ETV Bharat / bharat

ಲಾಕ್​ಡೌನ್​ ಮುಂದುವರಿಸುವ ಸುಳಿವು ನೀಡಿದ ನಮೋ: ಏ.11ಕ್ಕೆ ಅಂತಿಮ ನಿರ್ಧಾರ - ಲಾಕ್​ಡೌನ್​ ಓಪನ್​ ಅಸಾಧ್ಯ

ವಿವಿಧ ಪಕ್ಷದ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ ನಡೆಸಿದ್ದು, ಈ ವೇಳೆ, ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ದೇಶದಲ್ಲಿ ತಕ್ಷಣವೇ ಲಾಕ್​ಡೌನ್​ ಓಪನ್​ ಮಾಡಲು ಸಾಧ್ಯವಿಲ್ಲ ಎಂಬ ಸುಳಿವು ಹರಿಬಿಟ್ಟಿದ್ದಾರೆ.

Lockdown May Have to be Extended: PM Modi

author img

By

Published : Apr 8, 2020, 3:29 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ಪಕ್ಷದ ನಾಯಕರೊಂದಿಗೆ ಸರ್ವಪಕ್ಷ ಸಭೆ ನಡೆಸಿದ್ದು, ಈ ವೇಳೆ ಏಪ್ರಿಲ್​ 14ಕ್ಕೆ ತಕ್ಷಣವೇ ಲಾಕ್​ಡೌನ್​ ಓಪನ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಓ ಮೂಲಕ ಲಾಕ್​ಡೌನ್​ ದೇಶದಲ್ಲಿ ಮತ್ತಷ್ಟು ದಿನ ಮುಂದುವರಿಸುವ ಸುಳಿವು ನೀಡಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್​-19 ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಮತ್ತಷ್ಟು ದಿನ ಲಾಕ್​ಡೌನ್​ ಮುಂದೂಡಿಕೆ ಮಾಡುವ ಇಂಗಿತ ಅವರು ಹೊರಹಾಕಿದ್ದಾರೆ. ವಿಪಕ್ಷ ನಾಯಕರ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ವಾರ ಎಲ್ಲ ಪ್ರಕರಣ ಪತ್ತೆ ಹಚ್ಚುವುದು ನಮ್ಮ ಮುಖ್ಯ ಕರ್ತವ್ಯವಾಗಿದ್ದು, ಹೀಗಾಗಿ ತಕ್ಷಣವೇ ಲಾಕ್​ಡೌನ್​ ಓಪನ್​ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸೋಂಕು ಹರಡುವಿಕೆ ಕಡಿಮೆಯಾದರೆ ಲಾಕ್​ಡೌನ್​ ಓಪನ್​ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿರುವ ನಮೋ, ಏಪ್ರಿಲ್​ 11ರಂದು ಇದರ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. ಎಲ್ಲ ರಾಜ್ಯದೊಂದಿಗೆ ಮೋದಿ ಏಪ್ರಿಲ್​ 11ರಂದು ವಿಡಿಯೋ ಸಂವಾದ ನಡೆಸಲಿದ್ದು, ಇದಾದ ಬಳಿಕ ಮಹತ್ವದ ನಿರ್ಧಾರ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.