ಥಾಣೆ (ಮಹಾರಾಷ್ಟ್ರ): ಕೋವಿಡ್ ಸೆಂಟರ್ನಲ್ಲಿ ಮಹಿಳೆವೋರ್ವಳ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಆಸ್ಪತ್ರೆಯ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಥಾಣೆಯ ಮೀರಾ ರಸ್ತೆ ಪ್ರದೇಶದಲ್ಲಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಜೂನ್ನಲ್ಲಿ ಘಟನೆ ನಡೆದಿದ್ದು, ಶನಿವಾರ ಆಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯ ಸಂಬಂಧಿಯೊಬ್ಬರು ಕೊರೊನಾ ಸೋಂಕು ದೃಢಪಟ್ಟ ಅವರ ಆರೈಕೆ ಮಾಡಲು ಮಹಿಳೆ ಹಾಗೂ ಆಕೆಯ 10 ವರ್ಷ ಮಗಳು ಸೋಂಕಿತರ ಆರೈಕೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ವೇಳೆ ಬಿಸಿ ನೀರು ಕೊಡುವ ನೆಪದಲ್ಲಿ ಬಂದ ಆಸ್ಪತ್ರೆಯ ಸಹಾಯಕ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಮಗಳನ್ನು ಕೊಲ್ಲುವ ಬೆದರಿಕೆ ಕೂಡಾ ಒಡ್ಡಿದ್ದಾನೆ ಎಂದು ಮಹಿಳೆ ಆರೋಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ ಮೊದಲ ವಾರದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಮೇಲೆ ಮೂರು ಬಾರಿ ಆತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಆರೋಪಿ ಬೆದರಿಕೆವೊಡ್ಡಿದ ಕಾರಣದಿಂದ ಮಹಿಳೆ ದೂರು ನೀಡಲು ಹಿಂಜರಿದಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಈಗ ಸದ್ಯಕ್ಕೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ 376ನೇ ಸೆಕ್ಷನ್ (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.