ETV Bharat / bharat

ಚೀನಾದಲ್ಲಿ ಲಾಕ್​​ಡೌನ್ ಸಡಿಲ: ಕೊರೊನಾ ವೈರಸ್ 2ನೇ ಅಲೆಯ ಆತಂಕದಲ್ಲಿ ವಿಜ್ಞಾನಿಗಳು - second wave of anxiety Coronavirus

ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾದ ವುಹಾನ್ ಪಟ್ಟಣ ಇರುವ ಹುಬೇ ಪ್ರಾಂತ್ಯದ ಬಹುತೇಕ ಕಡೆಗಳಲ್ಲಿ. ಸರ್ಕಾರವು ವಿಧಿಸಿದ್ದ ಸಾರಿಗೆ ಸಂಪರ್ಕದ ಮೇಲಿನ ನಿರ್ಬಂಧವನ್ನು ಮಾರ್ಚ್ 23ರಂದು ಸಡಿಲಗೊಳಿಸಿದೆ. ಜನರು ವುಹಾನ್​​ನಿಂದ ಬೇರೆ ಕಡೆ ತೆರಳುವಂತಿಲ್ಲ ಎಂದು ಆದೇಶ ನೀಡಿ ವಿಧಿಸಿದ್ದ ಕೊನೇ ನಿರ್ಬಂಧದ ವಾಯಿದೆ ಏಪ್ರಿಲ್ 8ರಂದು ಕೊನೆಗೊಳ್ಳಲಿದೆ. ಚೀನಾದಲ್ಲಿ ಈ ಬಗೆಯಲ್ಲಿ ಲಾಕ್​​ಡೌನ್ ಸಡಿಲಗೊಳಿಸಿರುವ ಸಂಗತಿ ಹೊಸ ಕೊರೊನಾ ಪ್ರಕರಣಗಳಿಗೆ ದಾರಿ ಮಾಡಿಕೊಡಬಹುದು ಎಂಬ ಆತಂಕವನ್ನು ಹಲವಾರು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ಲಾಕ್​​ಡೌನ್ ಸಡಿಲ
ಚೀನಾದಲ್ಲಿ ಲಾಕ್​​ಡೌನ್ ಸಡಿಲ
author img

By

Published : Apr 2, 2020, 7:08 PM IST

ಹೈದರಾಬಾದ್: ಕೊರೊನಾ ವೈರಸ್​​ನ ಕೇಂದ್ರ ಸ್ಥಾನವಾಗಿದ್ದ ವುಹಾನ್​​ನಲ್ಲಿ ಸೋಂಕಿನ ಬಾಧೆಯನ್ನು ಕಡಿಮೆ ಮಾಡಿಕೊಂಡ ಚೀನಾ ಇದೀಗ 9 ವಾರಗಳ ನಂತರ ಹುಬೇ ಪ್ರಾಂತ್ಯದಿಂದ ಜನರಿಗೆ ಹೊರ ಹೋಗಲು ಮತ್ತು ಒಳಬರಲು ವಿಧಿಸಿದ್ದ ಎಲ್ಲಾ ಸಾರಿಗೆ ನಿರ್ಬಂಧಗಳನ್ನು ರದ್ದುಪಡಿಸಿದೆ. ಸೆಂಟ್ರಲ್ ಹುಬೇ ಪ್ರಾಂತ್ಯದಲ್ಲಿ 56 ದಶಲಕ್ಷಕ್ಕಿಂತಲೂ ಹೆಚ್ಚು ಜನರ ಮೇಲೆ ಮೂರು ತಿಂಗಳ ಕಾಲ ವಿಧಿಸಿದ್ದ ಲಾಕ್​​ಡೌನನ್ನು ರದ್ದುಪಡಿಸಲು ಚೀನಾ ನಿರ್ಧರಿಸಿದೆ. ಒಂದೊಮ್ಮೆ ಚೀನಾ ಈ ರೀತಿಯಲ್ಲಿ ನಿರ್ಬಂಧ ಸಡಿಲಿಸಿದರೆ ಹೊಸ ಕೊರೊನಾ ಪ್ರಕರಣಗಳೇನಾದರೂ ಬರುತ್ತವೆಯೇ ಎಂಬ ಗುಮಾನಿ ಆತಂಕದಿಂದ ವಿಜ್ಞಾನಿಗಳು ಮತ್ತು ಇತರೆಲ್ಲಾ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಚೀನಾದಲ್ಲಿ ಬಹಳ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇದುವರೆಗೂ ಈ ಆತಂಕಗಳಿಗೆ ಯಾವುದೇ ಆಧಾರ ಸಿಕ್ಕಿಲ್ಲ.

