ETV Bharat / bharat

78 ವರ್ಷ ಕಲಿಸದ ಪಾಠ ಲಾಕ್​ಡೌನ್​ ಕಲಿಸಿದೆ: ಬಿಗ್​ ಬಿ ಹೀಗೆ ಹೇಳಿದ್ದೇಕೆ? - Amitabh Bachchan on lockdown

ಬಾಲಿವುಡ್ ನಟ​ ಬಿಗ್​ ಬಿ ಅಮಿತಾಬ್ ಬಚ್ಚನ್ ಅವರು ಟ್ವಿಟ್ಟರ್​ನಲ್ಲಿ, ತಾವು 78 ವರ್ಷಗಳಲ್ಲಿ ಕಲಿತಿದ್ದಕ್ಕಿಂತಲೂ ಹೆಚ್ಚು ಜೀವನ ಪಾಠವನ್ನು ಈ ಲಾಕ್​ಡೌನ್ ಸಮಯದಲ್ಲಿ ಕಲಿತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Learnt more amid lockdown that in 78 years: Amitabh Bachchan
78 ವರ್ಷ ಕಲಿಯದ ಪಾಠ ಲಾಕ್​ಡೌನ್​ ಕಲಿಸಿತು: ಬಿಗ್​ ಬಿ
author img

By

Published : May 31, 2020, 7:41 PM IST

Updated : May 31, 2020, 7:47 PM IST

ಮುಂಬೈ: ಬಾಲಿವುಡ್​ ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಟ್ವಿಟ್ಟರ್​ನಲ್ಲಿ '78 ವರ್ಷಗಳ ಜೀವನದಲ್ಲಿ ಕಲಿತಿದ್ದಕ್ಕಿಂತಲೂ ಹೆಚ್ಚಿನ ಜೀವನ ಪಾಠವನ್ನು ಈ ಲಾಕ್​ಡೌನ್ ಸಮಯದಲ್ಲಿ ಕಲಿತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ಲಾಕ್‌ಡೌನ್ ವೇಳೆ ನಾನು ಕಲಿತಷ್ಟು, ತಿಳಿದುಕೊಂಡಷ್ಟು, ಅರ್ಥ ಮಾಡಿಕೊಂಡಷ್ಟು 78 ವರ್ಷಗಳ ಜೀವಿತ ಅವಧಿಯಲ್ಲೇ ಕಲಿತಿಲ್ಲ. ಈ ಸಂಗತಿಯನ್ನು ಬಹಿರಂಗ ಪಡಿಸುತ್ತಿರುವುದೂ ಕೂಡ ಈ ಕಲಿಕೆಯ ಫಲಿತಾಂಶವೇ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಬಚ್ಚನ್ ಅವರು ತಮ್ಮ ಬ್ಲಾಗ್​ನಲ್ಲಿ ಲಾಕ್​ಡೌನ್ ದಿನಗಳ ಚಟುವಟಿಕೆಗಳನ್ನು, ಆಸಕ್ತಿಕರ ವಿಚಾರಗಳನ್ನು, ಕುಟುಂಬದೊಂದಿಗೆ ಕಳೆಯುತ್ತಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಮನೆಗೆಲಸಕ್ಕೆ ನಿಯೋಜಿಸಿರುವ ಸಿಬ್ಬಂದಿಗೆ ಎಲ್ಲಾ ಕೆಲಸ ಬಿಡುವ ಬದಲು ಮನೆ ಕೆಲಸದಲ್ಲಿ ಪಾಲ್ಗೊಳ್ಳುವುದನ್ನು ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ.

Last Updated : May 31, 2020, 7:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.