919ರಲ್ಲಿ ಗಾಂಧೀಜಿಯ ನಾಯಕತ್ವದಲ್ಲಿ ನಡೆದ ಅಹಮದಾಬಾದ್ ಟೆಕ್ಸ್​ಟೈಲ್​ ಉದ್ಯಮದ ಕೆಲಸಗಾರರ ಮುಷ್ಕರ ಹಾಗೂ 1921ರಲ್ಲಿ ಅನಸೂಯ ಸಾರಾಭಾಯಿ ನೇತೃತ್ವದಲ್ಲಿ ನಡೆದ ಕಾನೂನು ಅಸಹಕಾರ ಚಳವಳಿಯಲ್ಲಿ ಮಹಿಳೆಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶೇಕಡಾ 50ರಷ್ಟು ಜನಸಂಖ್ಯೆ ಹೊಂದಿರುವ ಮಹಿಳೆಯರು ಚಳವಳಿಗಳಲ್ಲಿ ಭಾಗಿಯಾದಲ್ಲಿ ಅದು ಯಶಸ್ವಿಯಾಗಲು ಸಾಧ್ಯ ಎಂದು ಬಾಪು ನಂಬಿದ್ದರು. ಅಬಲೆಯರು ಸಬಲೆಯರಾಗಬೇಕು, ಚರಕದ ಮೂಲಕ ನೇಯ್ಗೆ ಮಾಡುವ ಕಾರ್ಯದಲ್ಲಿ ಮಹಿಳೆಯರು ತೊಡಗಿಕೊಂಡರೆ, ಅವರು ಆರ್ಥಿಕವಾಗಿಯೂ ಸಮರ್ಥರಾಗಲು ಸಾಧ್ಯ ಎಂದು ಬಾಪೂಜಿ ಹೇಳುತ್ತಿದ್ದರು. 

1952ರಲ್ಲಿ ಸರೋಜಿನಿ ನಾಯ್ಡು ಅವರನ್ನು ಕಾಂಗ್ರೆಸ್​ನ ಮೊದಲ ಅಧ್ಯಕ್ಷೆಯನ್ನಾಗಿಸುವಲ್ಲಿಯೂ ಗಾಂಧೀಜಿ ಬಹುಮುಖ್ಯ ಪಾತ್ರ ವಹಿಸಿದ್ದರು. 

ಗಾಂಧೀಜಿಯವರ ಹೇಳಿಕೆಯ ಮೇರೆಗೆ, ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕೋರಿ, ನಿರ್ಣಯವೊಂದನ್ನು ಅಂಗೀಕರಿಸಿತು. ಸ್ವಾತಂತ್ರ್ಯ ಹಾಗೂ ಸಾಮಾಜಿಕ ಆಂದೋಲನಗಳಿಗೂ ಗಾಂಧೀಜಿ ಸಮಾನ ಪ್ರಾಮುಖ್ಯತೆ ನೀಡುತ್ತ, 1933ರಲ್ಲಿ ಹರಿಜನ ಅಭಿವೃದ್ಧಿ ಯಾತ್ರೆ ಪ್ರಾರಂಭಿಸಿದರು. ಅಸ್ಪೃಶ್ಯರೆಂದು ಪರಿಗಣಿಸಲ್ಪಡುತ್ತಿದ್ದ ದಲಿತರಿಗೆ ಸಮಾನ ಹಕ್ಕುಗಳನ್ನು ನೀಡುವುದು ಈ ಯಾತ್ರೆಯ ಉದ್ದೇಶವಾಗಿತ್ತು.

