ಬುಲ್ಖಾನಾ (ಮಹಾರಾಷ್ಟ್ರ) : ಜಿಲ್ಲೆಯ ಲೋನಾರ್ ಕುಳಿ ಸರೋವರದ ನೀರು ಕೆಂಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದೆ.
ನೀರಿನ ಬಣ್ಣ ಬದಲಾಗಲು ಕಾರಣ ತಿಳಿದು ಬಂದಿಲ್ಲ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ 2-3 ದಿನಗಳಲ್ಲಿ ಸರೋವರದ ನೀರಿನ ಬಣ್ಣ ಬದಲಾಗಿದೆ. ವಿಶ್ಲೇಷಣೆಗಾಗಿ ನೀರಿನ ಮಾದರಿ ಸಂಗ್ರಹಿಸಲು ಮತ್ತು ಬಣ್ಣ ಬದಲಾವಣೆಯ ಕಾರಣ ಕಂಡುಹಿಡಿಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಲೋನಾರ್ ತಹಶೀಲ್ದಾರ್ ಸೈಫಾನ್ ನಡಾಫ್ ತಿಳಿಸಿದ್ದಾರೆ.