ETV Bharat / bharat

ಶಿಕ್ಷಕನ ನೀಚ ಕೃತ್ಯ... 12 ವರ್ಷದ ಬಾಲಕಿ ಗರ್ಭಿಣಿ - Teacher Accused Of Rape

ಶಿಕ್ಷಕನ ನೀಚ ಕೃತ್ಯದಿಂದ 12 ವರ್ಷದ ಬಾಲಕಿ ಗರ್ಭಿಣಿ ಆಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಬಾಲಕಿಯ ಆರೋಗ್ಯ ತಪಾಸಣೆ ಮಾಡಲು ಆಸ್ಪತ್ರೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅತ್ಯಾಚಾರ
author img

By

Published : Aug 26, 2019, 1:26 AM IST

ತಿರುವನಂತಪುರಂ: 7 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಶಿಕ್ಷಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಪರಿಣಾಮ 12 ವರ್ಷದ ಬಾಲಕಿ ಗರ್ಭಿಣಿ ಆಗಿರುವ ಘಟನೆ ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 30 ವರ್ಷದ ಶಿಕ್ಷಕ ನೀಚ ಕೃತ್ಯವೆಸಗಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯಕೀಯ ತಪಾಸಣೆಗೆಂದು ಕುಟುಂಬದವರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಬಾಲಕಿ ಗರ್ಭ ಧರಿಸಿರುವುದು ಗೊತ್ತಾಗಿದೆ.

ಸತತ ಎರಡು ತಿಂಗಳಿನಿಂದ ವಿದ್ಯಾರ್ಥಿನಿ ಮೇಲೆ ಶಿಕ್ಷಕ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿದ್ದಾನೆ. ಆದರೆ ಕುಟುಂಬಕ್ಕೆ ಇದರ ಬಗ್ಗೆ ತಿಳಿದಿರಲಿಲ್ಲ. ಆದ್ರೆ ಆರೋಗ್ಯ ತಪಾಸಣೆಗಾಗಿ ಮಗಳನ್ನು ಆಸ್ಪತ್ರೆಗೆ ಕರೆತಂದಾಗ ಗರ್ಭಿಣಿಯಾದ್ದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾದ ಶಿಕ್ಷಕನ ಮೇಲೆ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕೇಸ್​ ದಾಖಲಾಗಿದೆ. ಆರೋಪಿ ಶಿಕ್ಷಕನಿಗಾಗಿ ಪೊಲೀಸರು ಬಲೆ ಬೀಸಿ, ತನಿಖೆ ಕೈಗೊಂಡಿದ್ದಾರೆ.

Intro:Body:

rape 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.