ವಾಷಿಂಗ್ಟನ್: ಅಮೆರಿಕಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಎರಡೂ ದೇಶಗಳ ನಡುವೆ ಹಲವು ಸಂಗತಿಗಳು ನಡೆಯುತ್ತಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಾವು ಭಾರತದೊಂದಿಗೆ ಹಲವು ವಿಭಿನ್ನ ವಿಚಾರಗಳ ಬಗ್ಗೆ ವ್ಯವಹರಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನನ್ನ ಅತ್ಯುತ್ತಮ ಗೆಳೆಯ. ಇದನ್ನು ನೀವು ಹೋಸ್ಟನ್ನಲ್ಲಿ ಕಂಡಿರಬಹುದು. ಇನ್ನು ಭಾರತ ಹಾಗೂ ಅಮೆರಿಕಾ ನಡುವೆ ಹಲವು ವಿಚಾರಗಳು ನಡೆಯಲಿದೆ ಎಂದು ಭಾರತದೊಂದಿಗಿನ ವ್ಯಾಪಾರ-ವ್ಯವಹಾರದ ಅಭಿವೃದ್ಧಿ ಬಗೆಗೆ ಮಾಧ್ಯಮದವರ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ.
-
US President Donald Trump: Prime Minister Modi is a very good friend of mine, you saw me in Houston at the event (Howdy Modi). We have a lot of things happening with India, we have a very good relationship with India. He wants me to go there. I'll be going,at some point,to India. pic.twitter.com/etOB1kd0nJ
— ANI (@ANI) November 8, 2019 " class="align-text-top noRightClick twitterSection" data="
">US President Donald Trump: Prime Minister Modi is a very good friend of mine, you saw me in Houston at the event (Howdy Modi). We have a lot of things happening with India, we have a very good relationship with India. He wants me to go there. I'll be going,at some point,to India. pic.twitter.com/etOB1kd0nJ
— ANI (@ANI) November 8, 2019US President Donald Trump: Prime Minister Modi is a very good friend of mine, you saw me in Houston at the event (Howdy Modi). We have a lot of things happening with India, we have a very good relationship with India. He wants me to go there. I'll be going,at some point,to India. pic.twitter.com/etOB1kd0nJ
— ANI (@ANI) November 8, 2019
ಮೋದಿ ನನ್ನನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಒಂದು ಹಂತದಲ್ಲಿ ನಾನು ಭಾರತಕ್ಕೆ ಹೋಗುತ್ತೇನೆ ಎನ್ನುವ ಮೂಲಕ ಭಾರತಕ್ಕೆ ಭೇಟಿ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಾಗೆ ತೆರಳಿದ್ದ ಮೋದಿ, ಹೋಸ್ಟನ್ನಲ್ಲಿ ಟ್ರಂಪ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು. ಇದು ಅಮೆರಿಕಾ ಹಾಗೂ ಭಾರತದ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.