ETV Bharat / bharat

ಸಂಸತ್​​ನಲ್ಲಿ ಆರ್ಥಿಕ​ ದಿವಾಳಿ ತಡೆ ವಿಧೇಯಕ ಮಂಡನೆ... ಹೊಸ ನೀತಿ ಜಾರಿಗೊಳಿಸಲು ನಿರ್ಧಾರ! - ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​

ಬ್ಯಾಂಕಗಳ ದಿವಾಳಿತನ ಹಾಗೂ ಅದಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆ ತರಲು ವಿಧೇಯಕ ಮಂಡನೆಗೆ ನಿರ್ಧರಿಸಿದ್ದಾರೆ.

lok-sabha-budget-session
lok-sabha-budget-session
author img

By

Published : Mar 6, 2020, 10:38 AM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ದಿವಾಳಿತನ ಹಾಗೂ ಬ್ಯಾಂಕ್​​​ಕ್ರಪ್ಟ್ಸಿ ಕೋಡ್​​ ವಿಧೇಯಕ 2019 ನ್ನು ಮಂಡಿಸಿ ಸಂಸತ್​​ನಲ್ಲಿ ಅನುಮೋದನೆ ಪಡೆಯಲಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಬ್ಯಾಂಕಗಳ ದಿವಾಳಿತನ ಹಾಗೂ ಅದಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆ ತರಲು ವಿಧೇಯಕ ಮಂಡನೆಗೆ ನಿರ್ಧರಿಸಿ Insolvency and Bankruptcy Code (IBC) 2016ರ ನಿಯಮಗಳನ್ನ ರೂಪಿಸಿ ಪ್ರಚಾರ ಪಡೆಸಲು ಸುಗ್ರೀವಾಜ್ಞೆ ಹೊರಡಿಸಿತ್ತು.

ಐಬಿಸಿ 2016 ಕ್ಕೆ ಕೆಲ ತಿದ್ದುಪಡಿಗಳನ್ನ ಮಾಡಿ ದಿವಾಳಿತನ ಹಾಗೂ ಈ ಸಂಬಂಧದ ಕೆಲ ನಿಯಮಗಳನ್ನ ಜಾರಿಗೆ ತರಲು ಹೊಸ ನೀತಿಗಳನ್ನ ಅಳವಡಿಸಿಲು ಈ ವಿಧೇಯಕ ಮಂಡನೆ ಮಾಡಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕ್ರಮವು ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮತ್ತು ಸುಲಭ ವ್ಯವಹಾರಗಳನ್ನ ಉತ್ತೇಜಿಸುವ ಉದ್ದೇಶ ಹಾಗೂ ಗುರಿಯನ್ನ ಹೊಂದಿದೆ.

ತೊಂದರೆಗೊಳಗಾಗಿರುವ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನ ಹೊಗಲಾಡಿಸಿ ಸೋರಿಕೆ ಹಾಗೂ ದಿವಾಳಿತನ ತಪ್ಪಿಸಿ ಆರ್ಥಿಕ ಭದ್ರತೆ ನೀಡುವ ಗುರಿಯನ್ನ ಈ ಹೊಸ ವಿಧೇಯಕದಲ್ಲಿ ಅಳವಡಿಸಲಾಗಿದೆ. ಈ ಮೂಲಕ ಆರ್ಥಿಕ ರಂಗದಲ್ಲಿನ ಅನಿಶ್ಚಿತತೆ ಹೋಗಲಾಡಿಸಿ ಹೂಡಿಕೆಯನ್ನ ಉತ್ತೇಜನಗೊಳಿಸುವ ಗುರಿ ಹೊಂದಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.