ಮುಂಬೈ: ಮಹಾರಾಷ್ಟ್ರ ಸರ್ಕಾರ ಭೀಮಾ ಕೋರೆಗಾಂವ್ ವಿಚಾರಣಾ ಆಯೋಗದ ಅಧಿಕಾರಾವಧಿಯನ್ನು 2020ರ ಏಪ್ರಿಲ್ 8ರವರೆಗೆ ವಿಸ್ತರಿಸಿದೆ.
ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರದ ತನಿಖೆಗಾಗಿ ಫೆಬ್ರವರಿ 9, 2018 ರಂದು ಆಯೋಗವನ್ನು ರಚಿಸಲಾಗಿತ್ತು. ಇದರ ನ್ಯಾಯಮೂರ್ತಿ (ನಿವೃತ್ತ) ಜೆ ಎನ್ ಪಾಟೀಲ್ ಅವರು ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದ್ರು.
ಭೀಮಾ-ಕೋರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸುವ ಬಗ್ಗೆ ಪುಣೆ ನ್ಯಾಯಾಲಯವು ಕಾಯ್ದಿರಿಸಿದ ತೀರ್ಪನ್ನು ಫೆಬ್ರವರಿ 14ರಂದು ಪ್ರಕಟಿಸುವ ಸಾಧ್ಯತೆಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಫೈಲ್ ಮತ್ತು ಲೇಖನಗಳನ್ನು ಮಹಾ ಸರ್ಕಾರ ನ್ಯಾಯಾಲಯಕ್ಕೆ ಒಪ್ಪಿಸಿದೆ. ಈ ಪ್ರಕರಣವನ್ನು ಮುಂಬೈನ ಏಜೆನ್ಸಿಯ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಎನ್‌ಐಎ ಈ ಹಿಂದೆ ಜನವರಿ 29ರಂದು ಪುಣೆ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಜನವರಿ 1, 2018 ರಂದು ಭೀಮಾ-ಕೋರೆಗಾಂವ್ ಯುದ್ಧದ 200ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಘಟನೆಯಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದರೆ ಇನ್ನೂ ಅನೇಕರು ಗಾಯಗೊಂಡಿದ್ದಾರೆ.