ಹಲವಾರು ಮಹಿಳೆಯರು ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧಿತರಾಗಿದ್ದರು. 37 ಸ್ವಯಂಸೇವಕರೊಂದಿಗೆ ಕಸ್ತೂರಾಬಾ ಗಾಂಧಿ ಸಾಬರಮತಿಯಿಂದ ಹೊರಟು, ಕಾನೂನು ಉಲ್ಲಂಘಿಸಿ ಉಪ್ಪು ತಯಾರಿಸಿದರು. ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ ಸೇರಿದಂತೆ ಹಲವು ಮಹಿಳೆಯರು ಮುಖ್ಯ ಪಾತ್ರ ವಹಿಸಿದರು. ಖಿಲಾಫತ್​ ಅಸಹಕಾರ ಚಳವಳಿಯಲ್ಲಿ ಮುಸ್ಲಿಮ್​ ಮಹಿಳೆಯರು ಭಾಗವಹಿಸಿದರು. 1942ರಲ್ಲಿ ಗಾಂಧೀಜಿ ಕ್ವಿಟ್​ ಇಂಡಿಯಾ ಆಂದೋಲನಕ್ಕೆ ಕರೆ ಕೊಟ್ಟರು. ಆ ಸಂದರ್ಭದಲ್ಲೂ ಮಹಿಳೆಯರು ಹಿಮ್ಮೆಟ್ಟಲಿಲ್ಲ. ಅರುಣ ಅಸಫ್​ ಅಲಿ ಹಾಗೂ ಉಷಾ ಮೆಹ್ತಾ ಈ ಅಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಿದರು. 

ಕೇವಲ ಆಂದೋಲನದಲ್ಲಿ ಮಾತ್ರವಲ್ಲದೇ, ಮಹಿಳೆಯರನ್ನು ಮಂತ್ರಿಗಳು ಹಾಗೂ ಗವರ್ನರ್​ಗಳನ್ನಾಗಿ ನೇಮಿಸಲಾಗುತ್ತಿತ್ತು. "ಅಸ್ಪೃಶ್ಯತೆ ಹಾಗೂ ಮಹಿಳಾ ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳು ಭಾರತದ ಸಮಾಜವನ್ನು ಬಾಧಿಸುತ್ತಿದೆ. ಪುರುಷ ವಿದ್ಯಾವಂತನಾದರೆ ಆತ ಮಾತ್ರ ವಿದ್ಯೆ ಪಡೆಯುತ್ತಾನೆ. ಆದರೆ, ಮಹಿಳೆಯೊಬ್ಬಳು ವಿದ್ಯಾವಂತೆಯಾದರೆ, ಇಡೀ ಕುಟುಂಬ ಹಾಗೂ ಸಮಾಜವೇ ವಿದ್ಯೆ ಪಡೆಯುತ್ತದೆ." ಎಂದು ಬಾಪುಜಿ ಹೇಳುತ್ತಿದ್ದರು.

ಸ್ವಾತಂತ್ರ್ಯ ಚಳವಳಿಗಳು ಲಿಂಗ, ಜಾತಿ ಹಾಗೂ ಧರ್ಮಗಳ ನಡುವಿನ ವ್ಯತ್ಯಾಸವನ್ನು ಒಡೆದುಹಾಕಿದ್ದವು. ಸುತ್ತಮುತ್ತಲಿನ ಜನರ ಮಾತನ್ನೂ ಕೇಳದೆ, ಗಾಂಧೀಜಿಯವರು ಆಭಾ ಗಾಂಧಿಯವರನ್ನು ಧಾರ್ಮಿಕ ಗಲಭೆ ಪೀಡಿತ ಹಳ್ಳಿಯಾದ ನೌ ಕಾಲಿಗೆ ತಮ್ಮ ಪ್ರತಿನಿಧಿಯಾಗಿ ಕಳುಹಿಸಿದ್ದರು. ರಷ್ಯಾ ಹಾಗೂ ಚೀನಾ ಕ್ರಾಂತಿಯಲ್ಲಿ ಭಾಗಿಯಾದ ಮಹಿಳೆಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರು ಭಾಗಿಯಾಗಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಇವರಿಗೆಲ್ಲ ಗಾಂಧೀಜಿಯವರೇ ಸ್ಪೂರ್ತಿಯಾಗಿದ್ದರು. ಗಾಂಧೀಜಿಯ ಸಂಬಂಧಿಕರಾಗಿದ್ದ ಮನು ಗಾಂಧೀ 'ಬಾಪುಜಿ ಈಸ್​ ಮೈ ಮದರ್​' ಎಂಬ ಪುಸ್ತಕ ಬರೆದಿದ್ದಾರೆ. ಇದರಿಂದ ರಾಷ್ಟ್ರೀಯ ಚಳವಳಿಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಮಹಾತ್ಮಾ ಗಾಂಧೀಜಿಯೇ ಸ್ಪೂರ್ತಿ ಎಂದು ತಿಳಿದು ಬರುತ್ತದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.