ನವದೆಹಲಿ: ಕೊರೊನಾ ವೈರಸ್ ಮಧ್ಯೆ ಉತ್ತಮ ಆರ್ಥಿಕ ಚಟುವಟಿಕೆಗಳನ್ನು ಮತ್ತು ಸುಧಾರಣಾ ಮಾರುಕಟ್ಟೆಯನ್ನು ಉದ್ದೇಶಪೂರ್ವಕವಾಗಿ ಸಕ್ರಿಯಗೊಳಿಸುವ ಸಲುವಾಗಿ ಕಾರ್ಮಿಕ ಕಾನೂನುಗಳಲ್ಲಿ ಮೂಲ ಬದಲಾವಣೆಗಳಿಗೆ ಕಾರಣವಾಗುವ ರಾಜ್ಯಗಳು ಹೊರಡಿಸಿರುವ ಅಧಿಸೂಚನೆಗಳು ಮತ್ತು ಸುಗ್ರೀವಾಜ್ಞೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಲಾಗಿದೆ.
ಕೇರಳದ 3 ನೇ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ನಂದಿನಿ ಪ್ರವೀಣ್ ಸಲ್ಲಿಸಿದ ಮನವಿಯಲ್ಲಿ, ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆಗಳು ಕಾರ್ಮಿಕರನ್ನು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸುವುದು. ಅವರ ಕಲ್ಯಾಣ ಮತ್ತು ಆರೋಗ್ಯ ಕ್ರಮಗಳನ್ನು ಅಮಾನತುಗೊಳಿಸುವುದು 'ಬಲವಂತದ ಕಾರ್ಮಿಕ'ಕ್ಕೆ ಕಾರಣವಾಗಿದೆ. ಇದು 14, 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಬದಲಾವಣೆಗಳು ಕೇವಲ ಜೀವನ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ ಶಾಂತಿಯುತವಾಗಿ ಒಟ್ಟುಗೂಡಿಸುವ ಹಕ್ಕು, ಒಕ್ಕೂಟಗಳನ್ನು ರಚಿಸುವ ಹಕ್ಕು, ಆರೋಗ್ಯದ ಹಕ್ಕು, ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಇತ್ಯಾದಿಗಳ ಉಲ್ಲಂಘನೆಯಾಗಿದೆ. ಆದರೆ, ಭಾರತವು ಕಾರ್ಮಿಕ ಕಾನೂನುಗಳ ಕುರಿತ ವಿವಿಧ ಅಂತಾರಾಷ್ಟ್ರೀಯ ಚೌಕಟ್ಟನ್ನು ಉಲ್ಲಂಘಿಸಿದೆ ಎಂದು ಅವರು ಇದೇ ವೇಳೆ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಕಾರ್ಮಿಕ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಆರೋಗ್ಯ ಸಚಿವಾಲಯ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಗೋವಾ, ಅಸ್ಸೋಂ, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸರ್ಕಾರವನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.