ನವದೆಹಲಿ: ದೇಶದಲ್ಲಿ ಹೇರಲಾಗಿರುವ 2ನೇ ಹಂತದ ಲಾಕ್ಡೌನ್ ಮೇ 3ಕ್ಕೆ ಮುಕ್ತಾಯಗೊಳ್ಳಲಿದ್ದು, ತದನಂತರ ದೇಶದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸುವುದಾಗಿ ಕೇಂದ್ರ ಗೃಹ ಇಲಾಖೆ ಟ್ವೀಟ್ ಮೂಲಕ ಮಾಹಿತಿ ಬಿತ್ತರಿಸಿದೆ.
ಇದೇ ವೇಳೆ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಗಣನೀಯ ಪ್ರಮಾಣದಲ್ಲಿ ಸಡಿಲಗೊಳಿಸುವುದಾಗಿ ತಿಳಿಸಿದ್ದು, ಕೊರೊನಾ ಸೋಂಕು ಇಲ್ಲದ ಜಿಲ್ಲೆಗಳಲ್ಲಿನ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
-
New guidelines to fight #COVID19 will come into effect from 4th May, which shall give considerable relaxations to many districts. Details regarding this shall be communicated in the days to come.#Corona Update#StayHomeStaySafe @PMOIndia @HMOIndia @MoHFW_INDIA
— Spokesperson, Ministry of Home Affairs (@PIBHomeAffairs) April 29, 2020 " class="align-text-top noRightClick twitterSection" data="
">New guidelines to fight #COVID19 will come into effect from 4th May, which shall give considerable relaxations to many districts. Details regarding this shall be communicated in the days to come.#Corona Update#StayHomeStaySafe @PMOIndia @HMOIndia @MoHFW_INDIA
— Spokesperson, Ministry of Home Affairs (@PIBHomeAffairs) April 29, 2020New guidelines to fight #COVID19 will come into effect from 4th May, which shall give considerable relaxations to many districts. Details regarding this shall be communicated in the days to come.#Corona Update#StayHomeStaySafe @PMOIndia @HMOIndia @MoHFW_INDIA
— Spokesperson, Ministry of Home Affairs (@PIBHomeAffairs) April 29, 2020
ಈಗಾಗಲೇ ವಿವಿಧ ರಾಜ್ಯಗಳಲ್ಲಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ತಮ್ಮ ತಮ್ಮ ಊರಿಗೆ ತೆರಳಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
ಕೆಲವೊಂದು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ತಗ್ಗದ ಕಾರಣ ಮೇ.3ರ ಬಳಿಕವೂ ನಿರ್ಬಂಧ ವಿಸ್ತರಣೆಗೊಳ್ಳುವುದು ಬಹುತೇಕ ಖಚಿತವಾಗುತ್ತಿದೆ. ಇನ್ನು, ಕಡಿಮೆ ಪ್ರಕರಣಗಳಿರುವ ರಾಜ್ಯಗಳಲ್ಲಿ ಹೊಸ ಮಾರ್ಗಸೂಚಿ ಹಾಗೂ ಯಾವುದೇ ಪ್ರಕರಣಗಳಿಲ್ಲದ ಜಿಲ್ಲೆಗಳು ಲಾಕ್ಡೌನ್ ಮುಕ್ತವಾಗುವ ಸಾಧ್ಯತೆ ದಟ್ಟವಾಗಿದೆ.
ಲಾಕ್ಡೌನ್ ವೇಳೆ ಕೆಂಪು ವಲಯ, ಹಸಿರು ವಲಯ ಹಾಗೂ ಕಿತ್ತಾಳೆ ವಲಯಗಳೆಂದು ವಿಭಾಗಿಸಲಾಗಿದೆ. ಆರಂಭದಲ್ಲಿದ್ದ 170 ಕೆಂಪು ವಲಯಗಳ ಸಂಖ್ಯೆ ಇದೀಗ 129ಕ್ಕೆ ಇಳಿಕೆಯಾಗಿದೆ.
ಪಂಜಾಬ್ನಲ್ಲಿ ಮೇ 17, ತೆಲಂಗಾಣದಲ್ಲಿ ಮೇ 7ರವರೆಗೆ ಲಾಕ್ಡೌನ್ ವಿಸ್ತರಣೆಗೊಂಡಿದೆ.