ETV Bharat / bharat

ಬಿಹಾರದಲ್ಲಿ ಬಿಜೆಪಿ ಸರ್ಕಾರ ಬರುವುದು ಎಲ್​​ಜೆಪಿಗೆ ಇಷ್ಟವಿಲ್ಲ: ಸುಶೀಲ್​ ಮೋದಿ!

author img

By

Published : Oct 16, 2020, 3:54 PM IST

ಬಿಹಾರ ಚುನಾವಣೆ ಇದೀಗ ಮತ್ತಷ್ಟು ಬಿರುಸುಗೊಂಡಿದ್ದು, ವಿವಿಧ ಪಕ್ಷಗಳ ಮೇಲೆ ಟೀಕಾಪ್ರಹಾರ ಜೋರಾಗಿದೆ.

Sushil Modi
Sushil Modi

ಪಾಟ್ನಾ(ಬಿಹಾರ): ಬಿಹಾರ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗಾಗಲೇ ಎಲ್ಲ ಪಕ್ಷದ ಮುಖಂಡರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರದ ಚುನಾವಣಾ ಪ್ರಚಾರ ನಡೆಸುತ್ತಿವೆ. ಬಿಜೆಪಿ - ಜೆಡಿಯು ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ.

ಆದರೆ, ಈ ಸಲದ ಚುನಾವಣೆಯಲ್ಲಿ ಎಲ್​​ಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿದೆ. ಇದೇ ವಿಚಾರವಾಗಿ ಮಾತನಾಡಿರುವ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ, ಲೋಕ್​ ಜನಶಕ್ತಿ ಪಕ್ಷಕ್ಕೆ ಬಿಜೆಪಿ ಬಿಹಾರದಲ್ಲಿ ಆಡಳಿತ ನಡೆಸುವುದು ಇಷ್ಟವಿಲ್ಲ. ನಾವು ನೀಡಲು ಸಿದ್ಧರಿರುವುದಕ್ಕಿಂತ ಹೆಚ್ಚಿನ ಸ್ಥಾನ ಅದು ಕೇಳಿದ್ದರಿಂದ ಎನ್​ಡಿಎ ಮೈತ್ರಿ ತೊರೆದಿದೆ ಎಂದಿದ್ದಾರೆ.

ಎಲ್​​ಜೆಪಿ ಮತ ವಿಭಜಕ ಪಕ್ಷವಾಗಿದೆ. ಅದಕ್ಕೆ ಬಿಹಾರದಲ್ಲಿ ಬಿಜೆಪಿ ಆಡಳಿತ ನಡೆಸುವುದು ಇಷ್ಟವಿಲ್ಲ. ಬಿಹಾರದಲ್ಲಿ ಮುಖ್ಯಮಂತ್ರಿಯಾಗಿರುವ ನಿತೀಶ್​ ಕುಮಾರ್​ ಅವರನ್ನ ಎಲ್​​ಜೆಪಿ ವಿರೋಧಿಸುತ್ತದೆ. ಆದರೆ, ಮತ್ತೊಂದು ಕಡೆ ಪ್ರಧಾನಿ ಮೋದಿ ಅವರನ್ನ ಹೊಗಳುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬಿಹಾರದ 243 ಕ್ಷೇತ್ರಗಳ ಚುನಾವಣೆ ಅಕ್ಟೋಬರ್​ 28, ನವೆಂಬರ್​ 3ಮತ್ತು 7ರಂದು ಮೂರು ಹಂತಗಳಲ್ಲಿ ನಡೆಯಲಿದೆ. ಇದಕ್ಕಾಗಿ ಬಿಜೆಪಿ - ಜೆಡಿಯು ಮೈತ್ರಿ ಮಾಡಿಕೊಂಡಿದ್ದರೆ, ಕಾಂಗ್ರೆಸ್​-ಆರ್​ಜೆಡಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.