“ಲಾಕ್ ಡೌನ್​​ನನ್ನು ಸಡಿಲಗೊಳಿಸಲು ಇದು ಸರಿಯಾದ ಸಮಯ ಎನಿಸುತ್ತದೆ. ಆದರೆ ಇದೇ ವೇಳೆಗೆ ನಾವು ಎರಡನೆಯ ಸುತ್ತಿನ ಸೋಂಕಿನ ಕುರಿತು ಸಹ ಮುಂಜಾಗ್ರತೆ ವಹಿಸಬೇಕಾಗುತ್ತದೆ ಎನ್ನುತ್ತಾರೆ ಹಾಂಗ್ ಕಾಂಗ್ ವಿವಿಯ ಎಪಿಡರ್ಮಾಲಜಿಸ್ಟ್ ಬೆನ್ ಕೌಲಿಂಗ್. ವುಹಾನ್ ಪಟ್ಟಣದಲ್ಲಿ ಕೊರೊನಾ ಸೋಂಕು ಆತಂಕಕಾರಿ ಮಟ್ಟದಲ್ಲಿ ಹರಡಿದಾಗ ಇಡೀ ಪಟ್ಟಣವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು. ಚೀನಾವು ಈ ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ತನ್ನ ಗಡಿಯ ಒಳಗೆ ಪ್ರಯಾಣ ಮಾಡುವುದನ್ನು ನಿರ್ಬಂಧಿಸಿ ಬಹುತೇಕ ಉದ್ಯಮಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಬಾಗಿಲು ಹಾಕುವಂತೆ ಮಾಡಿತು, ತನ್ನ ಜನರಿಗೆ ಮನೆಯಲ್ಲೇ ಇರಲು ತಿಳಿಸಿತು.

ಈಗ ಚೀನಾ ಲಾಕ್ ಡೌನ್ ಸಡಿಲಗೊಳಿಸುತ್ತಿದ್ದರೂ ಅದು ವ್ಯಾಪಕ ರೀತಿಯ ವೈದ್ಯಕೀಯ ತಪಾಸಣೆಗಳನ್ನು ಕೈಗೊಳ್ಳುತ್ತಿದೆಯಲ್ಲದೇ ಸೋಂಕಿತರು ಸಂಪರ್ಕಸಿರುವವರ ಜಾಡು ಹಿಡಿದು ಗುರುತಿಸಿ ಸೂಕ್ತ ಜಾಗೃತೆ ವಹಿಸಿ ಮತ್ತೆ ಕೊರೊನಾ ವೈರಸ್ ಹರಡಂತೆ ನೋಡಿಕೊಳ‍್ಳುತ್ತಿದೆ. ಜನರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಮಾಡುತ್ತಿದೆ.

ಹೊಸ ಕೊರೊನಾ ಪ್ರಕರಣಗಳು ದೇಶಕ್ಕೆ ಆಮದಾಗದ ರೀತಿಯಲ್ಲಿ ಚೀನಾ ತನ್ನ ಗಡಿಗಳನ್ನು ಬಂದೋಬಸ್ತ್ ಮಾಡಿಕೊಂಡಿದೆ. ಹೊರ ದೇಶದಲ್ಲಿದ್ದು ತಮ್ಮ ದೇಶಕ್ಕೆ ಮರಳುತ್ತಿರುವ ಚೀನಾ ಪ್ರಜೆಗಳನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್​​​ನಲ್ಲಿ ಇಡಲಾಗುತ್ತಿದೆ. ಚೀನಾ ತಾನು ಅನುಸರಿಸಿದ ಆಕ್ರಮಣಕಾರಿ ನೀತಿಯಿಂದಾಗಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಅಂತರ ಕಾಯುವ ಕ್ರಮಗಳು, ತೀವ್ರತರದ ವೈದ್ಯಕೀಯ ತಪಾಸಣೆ ಮತ್ತು ಸೋಂಕಿತ ಜನರನ್ನು ಪ್ರತ್ಯೇಕಗೊಳಿಸುವುದು ಇವೆಲ್ಲವೂ ಸೋಂಕು ಮತ್ತಷ್ಟು ಹರಡುವುದನ್ನು ಹತೋಟಿಗೆ ತಂದವು.

