ETV Bharat / bharat

ರಾಹುಲ್​ ಗಾಂಧಿಯನ್ನ ಏಕೆ ಆಯ್ಕೆ ಮಾಡಿದ್ರಿ.. ಕೇರಳಿಗರಿಗೆ ಗುಹಾ ಪ್ರಶ್ನೆ - ರಾಮಚಂದ್ರ ಗುಹಾ

2024ರಲ್ಲಿ ಮತ್ತೆ ರಾಹುಲ್ ಗಾಂಧಿಯನ್ನ ಆಯ್ಕೆ ಮಾಡಿದರೆ ನೀವು ನರೇಂದ್ರ ಮೋದಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.

Ramachandra Guha on Rahul Gandhi,ರಾಹುಲ್ ಗಾಂಧಿ ಬಗ್ಗೆ ರಾಮಚಂದ್ರ ಗುಹಾ ಹೇಳಿಕೆ
ರಾಮಚಂದ್ರ ಗುಹಾ
author img

By

Published : Jan 18, 2020, 8:34 AM IST

ಕೋಯಿಕ್ಕೋಡ್(ಕೇರಳ): ನೀವೆಲ್ಲ ಏಕೆ ರಾಹುಲ್ ಗಾಂಧಿಯನ್ನ ಸಂಸತ್​ಗೆ ಆಯ್ಕೆ ಮಾಡಿದ್ರಿ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಕೇರಳ ಜನರನ್ನ ಪ್ರಶ್ನೆಮಾಡಿದ್ದಾರೆ.

ರಾಮಚಂದ್ರ ಗುಹಾ, ಇತಿಹಾಸಕಾರ

ಕೋಯಿಕ್ಕೋಡ್​ನಲ್ಲಿ ನಡೆದೆ ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನೀವೆಲ್ಲ ಏಕೆ ರಾಹುಲ್ ಗಾಂಧಿಯನ್ನ ಸಂಸತ್​ಗೆ ಆಯ್ಕೆ ಮಾಡಿದ್ರಿ. ರಾಹುಲ್ ವಿರುದ್ಧ ನಾನು ಆರೋಪ ಮಾಡುತ್ತಿಲ್ಲ, ಅವರೊಬ್ಬ ಸಭ್ಯ ಸಹೋದ್ಯೋಗಿ, ಬಹಳ ಉತ್ತಮ ಸ್ವಭಾವದವರು. ಆದರೆ ಯುವ ಭಾರತವು ಐದನೇ ತಲೆಮಾರಿನ ರಾಜವಂಶವನ್ನು ಬಯಸುವುದಿಲ್ಲ ಎಂದಿದ್ದಾರೆ.

2024ರಲ್ಲಿ ಮತ್ತೆ ರಾಹುಲ್ ಗಾಂಧಿಯನ್ನ ಆಯ್ಕೆ ಮಾಡಿದರೆ ನೀವು ನರೇಂದ್ರ ಮೋದಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಏಕೆಂದರೆ ನರೇಂದ್ರ ಮೋದಿಗಿರುವ ದೊಡ್ಡ ಅನುಕೂಲವೆಂದರೆ ಅವರು ರಾಹುಲ್ ಗಾಂಧಿ ಅಲ್ಲ ಎಂದಿದ್ದಾರೆ.

ನರೇಂದ್ರ ಮೋದಿ ಸ್ವಯಂ ಬೆಳವಣಿಗೆ ಕಂಡ ನಾಯಕ. 15 ವರ್ಷಗಳ ಕಾಲ ರಾಜ್ಯವನ್ನು ನಡೆಸಿದ್ದಾರೆ, ಅವರಿಗೆ ಆಡಳಿತಾತ್ಮಕ ಅನುಭವವಿದೆ. ಅವರು ನಂಬಲಾಗದಷ್ಟು ಶ್ರಮಿಸುತ್ತಿದ್ದು, ಯುರೋಪಿನಲ್ಲಿ ರಜಾ ತೆಗೆದುಕೊಳ್ಳುವುದಿಲ್ಲ. ನಾನು ಇದನ್ನು ಗಂಭೀರತೆಯಿಂದ ಹೇಳುತ್ತಿದ್ದೇನೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.