ಕೊಲ್ಲಂ (ಕೇರಳ): ಆನ್‌ಲೈನ್ ಕಲಿಕಾ ಅವಧಿಯೊಂದರಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ಸಂತೋಷದ ಸಮಯಗಳನ್ನು ಹಂಚಿಕೊಂಡರೆ, ಮೂರನೇ ತರಗತಿಯ ವಿದ್ಯಾರ್ಥಿ ಶರೋನ್ ಸಮುದ್ರ ಕರುಣೆ ತೋರಲಿ ಪ್ರಾರ್ಥಿಸುತ್ತ, ತನ್ನ ಮನೆಗೆ ಸಮುದ್ರ ಯಾವುದೇ ಹಾನಿ ಮಾಡದಿರಲಿ ಎಂದು ಆಶಿಸಿದ್ದಾನೆ.
ಇಲ್ಲಿ ಪ್ರತಿವರ್ಷ ಕಡಲ್ಕೊರೆತ ಉಂಟಾಗುತ್ತಿದ್ದು, ಇಲ್ಲಿನ ರಸ್ತೆಯ ಅರ್ಧದಷ್ಟು ಭಾಗವನ್ನು ಈಗಾಗಲೇ ಸಮುದ್ರ ಕೊಚ್ಚಿಕೊಂಡು ಹೋಗಿದೆ. ಈ ಬಾರಿ ಯಾವುದೇ ಸಮಸ್ಯೆಯಾಗದಿರಲಿ ಎಂದು ಪುಟ್ಟ ಬಾಲಕ ಪ್ರಾರ್ಥಿಸುತ್ತಿದ್ದಾನೆ.
ತನ್ನ ಮನೆಯಲ್ಲಿಯೇ ಆನ್‌ಲೈನ್ ತರಗತಿಗೆ ಹಾಜರಾಗುತ್ತಿರುವ ಶರೋನ್, ’’ಸಮುದ್ರದಿಂದ ಮನೆಗೆ ಹಾನಿಯಾಗದಿದ್ದರೆ ಮಾತ್ರ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗಬಹುದು’’ ಎಂದು ಹೇಳಿದ್ದಾನೆ.