ಇಟಲಿ ಮತ್ತು ಸ್ಪೇನ್ ದೇಶಗಳು ಕೇವಲ ಸಾಮಾಜಿಕ ಅಂತರದ ಮೇಲಷ್ಟೇ ಗಮನ ನೀಡಿ ವೈರಸ್ ಹರಡುವಿಕೆಯನ್ನು ನಿಧಾನಗೊಳಿಸುವುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿವೆ. ಆದರೆ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಬೇಕಾದ ತೀವ್ರತರದ ಪರೀಕ್ಷೆ, ತಪಾಸಣೆ ಮತ್ತು ಸಂಪರ್ಕಗಳ ಜಾಡು​ಹಿಡಿದು ಗುರುತಿಸಲು ಗಮನ ನೀಡದೇ ಹೋದ ಕಾರಣ ಆ ದೇಶಗಳ ಜನರು ಸಹಜ ಸ್ಥಿತಿಗೆ ಮರಳಲು ಬಹಳ ಕಷ್ಟವೇ ಆಗಬಹುದು ಎನ್ನುತ್ತಾರೆ ಕೌಲಿಂಗ್.

ಇಷ್ಟಾಗಿಯೂ ಚೀನಾದಲ್ಲಿ ಹೊಸ ಸುತ್ತಿನ ಸೋಂಕು ಹರಡುವ ಸಾಧ್ಯತೆಯೂ ಬಹಳ ಇದೆ. ಯಾಕೆಂದರೆ ಈ ವೈರಸ್​ ಬಹಳ ಸಾಂಗವಾಗಿ ಜನರಿಂದ ಜನರಿಗೆ ಹರಡುತ್ತದಲ್ಲದೇ ಕೆಲವು ಸೋಂಕುಗಳು ಪತ್ತೆಯೇ ಆಗಿರುವುದಿಲ್ಲ ಎಂಬುದು ಹಾಂಕಾಂಗ ವಿವಿಯ ಸೋಂಕು ರೋಗ ವಿಭಾಗದ ಸಂಶೋಧಕರಾದ ಗೇಬ್ರಿಯೆಲ್ ಲೀಯುಂಗ್ ಅವರ ಅಭಿಮತ. ಒಂದು ಸಲದ ಲಾಕ್ ಡೌನ್ ಸಾಲದೆಯೂ ಹೋಗಬಹುದು. ವೈರಸ್​​ ಹತ್ತಿಕ್ಕಲು ತೀವ್ರ ಪ್ರಯತ್ನಗಳು ಮತ್ತೆ ಮತ್ತೆ ನಡೆಯಬೇಕಾಗಬಹುದು ಎನ್ನುತ್ತಾರೆ ಅವರು.

ಆರೋಗ್ಯ, ಆರ್ಥಿಕತೆಯ ರಕ್ಷಣೆ ಮತ್ತು ಭಾವನಾತ್ಮಕ ಆರೋಗ್ಯಗಳಲ್ಲಿ ಎದುರಾಗುವ ಆತಂಕಗಳು ಸಧ್ಯದ ಭವಿಷ್ಯದಲ್ಲಿ ಪ್ರತಿಯೊಂದು ಸರ್ಕಾರಕ್ಕೂ ತಲೆನೋವಾಗಿ ಕಾಡಲಿವೆ. ಚೀನಾದ ಹುಬೇ ಪ್ರಾಂತ್ಯದಲ್ಲಿನ ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಆದರೆ ,ನಿಧಾನಕ್ಕೆ ಜನರು ಮನೆಗಳಿಂದ ಹೊರ ಬಂದು ಕೆಲಸ ಕಾರ್ಯಗಳತ್ತ ಮುಖ ಮಾಡಿದ್ದಾರೆ, ಕಾರ್ಖಾನೆಗಳನ್ನು ಪುನಃ ಆರಂಭಿಸಲಾಗಿದೆ.

