ETV Bharat / bharat

ಪರೀಕ್ಷೆಗೋಸ್ಕರ ಏಳು ತಿಂಗಳ ಗರ್ಭಿಣಿ ಪತ್ನಿಯನ್ನ ಸ್ಕೂಟರ್​ ಮೇಲೆ 1,150 ಕಿ.ಮೀ ಕರೆದೊಯ್ದ ಗಂಡ!

author img

By

Published : Sep 4, 2020, 7:22 PM IST

Updated : Sep 4, 2020, 7:52 PM IST

ಏಳು ತಿಂಗಳ ಗರ್ಭಿಣಿ ಪತ್ನಿಯನ್ನ ಬರೋಬ್ಬರಿ 1,150 ಕಿಲೋ ಮೀಟರ್​ ಸ್ಕೂಟರ್​ ಮೇಲೆ ಕರೆದುಕೊಂಡು ಹೋಗಿ ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ನಡೆದಿದೆ.

1500 km on a scooter
1500 km on a scooter

ಗ್ವಾಲಿಯರ್​ (ಮಧ್ಯಪ್ರದೇಶ): ಪತಿಯೊಬ್ಬ ಪರೀಕ್ಷೆಗೋಸ್ಕರ ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಜಾರ್ಖಂಡ್​​ನಿಂದ ಗ್ವಾಲಿಯರ್​​ವರೆಗೆ ಬರೋಬ್ಬರಿ 1,150 ಕಿಲೋ ಮೀಟರ್​​ ಸ್ಕೂಟರ್​ ಮೇಲೆ ಕರೆದುಕೊಂಡು ಹೋಗಿ ಸುದ್ದಿಯಾಗಿದ್ದಾನೆ.

ಪರೀಕ್ಷೆಗೋಸ್ಕರ ಸ್ಕೂಟರ್​ ಮೇಲೆ ಬಂದ ದಂಪತಿ

27 ವರ್ಷದ ಧನಂಜಯ ಅಡುಗೆ ಕೆಲಸಗಾರನಾಗಿದ್ದು, ಲಾಕ್​ಡೌನ್​ ಕಾರಣ ಕೆಲಸ ಕಳೆದುಕೊಂಡಿದ್ದಾನೆ. ಈತನ ಪತ್ನಿ 22 ವರ್ಷದ ಸೋನಿ ಹೆಂಬ್ರಮ್​​ ಡಿ.ಎಡ್​​ ಪರೀಕ್ಷೆ ಬರೆಯಲು ದ್ವಿಚಕ್ರ ವಾಹನದಲ್ಲೇ ಪ್ರಯಾಣಿಸಿದ್ದಾರೆ. ಜಾರ್ಖಂಡ್​​ನ ಗೊಡ್ಡ ಜಿಲ್ಲೆಯ ಗಂಟಾತೊಲ ಹಳ್ಳಿಯಿಂದ ಗ್ವಾಲಿಯರ್​​​​ವರೆಗೆ ಇವರು ಸ್ಕೂಟರ್​​ನಲ್ಲಿ ಪ್ರಯಾಣಿಸಿದ್ದಾರೆ. ಆರಂಭದಲ್ಲಿ ಪತ್ನಿ ಸ್ಕೂಟರ್​ ಮೇಲೆ ತೆರಳಲು ನಿರಾಕರಿಸಿದ್ದಾಳೆ ಆದರೆ ಗಂಡನ ಮಾತಿಗೆ ಒಪ್ಪಿಕೊಂಡು ಆತನೊಂದಿಗೆ ತೆರಳಲು ಸಿದ್ಧಗೊಂಡಿದ್ದಾಳೆ. ಆಗಸ್ಟ್​ 28ರಂದು ಹೊರಟ ಇವರು ಮಳೆ, ಬಿಸಿಲು ಲೆಕ್ಕಿಸದೇ ನಾಲ್ಕು ರಾಜ್ಯ ದಾಟಿ ಆಗಸ್ಟ್​ 30ರಂದು ಗ್ವಾಲಿಯರ್​​ ತಲುಪಿದ್ದಾರೆ. ಜತೆಗೆ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುವಲ್ಲಿ ಗಂಡ ಧನಂಜಯ್​​​ ಯಶಸ್ವಿಯಾಗಿದ್ದಾನೆ.

ದೇಶದಲ್ಲಿ ಲಾಕ್​ಡೌನ್​​ ಇರುವ ಕಾರಣ ಮಧ್ಯಪ್ರದೇಶಕ್ಕೆ ತೆರಳಲು ಸದ್ಯ ಬಸ್​ ಹಾಗೂ ರೈಲು ಸಂಚಾರವಿಲ್ಲ. ಹೀಗಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಲು ನಿರ್ಧಾರ ಮಾಡಿದ್ದಾರೆ. ಟ್ಯಾಕ್ಸಿ ಕೇಳಿದಾಗ ಅದಕ್ಕೆ 30 ಸಾವಿರ ರೂ. ಹೇಳಿದ್ದಾರೆ ಎಂದು ಧಂನಜಯ್​ ತಿಳಿಸಿದ್ದಾರೆ. ತಮ್ಮ ಬಳಿ ಇದ್ದ ಆಭರಣ ಅಡವಿಟ್ಟು 10 ಸಾವಿರ ರೂ. ಸಾಲ ಪಡೆದುಕೊಂಡು ಅಲ್ಲಿಗೆ ತೆರಳಲು ಮುಂದಾಗಿದ್ದಾರೆ.

ಇವರ ಪ್ರಯಾಣಕ್ಕಾಗಿ 5 ಸಾವಿರ ರೂ. ಖರ್ಚಾಗಿದ್ದು, ಅವರು ಗ್ವಾಲಿಯರ್​ಗೆ ತಲುಪಿರುವ ಸುದ್ದಿ ತಿಳಿದು ಅಲ್ಲಿನ ಕಲೆಕ್ಟರ್​ ಕೌಶಲೆಂದ್ರ ಇವರ ಸೂಕ್ತ ವ್ಯವಸ್ಥೆ ಕಲ್ಪಿಸಿ ಹಣದ ಸಹಾಯ ಮಾಡಿದ್ದಾರೆ.

Last Updated : Sep 4, 2020, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.