ETV Bharat / bharat

'ಮಹಾ' ಆದೇಶ: ನಾಳೆಯೇ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್​​​ ಕಟ್ಟಪ್ಪಣೆ

ಜಸ್ಟೀಸ್​ ಎನ್​​.ವಿ ರಮಣ್ ನೇತೃತ್ವದ ಪೀಠ ನಾಳೆ ಸಂಜೆ 5 ಗಂಟೆ ಒಳಗೆ ಬಹುಮತ ಸಾಬೀತುಪಡಿಸುವಂತೆ ಸಿಎಂ ದೇವೇಂದ್ರ ​​ಫಡ್ನವೀಸ್​ಗೆ ಸೂಚನೆ ನೀಡಿದೆ. ಬೆಳಗ್ಗೆ ಎಲ್ಲ ಶಾಸಕರು ಪ್ರಮಾಣವಚನ ಸ್ವೀಕರಿಸಿ ನಂತರದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ಒಟ್ಟಾರೆ ಎಲ್ಲ ಪ್ರಕ್ರಿಯೆ ಸಂಜೆ 5 ಗಂಟೆಗೆ ಮುಕ್ತಾಯವಾಗಬೇಕು. ಫಡ್ನವೀಸ್ ಸರ್ಕಾರ ಬಹಿರಂಗವಾಗಿ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿದೆ.

Maharshtra Politics
'ಮಹಾ' ಆದೇಶ
author img

By

Published : Nov 26, 2019, 10:38 AM IST

Updated : Nov 26, 2019, 11:28 AM IST

ನವದೆಹಲಿ: ಮಹಾರಾಷ್ಟ್ರ ಹಾಲಿ ಸರ್ಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ತೀರ್ಪನ್ನುಸುಪ್ರೀಂ ಕೋರ್ಟ್​ ತೀರ್ಪು ಪ್ರಕಟಿಸಿದೆ. ನಾಳೆ ಸಂಜೆ 5 ಗಂಟೆ ಒಳಗೆ ಬಹುಮತ ಸಾಬೀತು ಮಾಡುವಂತೆ ಸಿಎಂ ಫಡ್ನವೀಸ್​​ಗೆ ಸುಪ್ರೀಂಕೋರ್ಟ್​ ಸೂಚಿಸಿದೆ. ಬಹುಮತ ಸಾಬೀತು ಕಲಾಪ ನೇರಪ್ರಸಾರ ಮಾಡಲು ಸುಪ್ರೀಂಕೋರ್ಟ್​ ಸೂಚಿಸಿದೆ.

ಜಸ್ಟೀಸ್ ಎನ್​​.ವಿ.ರಮಣ ನೇತೃತ್ವದ ಪೀಠದಿಂದ ಈ ಮಹತ್ವದ ತೀರ್ಪು ಹೊರ ಬಿದ್ದಿದ್ದು, ಬಹುಮತ ಸಾಬೀತು ಕಲಾಪದ ವೇಳೆ ಯಾವುದೇ ಗುಪ್ತ ಮತದಾನಕ್ಕೆ ಅವಕಾಶ ಇರಕೂಡದು, ಎಲ್ಲವೂ ಬಹಿರಂಗವಾಗಿ ನೇರಪ್ರಸಾರದ ಮೂಲಕವೇ ನಡೆಯಬೇಕು ಎಂದು ಸುಪ್ರೀಂಕೋರ್ಟ್​ ಸೂಚನೆ ನೀಡಿದೆ.

ಸುಪ್ರೀಂ ತೀರ್ಪಿನ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪರ ವಕೀಲ

ಹಂಗಾಮಿ ಸ್ಪೀಕರ್​​​​ ಅವರನ್ನ ನೇಮಕ ಮಾಡಿ ಬೆಳಗ್ಗೆ ಎಲ್ಲ ಶಾಸಕರು ಪ್ರಮಾಣವಚನ ಸ್ವೀಕರಿಸಿ ನಂತರದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಸಂಜೆ 5 ಗಂಟೆ ವೇಳೆಯ ಒಳಗಾಗಿ ಬಹಿರಂಗವಾಗಿ ಬಹುಮತ ಸಾಬೀತು ಪ್ರಕ್ರಿಯೆ ಕೊನೆಗೊಳ್ಳಬೇಕು ಎಂದು ತ್ರಿಸದಸ್ಯಪೀಠ ಆದೇಶಿಸಿದೆ.

ಮಹಾರಾಷ್ಟ್ರ ರಾಜಕೀಯ ಕ್ಷಿಪ್ರ ಸಂಚಲನ ನೀಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡೆಯನ್ನು ಪ್ರಶ್ನಿಸಿ ಶಿವಸೇನೆ-ಎನ್​​ಸಿಪಿ-ಕಾಂಗ್ರೆಸ್ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ. ಭಾನುವಾರ ಸಲ್ಲಿಕೆಯಾದ ರಿಟ್ ಅರ್ಜಿ ಸತತ ಎರಡು ದಿನಗಳ ವಿಚಾರಣೆ ನಡೆದಿದೆ. ಸೋಮವಾರ ವಾದ - ಪ್ರತಿವಾದ ಕೊನೆಗೊಂಡಿತ್ತು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಸಾಕಷ್ಟು ಹೈಡ್ರಾಮಾಗಳು ನಡೆದು ಕೊನೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಇದರ ನಡುವೆ ಶಿವಸೇನೆ-ಎನ್​​ಸಿಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆಗೆ ಬಹುತೇಕ ಎಲ್ಲವನ್ನೂ ಅಂತಿಮಗೊಳಿಸಿದ್ದವು. ಆದರೆ, ಕಳೆದ ಶುಕ್ರವಾರದಿಂದ ಶನಿವಾರ ಮುಂಜಾನೆ ನಡುವೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ಮತ್ತೆ ಸಿಎಂ ಪಟ್ಟ ಅಲಂಕರಿಸಿದ್ದರು. ಎನ್​ಸಿಪಿ ನಾಯಕ ಅಜಿತ್ ಪವಾರ್ ಬೆಂಬಲ ಬಲದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ವಾದ-ಪ್ರತಿವಾದ ಮಂಡಿಸುವ ವಕೀಲರು:

  • ಕಪಿಲ್​ ಸಿಬಲ್ - ಶಿವಸೇನೆ ಪರ
  • ಅಭಿಷೇಕ್ ಮನುಸಿಂಘ್ವಿ - ಕಾಂಗ್ರೆಸ್-ಎನ್​​ಸಿಪಿ ಪರ
  • ಮುಕುಲ್ ರೋಹ್ಟಗಿ - ಮಹಾರಾಷ್ಟ್ರ ಬಿಜೆಪಿ ಪರ
  • ಸಾಲಿಸಿಟರ್ ಜನರಲ್​​ ತುಷಾರ್ ಮೆಹ್ತಾ - ರಾಜ್ಯಪಾಲರ ಕಾರ್ಯದರ್ಶಿ ಪರ
  • ಮಣಿಂದರ್ ಸಿಂಗ್ - ಅಜಿತ್ ಪವಾರ್ ಪರ

ತ್ರಿಸದಸ್ಯ ಪೀಠ:

  • ಜಸ್ಟೀಸ್ ಎನ್​​.ವಿ.ರಮಣ
  • ಅಶೋಕ್ ಭೂಷಣ್
  • ಸಂಜೀವ್ ಖನ್ನಾ

Intro:Body:Conclusion:
Last Updated : Nov 26, 2019, 11:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.