ಸರ್ಕಾರಿ ಕಚೇರಿಗಳು, ವಿಶ್ವವಿದ್ಯಾಲಯಗಳು, ಶಾಲೆಗಳು ಮತ್ತು ಶಿಶು -ಆರೈಕೆ ಕೇಂದ್ರಗಳು ಇನ್ನೂ ಮುಚ್ಚಿವೆ. ಪ್ರಾಂತ್ಯದ ರಾಜಧಾನಿ ವುಹಾನ್ ನ ಒಳಗಡೆ ಮತ್ತು ಹೊರಗಡೆ ಪ್ರಯಾಣಿಸುವುದನ್ನು ಏಪ್ರಿಲ್ 8ರ ವರೆಗೂ ನಿರ್ಬಂಧಿಸಲಾಗಿದೆ. ಮಾರ್ಚ್ 18 ರಿಂದಲೂ ಹುಬೇ ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಚೀನಾದಲ್ಲಿ ಹುಬೇ ಹೊರತುಪಡಿಸಿ ಮಿಕ್ಕೆಲ್ಲಾ ಪ್ರಾಂತ್ಯಗಳಲ್ಲಿ ಫೆಬ್ರವರಿ ಕೊನೆಯ ವೇಳೆಗೆ ಜನರ ಓಡಾಟ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿಯೇ ಇದ್ದರೂ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿರಲಿಲ್ಲ. ಮಾರ್ಚ್ ತಿಂಗಳಿನಲ್ಲಿ ಹುಬೇ ಪ್ರಾಂತ್ಯದಲ್ಲಿ ಚಟುವಟಿಕೆಗಳು ಮತ್ತೆ ಆರಂಭಗೊಂಡಿದ್ದಾಗ್ಯೂ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು.

ಒಂದು ಪ್ರದೇಶದ ಜನಸಂಖ್ಯೆಯ ಶೇಕಡಾ 50 ರಿಂದ 70 ರಷ್ಟು ಮಂದಿ ಒಮ್ಮೆ ಸೋಂಕಿಗೆ ಒಳಗಾಗಿ ರೋಗನಿರೋಧಕ ಶಕ್ತಿಯನ್ನು ಪಡೆದುಕೊಂಡಿದ್ದಲ್ಲಿ ಈ ವೈರಾಣು ಆ ಜನಸಮೂಹದಲ್ಲಿ ಮತ್ತೆ ತಲೆ ಎತ್ತಲು ಕಷ್ಟಸಾಧ್ಯವಾಗುತ್ತದೆ ಎನ್ನುತ್ತಾರೆ ಲೀಯುಂಗ್ವು . ಹಾನ್ ನಗರದಲ್ಲಿ 81,000 ಸಾವಿರ ಜನರಿಗೆ ಈ ಸೋಂಕು ಹರಡಿತ್ತು. ಅವರೆಲ್ಲರೂ ಈಗ ಕೋವಿಡ್-19 ಖಾಯಿಲೆಗೆ ರೋಗನಿರೋಧಕ ಶಕ್ತಿ ಹೊಂದಿದ್ದಾರೆ. ಆದರೆ, ಶೇಕಡಾ 10ಕ್ಕಿಂತಲೂ ಕಡಿಮೆ ಸಂಖ್ಯೆಯ ಜನರು ಅಂದರೆ ಗಣನೀಯ ಸಂಖ್ಯೆಯ ಜನರಿಗೆ ಈಗಲೂ ಸೋಂಕು ತಗುಲುವುದಿಲ್ಲ ಎನ್ನಲು ಹೇಳಲಾಗದು ಎಂಬುದು ಅವರ ಅಭಿಪ್ರಾಯ.

