ಮುಂಬೈ: ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕ ಆಟಗಾರ ಸೂರ್ಯಕುಮಾರ್ ಯಾದವ್ ಈ ಬಾರಿ ಆಸ್ಟ್ರೆಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗದಿರುವುದಕ್ಕೆ ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಬೇಸರ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ವೈಟ್-ಬಾಲ್ನ ಚುಟುಕು ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದರೆ, ಟೀಂ ಇಂಡಿಯಾಗೆ ಇನ್ನಷ್ಟು ಬಲ ಬರುತ್ತಿತ್ತು ಎಂದು ಲಾರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
30ರ ಹರೆಯದ ಸೂರ್ಯಕುಮಾರ್ಗೆ ಅತ್ಯುತ್ತಮ ಬ್ಯಾಟ್ಸ್ಮನ್ಗೆ ಬೇಕಾದ ಎಲ್ಲಾ ಅರ್ಹತೆಗಳೂ ಇವೆ. ಆತ ತಂಡಕ್ಕೆ ಅರ್ಹನು ಎಂದು ಲಾರಾ ಹೇಳಿದ್ದಾರೆ.
ಇತ್ತೀಚೆಗೆ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 145+ ಸ್ಟ್ರೈಕ್ ರೇಟ್‌ನಲ್ಲಿ 480 ರನ್ ಬಾರಿ ಬಾರಿಸಿ ಗಮನ ಸೆಳೆದಿದ್ದರು.
ಮೂರನೇ ಕ್ರಮಾಂಕ ಬ್ಯಾಟ್ಸ್‌ಮನ್ ಮೇಲೆ ಎಲ್ಲಾ ತಂಡಗಳು ನಂಬಿಕೆಯಿಟ್ಟಿರುತ್ತವೆ. ಮುಂಬೈ ಇಂಡಿಯನ್ಸ್ ಪರ ಅಷ್ಟೆಲ್ಲಾ ಸ್ಥಿರ ಪ್ರದರ್ಶನ ತೋರಿದರೂ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಯಾಕೆ ಆಯ್ಕೆಯಾಗದಿರುವುದು ಸಚ್ಚರಿ ತಂದಿದೆ.
ಒತ್ತಡದ ಸಂದರ್ಭದಲ್ಲೂ ಲೀಲಾಜಾಲವಾಗಿ ಬ್ಯಾಟಿಂಗ್ ನಡೆಸುವ ಕಲೆ ಸೂರ್ಯಕುಮಾರ್ ಯಾದವ್‌ಗೆ ಸಿದ್ದಿಸಿದೆ. ಐಪಿಎಲ್ ಟೂರ್ನಿಯಲ್ಲಿ ಅವರ ಬ್ಯಾಟಿಂಗ್ ಬಲದಿಂದಲೇ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಫಾರ್ಮ್ನಲ್ಲಿತ್ತು. ಅವನೊಬ್ಬ ಕ್ಲಾಸ್ ಪ್ಲೇಯರ್.
ನಾನು ತಂಡಕ್ಕೆ ರನ್ ತಂದುಕೊಡಬಲ್ಲ ಆಟಗಾರರನ್ನು ಮಾತ್ರ ಗಮನಿಸುವುದಿಲ್ಲ. ತಂತ್ರಗಾರಿಗೆ ಮತ್ತು ಒತ್ತಡದಲ್ಲಿ ತಂಡವನ್ನು ಹೇಗೆ ಹೊರತರುತ್ತಾರೆ ಎಂಬುದನ್ನು ಗಮನಿಸುತ್ತಿರುತ್ತೇನೆ. ಈ ಕಲೆ ಸೂರ್ಯಕುಮಾರ್ ಯಾದವ್‌ಗೆ ಸಿದ್ದಿಸಿದೆ.
ಅವರ ಅತ್ಯದ್ಭುತ ಬ್ಯಾಟಿಂಗ್ ಅನ್ನು ಸಹ ನಾನು ನೋಡಿದ್ದೇನೆ. ಆದರೆ, ಆಸ್ಟ್ರೆಲಿಯಾ ವಿರುದ್ಧ ಸರಣಿಗೆ ಆಯ್ಕೆಯಾಗದಿರುವುದು ನನಗೂ ಅಚ್ಚರಿ ತಂದಿದೆ ಎಂದು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
30ರ ಹರೆಯದ ಸೂರ್ಯಕುಮಾರ್ನನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗಿಡಲು ಕಾರಣವನ್ನು ಲಾರಾ ಕೊಟ್ಟಿದ್ದಾರೆ.