ಈ ಖಾಯಿಲೆಗೆ ಲಸಿಕೆಯಿದ್ದರೆ ಅದು ರೋಗನಿರೋಧಕ ಶಕ್ತಿಯಿರುವ ಜನರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆದರೆ ಸಧ್ಯ ಕನಿಷ್ಠ ಒಂದು ವರ್ಷದ ವರೆಗಂತೂ ಅಂತ ಲಸಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. “ಈ ಅಂಕಿ ಸಂಖ್ಯೆಗಳು ನಮಗೆ ಬಿಡುಗಡೆಯ ನಿಟ್ಟುಸಿರು ಬಿಡಲೂ ಅವಕಾಶ ನೀಡುವುದಿಲ್ಲ” ಎನ್ನುತ್ತಾರೆ ಲೀಯುಂಗ್.

ಈ ಹೊತ್ತಿಗೂ ಚೀನಾವು ಕೋವಿಡ್ -19 ಸೋಂಕು ಖಾಯಿಲೆಯ ಮೇಲೆ ನಿಗಾ ವಹಿಸುತ್ತಿದೆ. ಇಲ್ಲಿನ ಪ್ರಾಂತ್ಯಗಳಲ್ಲಿ ಎಲ್ಲಾ ವಸತಿಗರಿಗೆ ಒಂದೊಂದು QR ಕೋಡ್ ನೀಡಲಾಗಿದೆ, ಇದನ್ನು ಸ್ಕ್ಯಾನ್ ಮಾಡಿದಾಗ ಆ ವ್ಯಕ್ತಿಯ ಆರೋಗ್ಯ ವಿವರಗಳು, ಅವನ ಪ್ರಯಾಣದ ವಿವರಗಳೆಲ್ಲಾ ತಿಳಿಯುತ್ತವೆ. ವ್ಯಕ್ತಿಯೊಬ್ಬ ಚೀನಾದ ಸುರಕ್ಷಿತ ಎನ್ನಲಾದ ಪ್ರದೇಶಗಳಲ್ಲಿ ಇದ್ದರೆ ಅಥವಾ ಕ್ವಾರಂಟೀನ್ ನಲ್ಲಿ ಇರಿಸಲಾಗಿದ್ದು ಖಾಯಿಲೆಗೆ ನೆಗೆಟಿವ್ ಎಂದು ಕಂಡು ಬಂದಿದ್ದಲ್ಲಿ ಅಂತವರಿಗೆ “ಹಸಿರು ಸ್ಟೇಟಸ್” ನೀಡಲಾಗುತ್ತದೆ. ಇದನ್ನು ವ್ಯಕ್ತಿಯೊಬ್ಬ ಪಡೆದರೆ “ತೊಂದರೆ ಇಲ್ಲ”ಎಂದು ಪರಿಗಣಿಸಲಾಗುತ್ತದೆ. ಅಂತವರಿಗೆ ಪ್ರಾಂತ್ಯದ ಗಡಿ ದಾಟಲು, ಆಸ್ಪತ್ರೆಗಳಿಗೆ ಮತ್ತು ವಸತಿ ಪ್ರದೇಶಗಳಿಗೆ ಹೋಗಲು ಅನುಮತಿಸಲಾಗುತ್ತದೆ.

ಈ ರೀತಿಯಲ್ಲಿ ಸೋಂಕಿತ ವ್ಯಕ್ತಿ ಇತರರೊಂದಿಗೆ ಬೆರೆಯುವುದನ್ನು ತಡೆಯಬಹುದು. ಇದಷ್ಟೇ ಅಲ್ಲದೇ ಹೊಸ ಪ್ರಕರಣ ಪತ್ತೆಯಾದಲ್ಲಿ ಸರ್ಕಾರವು ಆ ವ್ಯಕ್ತಿಯ ಚಲವನಲನಗಳನ್ನು ಕೂಡಲೇ ಕಂಡುಹಿಡಿದು ಆ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ ಜನರನ್ನೂ ಕಂಡುಹಿಡಿಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.